Back

ಹಲವಾರು ವ್ಯಕ್ತಿಗಳು ಒಗ್ಗೂಡಿ ವಾಸಿಸುವಾಗ, ಅದೂ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳಲ್ಲಿ, ಅಲ್ಲಿ ಶಿಸ್ತುಕ್ರಮವಿರುವುದು ಅತ್ಯವಶ್ಯ. ಈ ಶಿಸ್ತುಕ್ರಮವು ರಚನಾತ್ಮಕವೇ ಹೊರತು ದಮನಕಾರಿ ಅಲ್ಲ. ಈ ರಚನಾತ್ಮಕ ಶಿಸ್ತುಕ್ರಮವು ಒಳ್ಳೆಯ ಕ್ರಮಬಧ್ಧ ಹಾಗೂ ಯಶಸ್ವೀ ಜೀವನಕ್ಕೆ ಬೇಕಾಗಿರುವ ಸ್ವಯಂ-ಶಿಸ್ತನ್ನು ಕಾರ್ಯತಃ ಅಭ್ಯಾಸ ಮಾಡಿಕೊಳ್ಳುತ್ತ ತಮ್ಮಲ್ಲಿ ಅದನ್ನು ಅಭಿವೃಧ್ಧಿ ಪಡಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿಸುತ್ತದೆ. ಸಂತ ಫಿಲೋಮಿನ ಕಾಲೇಜಿನ ಪ್ರತಿ ಒಬ್ಬ ವಿದ್ಯಾರ್ಥಿಯ ಅನುಕೂಲಕ್ಕಾಗಿ ತನ್ನ ಎಲ್ಲಾ ವಿದ್ಯಾರ್ಥಿಗಳು ನಿಯಮ ಮತ್ತು ಕಟ್ಟಳೆಗಳನ್ನು ಪಾಲಿಸಬೇಕೆಂದು ಇಚ್ಛಿಸುತ್ತದೆ.
1. ಪ್ರತಿಯೊಬ್ಬ ವಿದ್ಯಾರ್ಥಿಯು ಕಾಲೇಜಿನ ಆವರಣದೊಳಗೆ ಇರುವಾಗ ತನ್ನ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿರ ಬೇಕು ಮತ್ತು ಕಾಲೇಜಿನ ಯಾವುದೇ ಸಿಬ್ಬಂದಿ ಸದಸ್ಯರು / ಅಧಿಕಾರಿಯು ಗುರುತು ಚೀಟಿಯನ್ನು ಪರಿಶೀಲಿಸಲು ಕೋರಿದಾಗ ಅದನ್ನು ತೋರಿಸಬೇಕು.
2. ತರಗತಿಗಳಿಗೆ ನಿಯಮಿತವಾಗಿ ಹಾಜರಾಗುವುದು ಕಡ್ಡಾಯವಾಗಿರುತ್ತದೆ. ವಿಶ್ವವಿದ್ಯಾಲಯದ ಕಟ್ಟಳೆಗಳ ಅನುಸಾರವಾಗಿ ಶೇಕಡ 75 ಹಾಜರಾತಿ ಹೊಂದಿರಲೇಬೇಕು. ಹಾಗಿಲ್ಲದಿದ್ದಲ್ಲಿ, ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್ ಪರೀಕ್ಷೆಗಳಿಗೆ ಹಾಜರಾಗುವಂತಿಲ್ಲ. ನಿಗದಿತ ಪಡಿಸಿರುವಷ್ಟು ಹಾಜರಾತಿ ಇಲ್ಲದೆ ಇದ್ದ ಪಕ್ಷದಲ್ಲಿ, ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಿ ನಷ್ಟವಾಗಿದ್ದ ಹಾಜರಾತಿಯನ್ನು ಸರಿಪಡಿಸುವ ಅವಕಾಶ ಇರುವುದಿಲ್ಲ.
3. ವಿದ್ಯಾರ್ಥಿಗಳು 75% ಹಾಜರಾತಿ ಹೊಂದದೆ ಇದ್ದಲ್ಲಿ ಅವರು ಯಾವುದೇ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುವುದಿಲ್ಲ. ಹಾಗೇನಾದರೂ, ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿವೇತನದ ಪ್ರಯೋಜನವನ್ನು ಪಡೆದಿದ್ದು, ಆದರೆ, ವರ್ಷದ ಕೊನೆಯಲ್ಲಿ ನಿಗದಿತ ಹಾಜರಾತಿ ಹೊಂದದೆ ಹೋದಲ್ಲಿ ವಿದ್ಯಾರ್ಥಿವೇತನವನ್ನು ಕಾಲೇಜಿಗೆ ಹಿಂದಿರುಗಿಸತಕ್ಕದ್ದು.
4. ಕಾಲೇಜಿನ ಕೆಲಸದ ವೇಳೆ ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಇರುತ್ತದೆ. ತರಗತಿಗಳ ಆರಂಭಕ್ಕೆ 5 ನಿಮಿಷಗಳ ಮುಂಚೆ ಮೊದಲನೆ ಕರೆಗಂಟೆಯನ್ನು ನೀಡಲಾಗುತ್ತದೆ. ಅದನ್ನು ಕೇಳುತ್ತಿದ್ದಂತೆ ವಿದ್ಯಾರ್ಥಿಗಳು ತ್ವರಿತವಾಗಿ ಚಲಿಸಿ ಎರಡನೆ ಕರೆಗಂಟೆ ನೀಡುವ ಮೊದಲೇ ಅವರವರ ತರಗತಿಗಳೊಳಗೆ ಹೋಗಿ ಉಪಸ್ಠಿತರಾಗತಕ್ಕದ್ದು. ಶಿಕ್ಷಕರ ಅನುಮತಿ ಇಲ್ಲದೆ ವಿದ್ಯಾರ್ಥಿಗಳು ತರಗತಿಗಳಿಂದ ಹೊರ ತೆರಳುವಂತಿಲ್ಲ.
5. ವಿದ್ಯಾರ್ಥಿಗಳು ಕಾಲನಿμÉ್ಠಯುಳ್ಳವರಾಗಿರ ತಕ್ಕದ್ದು. ಹೊತ್ತು ಮೀರಿ ಬಂದ ವಿದ್ಯಾರ್ಥಿಗಳು ಪ್ರಾಂಶುಪಾಲರ ಅಪ್ಪಣೆ ಚೀಟಿ ಇಲ್ಲದೆ ತರಗತಿಯೊಳಗೆ ಪ್ರವೇಶಿಸುವಂತಿಲ್ಲ. ಹಾಗಾಗಿ, ಯಾವುದೇ ವಿದ್ಯಾರ್ಥಿ/ವಿದ್ಯಾರ್ಥಿನಿ ನಿಯಮಿತವಾಗಿ ತರಗತಿಗಳಿಗೆ ಹೊತ್ತುಮೀರಿ ಬರುತ್ತಿದ್ದರೆ, ಅವನು / ಅವಳಿಗೆ ಮುಂದಿನ ತರಗತಿಗಳಿಗೆ ಹಾಜರಾಗಲು ಅಪ್ಪಣೆ ಇರುವುದಿಲ್ಲ.
6. ತರಗತಿಯಲ್ಲಿ ಪಾಠ ಹೇಳುವ ನಿರ್ದಿಷ್ಟ ಶಿಕ್ಷಕ/ಶಿಕ್ಷಕಿ ರಜೆಯಲ್ಲಿದ್ದರೆ, ವಿದ್ಯಾರ್ಥಿಗಳು ಕಾಲೇಜಿನ ಗ್ರಂಥಾಲಯಕ್ಕೆ ಹೋಗತಕ್ಕದ್ದು. ತರಗತಿ ನಡೆಯಬೇಕಾದ ಸಮಯದಲ್ಲಿ ಅಥವಾ ಇನ್ಯಾವುದೇ ಸಮಯ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಕಲಿಕಾಕೋಣೆಗಳ ಹತ್ತಿರದ ಪಡಸಾಲೆಗಳಲ್ಲಿ ಗುಂಪುಗೂಡುವಂತಿಲ್ಲ.
7. ಪಡಸಾಲೆಗಳು, ಸಭಾಂಗಣದ ಮೆಟ್ಟಿಲುಗಳು, ಗ್ರಂಥಾಲಯದ ಮಹಡಿ ಮೆಟ್ಟಿಲುಗಳು, ಅನಾವೃತರಂಗ ಮಂದಿರ, ತಿಂಡಿಕಟ್ಟೆಯ/ಕ್ಯಾಂಟೀನ್ ನ ಸುತ್ತಮುತ್ತಲಿನ ಜಾಗಗಳಲ್ಲಿ ಮತ್ತು ಗ್ರಂಥಾಲಯದ ವಿಭಾಗ, – ಈ ಸ್ಥಳಗಳನ್ನೆಲ್ಲಾ ನಿಶ್ಶಬ್ದ ವಲಯಗಳೆಂದು ಪರಿಗಣಿಸಲಾಗಿದ್ದು, ವಿದ್ಯಾರ್ಥಿಗಳು ಈ ನಿಶ್ಶಬ್ದ ವಲಯಗಳಲ್ಲಿ ಒಟ್ಟಾಗಿ ಸೇರಲು ಅಪ್ಪಣೆ ಇರುವುದಿಲ್ಲ.
8. ಅನುಚಿತ ನಡವಳಿಕೆ, ಅಸಭ್ಯ ವರ್ತನೆ, ಅವಿಧೇಯತೆ, ರೂಢಿಗತ ಸೋಮಾರಿತನ; ಹಿಂಸಾಚಾರ, ಗುಂಪು ಕಟ್ಟುವುದು, ತರಗತಿಗಳಲ್ಲಿ ಘರ್ಷಣೆ ಹುಟ್ಟಿಸುವುದು, ಕೆಲಸ ಕಾರ್ಯಗಳಲ್ಲಿ ಅನಿಯತವಾಗಿರುವುದು, ಅನುಚಿತ ಭಾಷೆ ಹಾಗೂ ಆಚರಣೆ, ಮಾತು ಹಾಗೂ ವರ್ತನೆಯಲ್ಲಿ ಅಶ್ಲೀಲತೆ – ಇವೆಲ್ಲದರ ಮೂಲಕ ಅಶಿಸ್ತನ್ನು ಎತ್ತಿಕಟ್ಟುವುದು ಅಥವಾ ಪ್ರಚೋದಿಸುವುದು; ಆಯುಧ ಮತ್ತು ಪಟಾಕಿ ತರುವುದು ಅಥವಾ ವಶದಲ್ಲಿಟ್ಟುಕೊಳ್ಳುವುದು; – ಇವೆಲ್ಲವನ್ನೂ ಕಾಲೇಜು ಗಂಭೀರವಾಗಿ ಪರಿಗಣಿಸುವುದರಿಂದ ವಿದ್ಯಾರ್ಥಿಗಳಿಗೆ ದಂಡ ವಿಧಿಸುವುದರ ಮೂಲಕ ಅಥವಾ ವಜಾ ಮಾಡುವುದರ ಮೂಲಕ ಶಿಕ್ಷೆ ನೀಡಬಹುದಾಗಿದೆ. ಕಾಲೇಜು ಮದ್ಯಪಾನ, ಧೂಮಪಾನ ಮತ್ತು ಮಾದಕ ವಸ್ತು ಮುಕ್ತ ಕ್ಷೇತ್ರಾವರಣವೆಂದು ಘೋಷಿಸಲ್ಪಟ್ಟಿದ್ದು, ಇದನ್ನು ಉಲ್ಲಂಘಿಸಿದವರನ್ನು ಕಾಲೇಜಿನಿಂದ ಅಮಾನತ್ತು ಗೊಳಿಸಲಾಗುತ್ತದೆ.
9. ಕಾಲೇಜಿಗೆ ಸಂಬಂಧ ಪಟ್ಟ ಸ್ವತ್ತನ್ನು, ಪೀಠೋಪಕರಣಗಳನ್ನು, ಪ್ರಯೋಗಾಲಯಗಳಿಗೆ ಸಂಬಂಧಪಟ್ಟ ಸಲಕರಣೆಗಳನ್ನು ನಾಶಗೊಳಿಸುವುದು, ಕಾಲೇಜಿನ ಗೋಡೆಗಳ ರೂಪಗೆಡಿಸುವುದು ಇವೆಲ್ಲವೂ ಗಂಭೀರವಾದ ಕಾನೂನುಬಾಹಿರ ಚಟುವಟಿಕೆಗಳೆಂದು ಪರಿಗಣಿಸಲಾಗಿರುತ್ತದೆ. ತರಗತಿಯ ಕೋಣೆಗಳನ್ನು ಶುಧ್ಧವಾಗಿ ಹಾಗೂ ಓರಣವಾಗಿ ಇಡತಕ್ಕದ್ದು. ಬೆಂಚ್ ಗಳ ಮತ್ತು ಡೆಸ್ಕ್ ಗಳ ಮೇಲೆ ಬರೆಯುವುದನ್ನು ಅಥವಾ ಚಿತ್ರಗಳನ್ನು ಬಿಡಿಸುವುದನ್ನು ಕಟ್ಟುನಿಟ್ಟಾಗಿ ನಿಬರ್ಂಧಿಸಲಾಗಿರುತ್ತದೆ.
10. ಕಾಲೇಜಿನ ಹೊರಗೆ ಅನುಚಿತ ವರ್ತನೆ ತೋರ್ಪಡಿಸಿದಲ್ಲಿ ಅದು ಕಾಲೇಜಿನ ಖ್ಯಾತಿಯ ಮೇಲೆ ದುಷ್ಪರಿಣಾಮ ಬೀರುತ್ತದಲ್ಲದೆ ವಿದ್ಯಾರ್ಥಿಗಳ ಮೇಲೂ ಪ್ರಭಾವ ಬೀರುತ್ತದೆ. ಇಂತಹ ಘಟನೆಗಳು ಸಂಭವಿಸಿದ್ದೇ ಆದರೆ, ಸೂಕ್ತ ಕ್ರಮ ತೆಗೆದುಕೊಳ್ಳುವ ಮತ್ತು ವಿದ್ಯಾರ್ಥಿ ಸಮುದಾಯದ ಹಿತಾರ್ಥಕ್ಕಾಗಿ ಅವಶ್ಯವಾದ ನಿಯಮಗಳನ್ನು ರಚಿಸಿ ಜಾರಿಗೆ ತರುವ ಹಕ್ಕನ್ನು ಕಾಲೇಜ್ ಕಾದಿರಿಸಿಕೊಂಡಿರುತ್ತದೆ.
11. ಕಾಲೇಜಿನ ಶಿಷ್ಟ ಸಂಪ್ರದಾಯಕ್ಕೆ ಅನುಗುಣವಾದ ನಡತೆಯನ್ನು ವಿದ್ಯಾರ್ಥಿಗಳಿಂದ ನಿರೀಕ್ಷಿಸಲಾಗುತ್ತದೆ. ಆ ಕಾರಣ, ವಿದ್ಯಾರ್ಥಿಗಳು ಧರಿಸುವ ಉಡುಪುಗಳು ಶುಭ್ರ ಹಾಗೂ ಸಭ್ಯವಾಗಿರತಕ್ಕದ್ದು.
12. ತರಗತಿಗಳ ಕಲಿಕಾ ಸಮಯದಲ್ಲಿ ಹೊರಾಂಗಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಸಮ್ಮತಿ ಇರುವುದಿಲ್ಲ. ವಿನೋದ ವಿಹಾರ, ಪ್ರವಾಸಗಳನ್ನು ಸಂಘಟಿಸುವಂತಿಲ್ಲ ಅಥವಾ ಪ್ರಾಂಶುಪಾಲರ ಇಲ್ಲವೆ ಕಾಲೇಜಿನ ವ್ಯವಸ್ಥಾಪಕ ಮಂಡಳಿಯ ಸುಸ್ಪಷ್ಟ ಅನುಮತಿ ಇಲ್ಲದೆ ಯಾವುದೇ ರೀತಿಯ ಚಂದಾ —ಪಾವತಿ ಮಾಡುವಂತಿಲ್ಲ.
13. ಪ್ರಾಂಶುಪಾಲರ ಮುಂಚಿತ ಅನುಮತಿ ಇಲ್ಲದೆ ವಿದ್ಯಾರ್ಥಿಗಳು ತಮ್ಮ ಹೊರಗಿನ ಗೆಳೆಯ-ಗೆಳತಿಯರನ್ನು ಕಾಲೇಜಿನ ಕ್ಷೇತ್ರಾವರಣದೊಳಗೆ ಕರೆ ತರುವಂತಿಲ್ಲ. ಕಾಲೇಜಿನ ವಿದ್ಯಾರ್ಥಿಯಾಗಿರದ ಯಾವುದೇ ವ್ಯಕ್ತಿಯು ಕಾಲೇಜಿನೊಳಗೆ ಇರುವುದನ್ನು ಕಂಡ ಕೂಡಲೇ ಕಾಲೇಜಿನ ನಿಯಮದ ಪ್ರಕಾರ ಆ ವ್ಯಕ್ತಿಯನ್ನು ಪೆÇೀಲಿಸರ ವಶಕ್ಕೆ ಹಸ್ತಾಂತರಿಸಲಾಗುತ್ತದೆ.
14. ಕುಚೇಷ್ಟೆ , ಒರಟು ಹಾಸ್ಯ, ಪುಂಡಾಟ ಇವು ವಿಚಾರಣಾರ್ಹ ಅಪರಾಧ–. ವಿದ್ಯಾರ್ಥಿಗಳು ಯಾವುದೇ ರೀತಿಯ ಹಾಗೂ ಎμÉ್ಟೀ ಕ್ಷುಲ್ಲಕವಾದ ಕುಚೇಷ್ಟೆ /ಪುಂಡಾಟ ಗಳಲ್ಲಿ ತೊಡಗಿದ್ದೇ ಆದರೆ, ಒಡನೆಯೆ ಆ ವಿದ್ಯಾರ್ಥಿ ಅಥವಾ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ವಜಾ ಮಾಡಿ ವಿಚಾರಣೆಗೆ ಗುರಿಪಡಿಸಲಾಗುತ್ತದೆ. ವಿಚಾರಣೆಯ ನಂತರ ಆ ವಿದ್ಯಾರ್ಥಿ / ವಿದ್ಯಾರ್ಥಿಗಳು ತಪ್ಪಿತಸ್ಥರೆಂದು ಸಾಬೀತಾದರೆ, ಅವರನ್ನು ಕಾಲೇಜಿನಿಂದ ಅಮಾನತ್ತು ಮಾಡಲಾಗುತ್ತದೆ.
15. ಯು ಜಿ ಸಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಅಧಿಸೂಚನೆಯ ಪ್ರಕಾರ ಕಾಲೇಜಿನ ಕ್ಷೇತ್ರಾವರಣದ ಒಳಗೆ ಮೊಬೈಲ್ ಫೆÇೀನ್ ಗಳ ಬಳಕೆಯನ್ನು ನಿಬರ್ಂಧಿಸಲಾಗಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಅನೇಕ ಪೋಷಕರು ತಾವು ಕಾಲೇಜಿನಿಂದ ಬಹಳ ದೂರದಲ್ಲಿ ವಾಸಿಸುವುದರಿಂದ ತಮ್ಮ ಮಕ್ಕಳ ಕ್ಷೇಮದ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಮಕ್ಕಳೊಂದಿಗೆ ಫೆÇೀನ್ ಮೂಲಕ ಮಾತಾಡಬೇಕೆಂದು ವಾದಿಸುತ್ತಾರೆ ಪೋಷಕರ ಆತಂಕವನ್ನು ನಾವು ಗ್ರಹಿಸಬಲ್ಲೆವಾದರೂ ಮೊಬೈಲ್ ಬಳಕೆಗಳ ಬಗ್ಗೆ ಆಗಾಗ್ಗೆ ಹೊರಡಿಸುವ ಸುತ್ತೋಲೆಗಳ ಆದೇಶಗಳಿಗೆ ನಾವು ಬಧ್ಧರಾಗಿದ್ದೇವೆ. ದಯವಿಟ್ಟು ಈ ಬಗ್ಗೆ ಮತ್ತೊಂದು ವಿಷಯವನ್ನು ಗಮನಿಸಿ – ಫೆÇೀನ್ ಬಳಕೆ ಮಾಡುವ ವಿದ್ಯಾರ್ಥಿಗಳು ಅಭ್ಯಾಸಬಲದ ಕಾರಣ ಪರೀಕ್ಷೆ ಕೊಠಡಿಗಳಿಗೂ ಫೆÇೀನ್‍ನನ್ನು ಕೊಂಡೊಯ್ಯುವ ಸಂಭವವಿದ್ದು, ಹಾಗೊಮ್ಮೆ ಆದಲ್ಲಿ, ಆ ವಿದ್ಯಾರ್ಥಿಯ ಪರೀಕ್ಷೆಯನ್ನು ರದ್ದು ಪಡಿಸಲಾಗುತ್ತದೆ. ಕಾಲೇಜಿನ ಕಛೇರಿಗೆ, ರೆಕ್ಟರ್ ಅವರಿಗೆ, ಪ್ರಾಂಶುಪಾಲರಿಗೆ ಮತ್ತು ಹಾಸ್ಟೆಲ್ ವಾರ್ಡನ್ ಅವರಿಗೆ ನೀವು ಮಾಡುವ ತುರ್ತು ಕರೆಗಳನ್ನು ದಾಖಲಿಸಿ, ಆ ತುರ್ತು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸುವೆವು ಎಂದು ನಾವು ಈ ಮೂಲಕ ಖಾತ್ರಿ ಪಡಿಸುತ್ತೇವೆ. ಹಾಗೂ, ಯಾವುದೇ ವಿದ್ಯಾರ್ಥಿಯು ಫೆÇೀನ್ ಬಳಸುತ್ತಿರುವುದನ್ನು ಗಮನಿಸಿದಲ್ಲಿ, ಆ ವಿದ್ಯಾರ್ಥಿಯಿಂದ ಫೆÇೀನನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ಅದನ್ನು ಹಿಂದಿರುಗಿಸಲಾಗುವುದಿಲ್ಲ.
16. ಮೂಲ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿರುತ್ತದೆ. ಕಾಲೇಜಿಗೆ ಪ್ರವೇಶ ದೊರಕಿದೊಡನೆ, ನಮ್ಮ ಕಾಲೇಜನ್ನು ಇತರ ಕಾಲೇಜುಗಳೊಂದಿಗೆ ಹೋಲಿಸಿ ಹೆಚ್ಚು ಸೌಕರ್ಯಗಳಿಗಾಗಿ ಒತ್ತಾಯಿಸ ಬೇಡಿ.
17. ನಾವು ಎಲ್ಲಾ ಮತಗಳನ್ನು ಹಾಗೂ ಧರ್ಮಗಳನ್ನು ಗೌರವಿಸುತ್ತೇವೆ. ಆದರೆ ಮತದ/ಧರ್ಮದ ಆಧಾರದ ಮೇಲೆ ಯಾವುದೇ ವಿಶೇಷ ಸೌಲಭ್ಯಗಳನ್ನು ಒದಗಿಸುವುದಿಲ್ಲ.
18. ಯಾವುದೇ ವಿದ್ಯಾರ್ಥಿಯು ಯಾವುದೇ ಕಾರಣಕ್ಕಾಗಿ ಕಾಲೇಜನ್ನು ಬಿಡಲು ಇಚ್ಛಿಸಿದಲ್ಲಿ ಆ ವಿದ್ಯಾರ್ಥಿಯು ಇನ್ನೂ ಉಳಿದಿರುವ ಸೆಮಿಸ್ಟರ್ ಗಳ ಶುಲ್ಕವನ್ನು ಹಾಗೂ ಕಾಲೇಜಿಗೆ ಇನ್ನೇನಾದರೂ ಸಲ್ಲಿಸತಕ್ಕ ಹಣದ ಬಾಕಿ ಇದ್ದಲ್ಲಿ, ಶುಲ್ಕದೊಂದಿಗೆ ಅದನ್ನೂ ಪಾವತಿಸಿದ ನಂತರ ವರ್ಗಾವಣೆ ಅರ್ಹತಾ ಪತ್ರವನ್ನು ನೀಡಲಾಗುವುದು.
19. ತಂದೆತಾಯಂದಿರು ಮತ್ತು ಪಾಲಕರು ಕಾಲೇಜಿಗೆ ನಿಯಮಿತವಾಗಿ ಭೇಟಿ ನೀಡಿ ತಮ್ಮ ಮಕ್ಕಳ ಆಂತರಿಕ ಮೌಲ್ಯ ನಿರ್ಣಯ ಮತ್ತು ಹಾಜರಾತಿಯ ಬಗ್ಗೆ ವಿಚಾರಿಸ ಬೇಕೆಂದು ಕೇಳಿಕೊಳ್ಳುತ್ತೇವೆ.
20. ವಿದ್ಯಾರ್ಥಿಗಳು ತಮ್ಮ ವಾಹನಗಳನ್ನು ನಿಗದಿ ಪಡಿಸಿರುವ ಸ್ಥಳದಲ್ಲಿ ಮಾತ್ರ ಇರಿಸತಕ್ಕದ್ದು.
21. ತಂದೆತಾಯಿಗಳೊಂದಿಗೆ ವಾಸಿಸದ ಅಥವಾ ಹಾಸ್ಟೆಲ್ ನಲ್ಲಿ ವಾಸಿಸದ ವಿದ್ಯಾರ್ಥಿಗಳು ಅವರ ಪ್ರಸಕ್ತ ವಾಸಸ್ಥಳಗಳ ವಿವರಣೆಯನ್ನು ಪ್ರಾಂಶುಪಾಲರಿಗೆ ತಿಳಿಸತಕ್ಕದ್ದು.
22. ಸರಕಾರದ ಕಾನೂನುಬಧ್ಧ ಆಡಳಿತ ವ್ಯವಸ್ಥೆಗೆ ವಿರುಧ್ಧವಾಗಿ ಚಳವಳಿಗಳಲ್ಲಿ ಭಾಗವಹಿಸಲು ಯಾವ ವಿದ್ಯಾರ್ಥಿಗೂ ಅನುಮತಿ ಇರುವುದಿಲ್ಲ. ಕಾಲೇಜಿನ ಕ್ಷೇತ್ರಾವರಣದ ಹೊರಗೆ ಅನುಮತಿ ಇಲ್ಲದೆ ಯಾವುದೇ ಸಂಘ ಅಥವಾ ಸಂಸ್ಥೆಗಳಲ್ಲಿ ಸದಸ್ಯತ್ವವನ್ನು ಪಡೆದಿರುವುದು ಹಾಗೂ ಸಾರ್ವಜನಿಕ ಆಂದೋಲನಗಳಲ್ಲಿ ಭಾಗವಹಿಸುವುದು ಅಪೇಕ್ಷಾರ್ಹವಲ್ಲ. ಯಾವುದೇ ಉದ್ದೇಶಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಲು ವಿದ್ಯಾರ್ಥಿಗಳಿಗೆ ಅನುಮತಿ ಇರುವುದಿಲ್ಲ.
23. ಸೆಮಿಸ್ಟರ್ ತರಗತಿಗಳನ್ನು ತೆರೆದ 2 ವಾರದೊಳಗೆ ಕಾಲೇಜು ಶುಲ್ಕಗಳನ್ನು ಪಾವತಿಸತಕ್ಕದ್ದು. ಅದರ ನಂತರ, 500 ರೂಪಾಯಿ ವಿಳಂಬ ಶುಲ್ಕವನ್ನು ಪಾವತಿಸತಕ್ಕದ್ದು. ಸೆಮಿಸ್ಟರ್ ತೆರೆದು 4 ವಾರದೊಳಗೆ ಶುಲ್ಕಗಳನ್ನು ಪಾವತಿಸದಿದ್ದಲ್ಲಿ ದಾಖಲೆ ಪುಸ್ತಕದಲ್ಲಿರುವ ಆ ವಿದ್ಯಾರ್ಥಿಯ ಹೆಸರನ್ನು ತೆಗೆದು ಹಾಕಲಾಗುತ್ತದೆ.
24. ಒಮ್ಮೆ ಪಾವತಿಸಿದ ಶಿಕ್ಷಣ ಶುಲ್ಕ ಹಾಗೂ ಇನ್ನಿತರ ಶುಲ್ಕಗಳನ್ನು ಮರುಪಾವತಿ ಮಾಡಲಾಗುವುದಿಲ್ಲ.
25. ಒಂದು ಅಥವಾ ಒಂದಕ್ಕೂ ಹೆಚ್ಚಿನ ವಿಷಯಗಳಲ್ಲಿ ವಿದ್ಯಾರ್ಥಿಯ ಹಾಜರಾತಿಯಲ್ಲಿ ಕೊರೆ ಇದ್ದಲ್ಲಿ ಆ ವಿದ್ಯಾರ್ಥಿಯು ಅದೇ ಸೆಮಿಸ್ಟರ್ ನ್ನು ಸಂಪೂರ್ಣವಾಗಿ ಪುನರಾವರ್ತಿಸ ಬೇಕಾಗಿರುತ್ತದೆ. ಈ ವಿದ್ಯಾರ್ಥಿಗಳು ಮುಂದಿನ ಸೆಮಿಸ್ಟರ್ ಗೆ ಪ್ರವೇಶ ಪಡೆಯುವ ಅನುಮತಿಯನ್ನು ಹೊಂದಿರುವುದಿಲ್ಲ.
26. ಶಾಶ್ವತ ನಿವಾಸ ವಿಳಾಸದ ಬದಲಾವಣೆಯನ್ನು ಕಾಲೇಜಿನ ಕಛೇರಿಗೆ ಜರೂರಾಗಿ ತಿಳಿಸತಕ್ಕದ್ದು.
27. 3ನೇ ಮತ್ತು 5ನೇ ಸೆಮಿಸ್ಟರ್ ಮಟ್ಟದಲ್ಲಿ ಹಿಂದಿನ ಎಲ್ಲಾ ಸೆಮಿಸ್ಟರ್ ಗಳ ಎಲ್ಲಾ ವಿಷಯಗಳಲ್ಲಿ ತೇರ್ಗಡೆ ಹೊಂದಿದ್ದರೆ ಮಾತ್ರ ಇತರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಪ್ರವೇಶಾತಿ ವರ್ಗಾವಣೆಗೆ ಅನುಮತಿ ಇರುತ್ತದೆ. ಅವರ ವರ್ಗವನ್ನು ಪ್ರಕಟಿಸದೆ ಅವರಿಗೆ ಅಂತಿಮ ಅಂಕಿ ಚೀಟಿಯನ್ನು ನೀಡಲಾಗುವುದು. ಈ ವಿದ್ಯಾರ್ಥಿಗಳು ಶ್ರೇಣೀಕರಣಕ್ಕೆ ಅರ್ಹರಾಗಿರುವುದಿಲ್ಲ. ಈ ವಿದ್ಯಾರ್ಥಿಗಳು ಸ್ನಾತಕ ಪದವಿಗೆ ಅನ್ವಯವಾಗುವ 6 ವರ್ಷಗಳು ಹಾಗೂ 4 ವರ್ಷಗಳ ಗರಿಷ್ಠ ಕಾಲಾವಧಿಯಲ್ಲಿ ತಮ್ಮ ಪಠ್ಯ ವಿಷಯಗಳನ್ನು ಕಲಿತು ಪೂರೈಸಿರ ಬೇಕು.
28. ಮೊದಲನೆ ಸೆಮಿಸ್ಟರ್ ಆರಂಭದ ದಿನಾಂಕದಿಂದ 4 ವಾರಗಳೊಳಗೆ ಕಾಲೇಜು ನಿಗದಿ ಪಡಿಸಿರುವ ಶುಲ್ಕವನ್ನು ಪಾವತಿಸಿದ ನಂತರ, ಭಾಷೆ/ವಿಷಯ-ನ್ನು ಬದಲಾಯಿಸಬಹುದಾದ ಐಚ್ಛಿಕ ಸ್ವಾತಂತ್ರ್ಯವನ್ನು ಒಮ್ಮೆ ಮಾತ್ರ ವಿದ್ಯಾರ್ಥಿಯು ಉಪಯೋಗಿಸ ಬಹುದು. ಯಾವುದೇ ವಿದ್ಯಾರ್ಥಿಯು ಎರಡನೆಯ ಸೆಮಿಸ್ಟರ್ ನ ಅವಧಿಯಲ್ಲಿ ದ್ವಿತೀಯ ಭಾಷೆಯನ್ನು ಬದಲಾಯಿಸಲು ಇಚ್ಛಿಸಿದಲ್ಲಿ, ಆ ವಿದ್ಯಾರ್ಥಿಯು ಅದೇ ವಿಷಯದಲ್ಲಿ ಮೊದಲನೆ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗ ಬೇಕು ಹಾಗೂ ಕಾಲೇಜು ನಿಗದಿ ಪಡಿಸಿರುವ ಶುಲ್ಕವನ್ನು ಪಾವತಿಸಿದ ನಂತರ ಬದಲಾಯಿಸ ಬಹುದು. ಆ ವಿಷಯದ ಆಂತರಿಕ ಮೌಲ್ಯೀಕರಣ ‘(ಇಂಟರ್ನಲ್ ಅಸ್ಸೆಸ್ಮೆಂಟ್)’ ಅಂಕಿಗಳನ್ನು ಕೊನೆಯ ಸೆಮಿಸ್ಟರ್ ನಲ್ಲಿ ಪಡೆದಿರುವ ಅಂಕಿಗಳ ಆಧಾರದ ಮೇಲೆ ಲೆಕ್ಕ ಮಾಡಲಾಗುತ್ತದೆ. ವಿಷಯ ಬದಲಾವಣೆಗೆ ಅನುಮತಿ ನೀಡುವಾಗ, ವಿದ್ಯಾರ್ಥಿಯು ಆ ಮುಂಚೆ ಕಲಿಯುತ್ತಿದ್ದ ವಿಷಯದ ಹಾಜರಾತಿಯನ್ನು ಗಣನೆಗೆ ತೆಗೆದುಕೊಂಡು ಪ್ರಸ್ತುತದಲ್ಲಿ ಕಲಿಯುತ್ತಿರುವ ವಿಷಯದ ಹಾಜರಾತಿಯನ್ನು ಲೆಕ್ಕ ಮಾಡಲಾಗುತ್ತದೆ.
29. ಯಾವುದೇ ಒಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಗೆ ಭಾಷೆ/ವಿಷಯ ಗಳನ್ನು ಬದಲಾಯಿಸಲು ಆಯ್ಕೆ ಇರುತ್ತದೆ. ಈ ಆಯ್ಕೆಯನ್ನು ಮೊದಲನೆ ಸೆಮಿಸ್ಟರ್ ಆರಂಭವಾದ ದಿನಾಂಕದಿಂದ 4 ವಾರಗಳೊಳಗೆ ನಿಗದಿಸಲ್ಪಟ್ಟ ಶುಲ್ಕವನ್ನು ಪಾವತಿಸಿ ಒಮ್ಮೆ ಮಾತ್ರ ಈ ಆಯ್ಕೆಯನ್ನು ಬಳಸಬಹುದು. ವಿದ್ಯಾರ್ಥಿ ಒಬ್ಬರು 2ನೇ ಸೆಮಿಸ್ಟರ್ ಅವಧಿಯಲ್ಲಿ ಕಾಲೇಜಿನಿಂದ ನಿಗದಿಸಲ್ಪಟ್ಟ ಶುಲ್ಕವನ್ನು ಪಾವತಿಸಿ ದ್ವಿತೀಯ ಭಾಷೆಯನ್ನು ಬದಲಿಸಬಹುದು. ಹೀಗೆ ಮಾಡುವ ಮೊದಲು ವಿದ್ಯಾರ್ಥಿಯು ಮೊದಲನೆ ಸೆಮಿಸ್ಟರ್/ಅರ್ಧವರ್ಷ ವ್ಯಾಸಂಗ ದ ಬದಲಾಯಿಸಿದ ದ್ವಿತೀಯ ಭಾಷೆಯ ಪರೀಕ್ಷೆಗೆ ಹಾಜರಾಗಿರತಕ್ಕದ್ದು ಎಂದಿರುವಷರತ್ತನ್ನು ಪೂರೈಸ ತಕ್ಕದ್ದು. ಈ ವಿಷಯದ ಆಂತರಿಕ ಮೌಲ್ಯೀಕರಣವನ್ನು P್ಪಡೆಯ ಸೆಮಿಸ್ಟರ್/ಅರ್ಧವರ್ಷವ್ಯಾಸಂಗ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಲೆಕ್ಕ ಮಾಡಲಾಗುತ್ತದೆ. ಯಾವ್ಯಾವಾಗ ವಿಷಯನ್ನು ಬದಲಿಸಲಾಗುವುದೋ ಆಗ, ಆ ವಿಷಯದಲ್ಲಿನ ಹಾಜರಾತಿಯನ್ನು ವಿದ್ಯಾರ್ಥಿಯು ಮುಂಚಿನ ವಿಷಯದಲ್ಲಿ ಪಡೆದಿದ್ದ ಹಾಜರಾತಿಯನ್ನು U್ಪಣನೆಗೆ ತೆಗೆದುಕಂಡು ನಿರ್ಧರಿಸಲಾಗುತ್ತದೆ.
ಯಾವುದೇ ವಿದ್ಯಾರ್ಥಿ/ವಿದ್ಯಾರ್ಥಿನಿಯು ಸೆಮಿಸ್ಟರ್ ನ ಅಚಿತ್ಯದವರೆಗೂ ಪ್ರತಿಯೊಂದು ಪಠ್ಯ ವಿಷಯದಲ್ಲಿ ನಡೆಸಲ್ಪಟ್ಟ ತರಗತಿಗಳಲ್ಲಿ ಶೇಕಡಾ 75 ಕ್ಕಿಂತ ಕಡಿಮೆ ಇಲ್ಲದಂತೆ ಹಾಜರಾತಿ ಹೊಂದಿದ್ದರೆ, ಆತ/ಆಕೆ ಅಪೇಕ್ಷಿತ ಹಾಜರಾತಿಯ ಅಗತ್ಯವನ್ನು ಪೂರೈಸಿದ್ದಾರೆಂದು U್ಪಣಿಸಲಾಗುತ್ತದೆ. ವಿದ್ಯಾರ್ಥಿ/ವಿದ್ಯಾರ್ಥಿನಿ ಒಬ್ಬರು ಕಾಲ್ಭೆಜ್/ವಿಶ್ವ ವಿದ್ಯಾಲಯ/ರಾಜ್ಯ/ರಾಷ್ಟ್ರ-, ಕ್ರೀಡೆಗಳಲ್ಲಿ, ಹಾಗೂ, ಎನ್‍ಸಿಸಿ/ ಎನ್‍ಎಸ್‍ಎಸ್/ ಸಾಂಸ್ಕೃತಿಕ ಅಥವಾ ಯಾವುದೇ ಅಧಿಕೃತ ಪ್ರಾಯೋಜಿತ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಲ್ಲಿ, ಸಂಬಂಧಪಟ್ಟ ಶಿಕ್ಷಕರ ಅನುಮೋದನೆಚಿiÀು ಆಧಾರದ ಮೇಲೆ ಆ ವಿದ್ಯಾರ್ಥಿ/ವಿದ್ಯಾರ್ಥಿನಿಯು ಪ್ರಸ್ತುತವಾಗಿ ಭಾಗವಹಿಸಿದಷ್ಟು ಗಂಟೆಗಳ ಅಥವಾ ದಿನಗಳ ಹಾಜರಾತಿಯನ್ನು ಪಡೆಯಲು ಆತನಿಗೆ/ಆಕೆಗೆ ಅನುಮತಿ ಇರುತ್ತದೆ. ವಿದ್ಯಾರ್ಥಿ/ವಿದ್ಯಾರ್ಥಿನಿ – U್ಪಣರಾಜ್ಯ ದಿನಾಚರಣೆಯಂತಹ ರಾಷ್ಟ್ರ ಮಟ್ಟದ ಘಟನೆಗಳಲ್ಲಿ ಭಾಗವಹಿಸಲು ಆಯ್ಕೆಯಾದರೆ, ಸಂಬಂಧಪಟ್ಟ ಶಿಕ್ಷಕರ ಅನುಮೋದನೆಚಿiÀು ಆಧಾರದ ಮೇಲೆ ಆತ/ಆಕೆ ತಾನು ಪ್ರಸ್ತುತವಾಗಿ ಭಾಗವಹಿಸಿದಷ್ಟು ದಿನಗಳ ಹಾಜರಾತಿಯನ್ನು ಪಡೆಯಲು ಆತನಿಗೆ/ಆಕೆಗೆ ಅನುಮತಿ ಇರುತ್ತದೆ
ವಿದ್ಯಾರ್ಥಿಗಳು ಗಮನಿಸಬೇಕಾದ ಮುಖ್ಯಾಂಶಗಳು
1. ಈ ಮೇಲೆ ವಿವರಿಸಿರುವ ನಿಯಮಗಳನ್ನು ಉಲ್ಲಂಘಿಸಿದಲ್ಲಿ ತಕ್ಷಣದಲ್ಲೇ ವಜಾ ಮಾಡಲಾಗುತ್ತದೆ ಹಾಗೂ ತಪ್ಪಿತಸüರೆಂದು ಸಾಬೀತಾದಲ್ಲಿ, ತಕ್ಕಷ್ಟು ವಿಚಾರಣೆಯ ನಂತರ ಕಾಲೇಜಿನಿಂದ ಅಮಾನತ್ತು ಗೊಳಿಸಲಾಗುತ್ತದೆ. ಕಾಲೇಜಿನ ಆವರಣದ ಹೊರಗೆ ವಿದ್ಯಾರ್ಥಿಗಳ ನಡವಳಿಕೆಗೆ ಕಾಲೇಜು ಜವಾಬ್ದಾರಿ ತೆಗೆದುಕೊಳ್ಳಲಾಗದಿದ್ದರೂ, ಯಾವುದೇ ಗಂಭೀರ ತಪ್ಪು ನಡವಳಿಕೆ/ವರ್ತನೆಗಳು ನಡೆದಿದ್ದಲ್ಲಿ ಅವನ್ನು ಗಂಭೀರವಾಗಿ ಪರಿಶೀಲಿಸುತ್ತದೆ.
2. ನಿಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸುವುದರಲ್ಲಿ ಹಾಗೂ ನಿಮ್ಮೊಳಗೆ ವಿಶಾಲ ಮನಸ್ಸಿನ ದೂರದರ್ಶಿತ್ವವನ್ನು ರೂಪಿಸುವುದರಲ್ಲಿ ನಾವು ಹಾಗೂ ನೀವು ಸಹಭಾಗಿಗಳೆಂಬುದನ್ನು ದಯವಿಟ್ಟು ಅರ್ಥೈಸಿಕೊಳ್ಳಿ.
3. ಸಂತ ಫಿಲೋಮಿನ ಕಾಲೇಜಿನ ಆದರ್ಶಗಳಿಗೆ ಅನುಗುಣವಾಗಿ ನೀವು ಬಾಳುವಿರಿ ಎಂಬ ಭರವಸೆಯಿಂದ ನಿಮ್ಮನ್ನು ನಾವು ಸ್ವಾಗತಿಸುತ್ತೇವೆ. ಶಿಕ್ಷಕ ಸಿಬ್ಬಂದಿ, ಶಿಕ್ಷಕೇತರ ಸಿಬ್ಬಂದಿ, ಕಾಲೇಜಿನ ಅಧಿಕಾರಿ ಸಿಬ್ಬಂದಿ ಇವರೆಲ್ಲರೊಂದಿಗೆ ಶಿಕ್ಷಣದ ಈ ಪ್ರಕ್ರಿಯೆಯಲ್ಲಿ ಸಹಕರಿಸ ಬೇಕೆಂದು ಕೋರುತ್ತಾ ನಿಮ್ಮನ್ನು ನಾವು ಸ್ವಾಗತಿಸುತ್ತೇವೆ.
ಗುರುತು ಚೀಟಿ
ಕಾಲೇಜಿ—ವಾಸ್ತವಿಕ ವಿದ್ಯಾರ್ಥಿಗಳಿಗೆ ಗುರುತು ಚೀಟಿಗಳನ್ನು ನೀಡಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕಾಲೇಜಿನ ಆವರಣದೊಳಗೆ ಇರುವಾಗ ತನ್ನ ಗುರುತಿನ ಚೀಟಿಯನ್ನು ಧರಿಸಿರಬೇಕು ಮತ್ತು ಕಾಲೇಜಿನ ಯಾವುದೇ ಸಿಬ್ಬಂದಿ ಸದಸ್ಯರು/ಅಧಿಕಾರಿಯು ಗುರುತುಚೀಟಿಯನ್ನು ಪರಿಶೀಲಿಸಲು ಕೋರಿದಾಗ ಅದನ್ನು ತೋರಿಸಬೇಕು.
ಕುಚೇμÉ್ಟ/ಒರಟು ಹಾಸ್ಯ/ಪುಂಡಾಟ, ಇವು ವಿZ್ಫರಣಾರ್ಹ ಅಪರಾಧ. ವಿದ್ಯಾರ್ಥಿಗಳು ಯಾವುದೇ ರೀತಿಯ ಹಾಗೂ ಎμÉ್ಟೀ ಕ್ಷುಲ್ಲಕವಾದ ಕುಚೇμÉ್ಟ/ಪುಂಡಾಟ ಗಳಲ್ಲಿ ತೊಡಗಿದ್ದೇ ಆದರೆ, ಒಡನೆಚಿiÉು ಆ ವಿದ್ಯಾರ್ಥಿ ಅಥವಾ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ವಜಾ ಮಾಡಿ ವಿಚಾರಣೆಗೆ ಗುರಿಪಡಿಸಲಾಗುತ್ತದೆ. ವಿZ್ಫರಣೆಯ ನಚಿತರ ಆ ವಿದ್ಯಾರ್ಥಿ/ವಿದ್ಯಾರ್ಥಿಗಳು ತಪ್ಪಿತಸüರೆಂದು ಸಾಬೀತಾದರೆ, ಅವರನ್ನು ಕಾಲೇಜಿನಿಂದ ಅಮಾನತ್ತು ಮಾಡಲಾಗುತ್ತದೆ.
ಗಮನಿಸಿ: ಕರ್ನಾಟಕ ಶೈಕ್ಷಣಿಕ ಅಧಿನಿಯಮ, 1983, ಭಾಗ 116: ಕುಚೇμÉ್ಟ/ಒರಟು ಹಾಸ್ಯ/ಪುಂಡಾಟ, ಈ ಕೃತ್ಯಕ್ಕೆ ದಂಡನೆ:
1. ವಿಶ್ವವಿದ್ಯಾಲಯ ಅಥವಾ ಕೇಂದ್ರ ಸರಕಾರದ ನೇರ ನಿರ್ವಹಣೆಗೆ ಒಳಪಟ್ಟಿರುವ ಸಂಸ್ಥೆ ಗಳೂ ಸೇರಿದಂತೆ, ಯಾವುದೇ ಒಂದು ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ಯಾವ ವಿದ್ಯಾರ್ಥಿಯೂ ಇತರ ವಿದ್ಯಾರ್ಥಿಗಳ ಮೇಲೆ ಕುಚೇμÉ್ಟ / ಒರಟು ಹಾಸ್ಯ/ಪುಂಡಾಟ, ಮಾಡುವಂತಿಲ್ಲ.
2. ಉಪ-ಭಾಗ (1) ನ್ನು ಉಲ್ಲಂಘಿಸಿದ ಯಾವುದೇ ವ್ಯಕ್ತಿಯು ಅಪರಾಧಿ ಎಂದು ತೀರ್ಮಾನಿಸಲ್ಪಟ್ಟಲ್ಲಿ, ಆ ವ್ಯಕ್ತಿಯು ಒಂದು ವರ್ಷದ ಅವಧಿಯ ಸೆರೆವಾಸದ ಶಿಕ್ಷೆಗೆ ಇಲ್ಲವೆ, 2 ಸಾವಿರ ರೂಪಾಯಿಗಳ ಜುಲ್ಮಾನೆಗೆ ಒಳಗಾಗ ಬಹುದು, ಅಥವಾ ಈ ಎರಡೂ ಶಿಕ್ಷೆಗಳಿಗೆ ಒಳಗಾಗ ಬಹುದು.
3. ಭಾಗ 2 (29): ಕುಚೇμÉ್ಟ/ಒರಟು ಹಾಸ್ಯ/ಪುಂಡಾಟ, ಇದರ ಅರ್ಥ- ವಿದ್ಯಾರ್ಥಿಯೊಬ್ಬರನ್ನು ಒರಟು ಹಾಸ್ಯದ ಮೂಲಕ ಅಥವಾ ಇನ್ಯಾವ ರೀತಿಯಲ್ಲಾದರೂ ಅವನ/ಅವಳ ಮಾನವೀಯ ಘನತೆಗೆ ಧಕ್ಕೆ ಯಾಗುವಂತಹ, ಅಥವಾ ಅವನ ವೈಯಕ್ತಿಕತೆಯನ್ನು ಅತಿಕ್ರಮಿಸುವಂತಹ, ಅಥವಾ ಅವನನ್ನು ಕುಚೋದ್ಯಕ್ಕೆ ಗುರಿಪಡಿಸುವಂತಹ, ಅಥವಾ ಅವನು ಕಾನೂನುಬಧ್ಧ ಕಾರ್ಯವನ್ನು ಮಾಡದಂತೆ ತಡೆಹಿಡಿಯುವುದು, ಅವನಿಗೆ ಬೆದರಿಕೆ ಹಾಕುವುದು, ನ್ಯಾಯ ಬಾಹಿರವಾಗಿ ನಿಬರ್ಂಧಿಸುವುದು, ಬಂಧಿಸಿಡುವುದು, ದಂಡಾರ್ಹ ಆಕ್ರಮಣ ಮಾಡುವುದು/ಮಾಡಿಸುವುದು, ಗಾಯವನ್ನುಂಟುಮಾಡುವುದು, ಈ ರೀತಿಯ ಕೃತ್ಯ ಗಳನ್ನು ಮಾಡುವಂತೆ ಬಲಾತ್ಕರಿಸುವುದು, ಒತ್ತಾಯಿಸುವುದು ಇಲ್ಲವೆ ಈ ವರೆಗೂ ಹೇಳಿದ ಕೃತ್ಯಗಳನ್ನು ಒಬ್ಬ ವ್ಯಕ್ತಿಯ ಮೇಲೆ ಎಸಗುವುದು.
ಈ ಕೆಳಗಿನ ಪಟ್ಟಿಯಲ್ಲಿರುವ ಶಿಕ್ಷಕವರ್ಗದವರೊಂದಿಗೆ ಸೈಂಟ್ ಫಿಲೋಮಿನಾಸ್ ಕಾಲೇಜು ’ಕುಚೇμÉ್ಟ/ಒರಟು ಹಾಸ್ಯ/ಪುಂಡಾಟ’ ನಿರೋಧಕ ಸಮಿತಿಯೊಂದನ್ನು ನೇಮಿಸಿದೆ. ಕಾಲೇಜಿನ ಆವರಣದಲ್ಲಿ / ಹಾಸ್ಟೆಲ್ ಗಳಲ್ಲಿ ಯಾವುದೇ ರೀತಿಯ ’ಕುಚೇμÉ್ಟ /ಒರಟು ಹಾಸ್ಯ/ಪುಂಡಾಟ’ ಘಟನೆ ನಡೆದರೆ/ನಡೆದಿದ್ದರೆ ವಿದ್ಯಾರ್ಥಿಗಳು ಅದನ್ನು ಈ ಸಮಿತಿಯ ಯಾವುದೇ ಒಬ್ಬ ಸದಸ್ಯರ ಗಮನಕ್ಕೆ ತರಬೇಕೆಂದು ಕೋರಲಾಗಿದೆ.
ವಂದನೀಯ ಫಾದರ್. ಬರ್ನಾರ್ಡ್ ಪ್ರಕಾಶ್ ಬಾರ್ನಿಸ್ ರೆಕ್ಟರ್ 9620542203
ವಂದನೀಯ ಫಾದರ್. ಮರಿಯ ಕ್ಷೇವಿಯರ್ 8660573310
ಬ್ರದರ್. ಮೈಕಲ್ ಡಾಲ್ಫಿ ಡಿ ಮೆಲ್ಲೊ, ವಾರ್ಡನ್, ಬಾಯ್ಸ್ ಹಾಸ್ಟೆಲ್ 9342944580
ದೈಹಿಕ ಶಿಕ್ಷಣ ಶಿಕ್ಷಕಿ. ಪೆರಿಯ ನಾಯಗಮ್ಮಾಳ್ ಎಸ್., ವಾರ್ಡನ್, ಮಹಿಳೆಯರ ಹಾಸ್ಟೆಲ್ 9008949766
ಪೆÇ್ರಫೆಸರ್. ಬಾಬು. ಪಿ. ಹೆಚ್ ಒ ಡಿ – ಮಲಯಾಳಂ 9741831619