Back

ಸಂತ ಫಿಲೋಮಿನ ಕಾಲೇಜು ಭವ್ಯ ಕಲ್ಪನೆಯಿಂದ ಪ್ರೇರಿತಗೊಂಡು, ಪ್ರತಿಯೊಬ್ಬರಿಗೂ ಅವರ ಮತ, ಧರ್ಮ, ಜಾತಿ, ನಂಬಿಕೆ, ಲಿಂಗ ಇವ್ಯಾವುದನ್ನೂ ಲೆಕ್ಕಿಸದೆ ಮೌಲ್ಯ ಆಧಾರಿತ ಶಿಕ್ಷಣವನ್ನು ಒದಗಿಸುವ ಛಲ ಮತ್ತು ಉತ್ಸಾಹ ಹೊಂದಿರುತ್ತದೆ. ಇಂತಹ ವಿಧ್ಯೆಯ ಮೂಲಕ ಪ್ರತಿಯೊಬ್ಬರ ನೈತಿಕ ಸತ್ವ ರೂಪುಗೊಳ್ಳುತ್ತದೆ, ವಿಚಾರ ಶಕ್ತಿಯು ವಿಸ್ತಾರಗೊಳ್ಳುತ್ತದೆ, ಮತ್ತು ಪ್ರತಿ ವ್ಯಕ್ತಿಯು ತನ್ನ ಕಾಲ ಮೇಲೆ ತಾನು ನಿಲ್ಲಲು ಸಶಕ್ತನಾಗುತ್ತಾನೆ/ಸಶಕ್ತಳಾಗುತ್ತಾಳೆ.
ಧ್ಯೇಯ
ಪುಸ್ತಕಗಳಿಂದμÉ್ಟೀ ಅಲ್ಲದೆ ಜೀವನದ ಅನುಭವಗಳಿಂದ ಕಲಿಯಲು ಬರುವ ಯುವಕ, ಯುವತಿಯರನ್ನು ಪರಿವರ್ತಿಸುವುದು ನಮ್ಮ ಒಂದು ಧ್ಯೇಯವಾಗಿರುತ್ತದೆ. ಕೂಡಿ ಕೆಲಸ ಮಾಡುವುದು ಹಾಗೂ ಕೂಡಿ ಆಡುವುದರಿಂದ ಅವರಲ್ಲಿ ಜೀವನ ಕೌಶಲಗಳು ನೆಲೆಗೊಳ್ಳುವುದಲ್ಲದೆ, ಇದರಿಂದ ಅವರು ಶಿಸ್ತು ಹಾಗೂ ಸಮಗ್ರತೆಯುಳ್ಳ ಒಳ್ಳೆಯ ಪ್ರಜೆಗಳಾಗುತ್ತಾರೆ.
ಪಠ್ಯಕ್ರಮಗಳಲ್ಲಿ ಪ್ರತಿಫಲಿತಗೊಂಡಿರುವ ಗುರಿಗಳು ಮತ್ತು ಉದ್ದೇಶಗಳು:
ಅಡ್ಡಿಗಳನ್ನು ಭೇದಿಸಿ, ಸರಿಸಿ ಕಾರ್ಯಾರಂಭ ಮಾಡುವ ಯಾವುದೇ ಸಮುದಾಯದ ಕಥನವು ಆ ಸಮುದಾಯದ ಮುಂದಾಳುಗಳ ಮತ್ತು ಅಸಾಧಾರಣ ವ್ಯಕ್ತಿಗಳ ಕಥಾನಕವೂ ಆಗಿರುತ್ತದೆ. ನಮ್ಮ ಸ್ಥಾಪಕರು ಧರ್ಮವಿಧಿಯ ಪ್ರಜ್ಞೆಯಿಂದ ಪ್ರೇರಿತರಾಗಿದ್ದರಿಂದ ಶಿಕ್ಷಣವು ಭವಿಷ್ಯದಲ್ಲಿ ವೃತ್ತಿ ಅವಕಾಶಗಳಿಗಾಗಿ ಮಾತ್ರ ಒಂದು ಹೂಡಿಕೆ ಆಗಿರದೆ ಆತ್ಮ ಸಾಕ್ಷಾತ್ಕಾರಕ್ಕೆ ಒಂದು ಮಾರ್ಗವೆಂದೂ ಮತ್ತು ವಿವೇಚನಾಯುಕ್ತ ಜೀವನಕ್ಕೆ ಒಂದು ಮಾರ್ಗದರ್ಶಿ ಎಂದೂ ಅವರ ನಂಬಿಕೆಯಾಗಿತ್ತು.
ಈ ಪ್ರವರ್ತಕರು ವಿಧ್ಯೆಯ ಅಡಿಪಾಯಗಳನ್ನು ಸ್ಥಾಪಿಸಿ, ಅವರ ಕೈಗಳಿಂದ ನಿರ್ಮಾಣಗೊಂಡ ಈ ಕಲಿಕೆಯ ದೇಗುಲವು ಹಲವು ವರ್ಷಗಳಿಂದ ಬೆಳೆದು, ಭಾರತ ದೇಶದ ಮೂಲೆ ಮೂಲೆಗಳಿಂದ ಹಾಗೂ ಹಲವು ಸಮುದ್ರಗಳ ಆಚೆಯಿಂದ ಕೂಡ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ. ಭಾರತದ 19 ರಾಜ್ಯಗಳಿಂದ ಭಾರತೀಯ ವಿದ್ಯಾರ್ಥಿಗಳು ನಮ್ಮಲ್ಲಿರುವುದಲ್ಲದೆ, 32 ಬೇರೆ ಬೇರೆ ರಾಷ್ಟ್ರೀಯತೆ ಹೊಂದಿರುವ ವಿದ್ಯಾರ್ಥಿಗಳೂ ಇರುವರು. ಇವರೆಲ್ಲರೂ ಒಂದಾಗಿ ಸಮ್ಮಿಳಿತ ಸಂಸ್ಕøತಿಯ ಪ್ರತೀಕವಾಗಿರುವ ನಮ್ಮ ದೇಶದ ಸಂಕ್ಷೇಪ ರೂಪವನ್ನು ಪ್ರತಿನಿಧಿಸುತ್ತಾರೆ.
ಈ ವಿದ್ಯಾರ್ಥಿಗಳು ಮೊದಲು ಸಂಪ್ರದಾಯ ಬಧ್ಧ ವಿಷಯಗಳನ್ನು ಕಲಿಯಲು ಬಂದು ನಂತರದಲ್ಲಿ ಇನ್ನೂ ಹೆಚ್ಚು ಪ್ರಚಲಿತ ಶಿಕ್ಷಣ ವಿಷಯಗಳ ಅಧ್ಯಯನ ಮಾಡುತ್ತಾರೆ. ವಿಷಯಗಳನ್ನು ಕಲಿಯುವುದರೊಂದಿಗೆ, ಅವರು ಹಾಡಲು ಹಾಗೂ ನರ್ತಿಸಲೂ ಬರುತ್ತಾರೆ. ಹಾಗೆಯೇ – ಹಾಕಿ, ಕ್ರಿಕೆಟ್, ಫುಟ್ ಬಾಲ್, ವಾಲಿ ಬಾಲ್, ಬಾಸ್ಕೆಟ್ ಬಾಲ್, ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ – ಈ ಎಲ್ಲಾ ಆಟಗಳನ್ನೂ ಆಡಲು ಬರುತ್ತಾರೆ. ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯು ಕಾಲೇಜಿನ ವಾರ್ಷಿಕ ಕ್ರೀಡಾ ಕೂಟದಲ್ಲಿ ಎಲ್ಲರ ಕಣ್ಣಿಗೆ ಕಾಣುವಂತೆ ಮುಂದೆ ಬಂದು, ಅವರಲ್ಲಿ ಕೆಲವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಕೂಟಗಳಲ್ಲಿ ನಮ್ಮ ಕಾಲೇಜನ್ನು ಪ್ರತಿನಿಧಿಸುತ್ತಾರೆ.
ಬೋಧನೆಯ ಮೂಲಕ ಜೀವನ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ನೆಲೆಗೊಳಿಸುವುದು ನಮ್ಮ ಕಾಲೇಜಿನ ಮೌಲ್ಯಾಧಾರಿತ ಶಿಕ್ಷಣದ ಉದ್ದೇಶವಾಗಿದೆ. ಎನ್ ಸಿ ಸಿ, ಎನ್ ಎಸ್ ಎಸ್, ರೋಟರಾಕ್ಟ್, ನೇಚರ್ ಕ್ಲಬ್, ಅಡ್ವೆಂಚರ್ ಕ್ಲಬ್ (ಸಾಹಸ ಕಾರ್ಯ ಕೂಟ), ಫೈನ್ ಆಟ್ರ್ಸ್ ಕ್ಲಬ್ (ಲಲಿತ ಕಲೆಗಳ ಕೂಟ), ಲಿಟ್ರರಿ ಕ್ಲಬ್ (ಸಾಹಿತ್ಯ ಕೂಟ)– ಇವುಗಳು ಸಾಮಾಜಿಕ ಜಾಗೃತಿಯನ್ನು ವರ್ಧಿಸುವುದು ಮತ್ತು ಶಿಕ್ಷಣಕ್ಕೆ ಮತ್ತೊಂದು ಆಯಾಮವನ್ನು ನೀಡುವುದು.
ವಿಚಾರ ಗೋಷ್ಟಿಗಳು, ಗುಂಪು ಚರ್ಚೆಗಳು, ಅತಿಥಿಗಳಿಂದ ಉಪನ್ಯಾಸಗಳು, ತರಗತಿ ಕಲಿಕೆ, ಸಹಪಠ್ಯ ಚಟುವಟಿಕೆಗಳು, ಇವೆಲ್ಲವೂ ಸಾಂಸ್ಕೃತಿಕ ನಕ್ಷೆಯ ಮೇಲೆ ಸಂತ ಫಿಲೋಮಿನ ಕಾಲೇಜನ್ನು ಸುಸ್ಥಿರವಾಗಿ ಸ್ಥಾಪಿಸಿವೆ. ಸಂತ ಫಿಲೋಮಿನ ಕಾಲೇಜಿನ ಸಂಘಗಳ ಹಾಗೂ ಕೂಟಗಳ ಪಟ್ಟಿಯು ಬೆಳೆಯುತ್ತಲೇ ಇದ್ದು, ಕ್ಷೇತ್ರ ಪ್ರವಾಸ ಮತ್ತು ಶೈಕ್ಷಿಣಕ ಪ್ರವಾಸಗಳು ಇನ್ನೂ ಹೆಚ್ಚು ಹೆಚ್ಚು ಹೊಸ ಅನುಭವಗಳನ್ನು ತರುತ್ತಿವೆ.
ಐ ಕ್ಯು ಎ ಸಿ (ಇಂಟರ್ನಲ್ ಕ್ವಾಲಿಟಿ ಅಶ್ಯುರೆನ್ಸ್ ಸೆಲ್)ಯು ನಾಯಕತ್ವ ಮತ್ತು ವ್ಯಕ್ತಿತ್ವ ಅಭಿವೃಧ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಸ್ಥೈರ್ಯವನ್ನು ಮತ್ತಷ್ಟು ಮೇಲಕ್ಕೆ ಏರಿಸುತ್ತಿದೆ.
ತರಗತಿಗಳಲ್ಲಿ ಬಳಸುತ್ತಿರುವ ಬೋಧನಾ ವಿಧಾನ, ಕ್ರಮಗಳ ಬಗ್ಗೆ ಹೇಳುವುದಾದರೆ, ನಾವೀನ್ಯತೆಯನ್ನು ತರಲು ಇಲ್ಲಿ ಸಂಪೂರ್ಣ ಸ್ವಾತಂತ್ರ್ಯ ವಿರುತ್ತದೆ. ದೂರ ದರ್ಶಿತ್ವವುಳ್ಳ ಹಾಗೂ ಪ್ರಗತಿಪರ ಪ್ರಾಂಶುಪಾಲರ ಉತ್ತೇಜನದಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ರೆಕ್ಕೆಗಳನ್ನು ವಿಸ್ತಾರವಾಗಿ ಹರಡುತ್ತಾ ಕಾಲೇಜಿನ ಒಳಗಿನಿಂದ ಮತ್ತು ಸಮಾಜದಿಂದ ಅವರ ಮುಂದೆ ಒದಗಿ ಬರುವ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಎದುರಿಸುತ್ತಾರೆ. ಕಾಲದೊಂದಿಗೆ ಸಂತ ಫಿಲೋಮಿನ ಕಾಲೇಜು ಬದಲಾಗುತ್ತಿದ್ದರೂ, ಅದು ತನ್ನ ಸಂಪ್ರದಾಯಗಳನ್ನು ಮತ್ತು ಮೌಲ್ಯಗಳನ್ನು ಎತ್ತಿ ಹಿಡಿದು ಮುಂದುವರಿಯುತ್ತಲೇ ಇರುವುದರಿಂದ ಈ ಕಾಲೇಜಿನ ಅಂಗಳದಿಂದ ತೇರ್ಗಡೆಯಾಗಿ ಹೊರಬಂದಿರುವವರೆಲ್ಲಾ ಈ ಕಾಲೇಜಿನ ಕುಟುಂಬಕ್ಕೆ ನಾವೆಲ್ಲರೂ ಸೇರಿದವರು ಎಂಬ ಭಾವನೆಯನ್ನು ಹೊಂದಿರುತ್ತಾರೆ.
ಭವಿಷ್ಯಕ್ಕಾಗಿ ನಮ್ಮ ದೃಷ್ಟಿ:
ಭವಿಷ್ಯತ್ಕಾಲದ ಬಗ್ಗೆ ನಮ್ಮ ದೂರದರ್ಶಿತ್ವ ಕಾಲೇಜು ಅಸ್ತಿತ್ವಕ್ಕೆ ಬಂದ ಈ 72 ವರ್ಷಗಳಲ್ಲಿ ಸೈಂಟ್ ಫಿಲೋಮಿನಾಸ್ ಕಾಲೇಜು ಮಾನವೀಯ ಮೌಲ್ಯಗಳಿಗೆ ಮತ್ತು ವಿದ್ವತ್ ಪೂರ್ಣ ಉತ್ಕೃಷ್ಟತೆಗೆ ಧೃಢಸಂಕಲ್ಪದೊಂದಿಗೆ ನಿಷ್ಠವಾಗಿದೆ. ವಿಶಾಲವಾದ ತರಗತಿ ಕೊಠಡಿಗಳು, ಅಂಗಣಗಳು, ಗ್ರಂಥಾಲಯಗಳು, ಪ್ರಯೋಗಾಲಯಗಳು, ಸಭಾಂಗಣ, ಮಲ್ಟಿಮೀಡಿಯಾ ಹಾಗೂ ವಿಡಿಯೊ ಕಾನ್ಫರೆನ್ಸ್ ಸೌಲಭ್ಯಗಳಿರುವ ಸಮಾಲೋಚನಾ ಸಭಾಂಗಣ, ಆಟದ ಮೈದಾನಗಳು, ಒಳ ಕ್ರೀಡಾಂಗಣ, ಈ ಎಲ್ಲಾ ಎಡೆಗಳಲ್ಲಿ ಕಾಲೇಜಿನ ಎಲ್ಲಾ ಚಟುವಟಿಕೆಗಳು ವ್ಯಾಪಿಸಿಕೊಂಡಿರುತ್ತವೆ.
1946 ರಲ್ಲಿ ಅತಿ ಸಾಧಾರಣ ರೀತಿಯಲ್ಲಿ ಆರಂಭವಾದ ಸಂತ ಫಿಲೋಮಿನ ಕಾಲೇಜು ಬೃಹತ್ತಾಗಿ ಬೆಳೆದಿದೆ. ಇವತ್ತಿನ ದಿನ, ಕಾಲೇಜಿನಲ್ಲಿ ವಿಜ್ಞಾನ, ಮಾನವಿಕ ವಿಷಯಗಳು (ಆಟ್ರ್ಸ್), ಉದ್ಯಮ ಆಡಳಿತ (ಬಿಸ್ ನೆಸ್ ಅಡ್ಮಿನಿಸ್ಟ್ರೇಶನ್), ಕಂಪ್ಯೂಟರ್ ಅಪ್ಲಿಕೇಶನ್ಸ್, ಸಮಾಜ ಕಾರ್ಯ, ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಟೂರಿಸಂ (ಪ್ರವಾಸೋದ್ಯಮ) ಮತ್ತು ಭಾμÉಗಳು, ಈ ಎಲ್ಲಾ ವಿಷಯಗಳೂ ಸೇರಿದಂತೆ ಒಟ್ಟು 37 ವಿಭಾಗಗಳಿವೆ. ಕಾಲೇಜು ಇವತ್ತಿನ ದಿನ 14 ಸ್ನಾತಕೋತ್ತರ ಪದವಿಗಳನ್ನು ನೀಡುತ್ತದೆ. ಒಂದು ವಿಜ್ಞಾನ ಸಂಶೋಧನಾ ಕೆಂದ್ರವನ್ನು ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ.
ತನ್ನ ಬೃಹತ್ ಕಟ್ಟಡಗಳ ಮತ್ತು ಸುಂದರವಾದ ಕ್ಶೇತ್ರಾವರಣಗಳ ಬಗ್ಗೆ ಯಾವುದೆ ಶಿಕ್ಷಣ ಸಂಸ್ಥೆಯು ಹೆಮ್ಮೆ ಪಡಬಹುದಾದರೂ, ಕಾಲೇಜಿನ ನಿಜವಾದ ಘನತೆ ಇರುವುದು ವಿದ್ಯಾರ್ಥಿಗಳ ಸಾಧನೆಗಳಲ್ಲಿ. ಸಾಮಾನ್ಯವಾಗಿ, ಕಾಲೇಜೊಂದರ ಯಶಸ್ವಿ ಕಾರ್ಯಸಾಧನೆಯನ್ನು, ಆ ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ, ಕ್ರೀಡೆಗಳಲ್ಲಿ, ಚರ್ಚಾ ಸ್ಫರ್ಧೆಗಳಲ್ಲಿ, ಅವರ ವೃತ್ತಿಪರ ಜೀವನದಲ್ಲಿ, ಈ ರೀತಿಯ ಹಲವಾರು ಕ್ಷೇತ್ರಗಳಲ್ಲಿ ಸಾಧಿಸಿರುವ ಸಾಧನೆಗಳ ಮೂಲಕ ಅಳೆಯಲಾಗುತ್ತದೆ. ಸಂತ ಫಿಲೋಮಿನ ಕಾಲೇಜಿನಲ್ಲಿ ಶಿಕ್ಷಣ ಪಡೆದು ಹೊರ ಬಂದಿರುವವರಲ್ಲಿ ಅನೇಕ ವಿಜ್ಞಾನಿಗಳು, ಕಲಾವಿದರು, ಆಡಳಿತ ಅಧಿಕಾರಿಗಳು, ವೃತ್ತಿಪರರು ಇರುವರು. ಇವರೆಲ್ಲರೂ ಅವರ ವಿದ್ಯಾಸಂಸ್ಥೆಯು ಹೊತ್ತಿಸಿದ ಕಲಿಕಾ ದೀವಿಗೆ ಹಾಗೂ ಸಾಮಾಜಿಕ ಕಳಕಳಿಯನ್ನುಎತ್ತಿ ಹಿಡಿದು ಮುನ್ನಡೆಯುತ್ತಿದ್ದಾರೆ.
ಹಿಂದಿನ ಸಾಧನೆಗಳ ಸ್ಮರಣೆಯು ಇಂದಿನ ಜನಾಂಗವನ್ನು ಶಿಕ್ಷಣ, ಸಂಶೋಧನೆ ಮತ್ತು ಸೇವೆಯಲ್ಲಿ ಮತ್ತಷ್ಟೂ ಉನ್ನತ ಮಟ್ಟವನ್ನು ಸಾಧಿಸಲು ಪ್ರಚೋದಿಸಬೇಕು.
ನಮ್ಮ ಜೀವನದ ಪ್ರತಿಯೊಂದು ಆಯಾಮಗಳ ಮೇಲೆ ಪರಿಣಾಮ ಬೀರುವಂತಹ ರೋಮಾಂಚಕ ಹಾಗೂ ಅಪೂರ್ವ ಬದಲಾವಣೆಗಳ ಹೊಸ್ತಿಲಿನ ಮೇಲೆ ನಮ್ಮ ದೇಶವು ನಿಂತಿದೆ. ಹಾಗಾಗಿ, ಬದಲಾವಣೆಯು ಸಂಸ್ಥೆಗಳನ್ನು ಮಾರ್ಪಡಿಸಲಿ ಎಂದು ಅದಕ್ಕಾಗಿ ಕಾಯುವ ಬದಲಾಗಿ ಆ ಬದಲಾವಣೆಗಳನ್ನು ಮುನ್ನಡೆಯುತ್ತಿರುವ ಪ್ರಕ್ರಿಯೆಗಳಲ್ಲಿ ಅಳವಡಿಸಿಕೊಳ್ಳುತ್ತಾ ಪೂರ್ವಭಾವಿಯಾಗಿ ಕ್ರಿಯಾಶೀಲವಾಗಿ (ಬದಲಾಗುತ್ತಿರುವ) ಕಾಲದೊಂದಿಗೆ ಹೆಜ್ಜೆಹಾಕುತ್ತಾ ಮುನ್ನಡೆಯುವುದು ಶಿಕ್ಷಣ ಸಂಸ್ಥೆಗಳಿಗೆ ಈ ಸಮಯದಲ್ಲಿ ಅತ್ಯಗತ್ಯವಾಗಿರುತ್ತದೆ. ಅದಲ್ಲದೆ, ಈ ಸವಾಲುಗಳು ಬೆಳವಣಿಗೆಗೆ ಅದೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅವಕಾಶಗಳನ್ನು ಬಿಚ್ಚಿಡುತ್ತವೆ. ಈ ಅವಕಾಶಗಳನ್ನು ಸ್ವೀಕರಿಸಲು ಸಂತ ಫಿಲೋಮಿನ ಕಾಲೇಜು ಸಿಧ್ಧವಾಗಿದೆ.
‘ಉತ್ಕೃಷ್ಟ ಕಾಲೇಜ್’ ಎಂದು ಯು ಜಿ ಸಿ ನೀಡಿರುವ ಹಣೆ ಪಟ್ಟಿಯೊಂದಿಗೆ ಸ್ವಯಮಾಧಿಕಾರದ ಕಾಲೇಜಾಗಿ ಬೆಳೆದು ಬಂದಿರುವ ಸಂತ ಫಿಲೋಮಿನ ಕಾಲೇಜು ರೋಮಾಂಚಕ ಮನೋದೃಷ್ಯಗಳನ್ನು ಎದುರು ನೋಡುತ್ತಿದೆ. – ತನ್ನದೇ ಆದ ರೀತಿಯಲ್ಲಿ ಪ್ರೇರೇಪಣಕಾರಿ ಮತ್ತು ಪ್ರಸಕ್ತ ಪಠ್ಯಕ್ರಮಗಳ ಚೌಕಟ್ಟನ್ನು ರಚಿಸುವುದು, ತನ್ನದೆ ಆದ ಪರೀಕ್ಷೆಗಳನ್ನು ನಡೆಸುವುದು, ವಿದ್ಯಾರ್ಥಿಗಳ ಒಟ್ಟಾರೆ ಮೌಲ್ಯಮಾಪನದಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಒಳಗೂಡಿಸುವುದು, ಸಮಾನಹಂತ ಮತ್ತು ಮೇಲಿನ ಹಂತಗಳ ನಡುವೆ ಚಲನಶೀಲತೆ ಇರುವಂತಹ ವಿಕೇಂದ್ರೀತ ಪಠ್ಯಕ್ರಮವನ್ನು ಅಳವಡಿಸಿ ಸಿ ಬಿ ಸಿ ಎಸ್ ಸೆಮಿಸ್ಟರ್ ವ್ಯವಸ್ಥೆಯನ್ನು ಅನುಸರಿಸುವುದು, ಸಾಮಾಜಿಕವಾಗಿ ಕಾಲೇಜನ್ನು ಮತ್ತಷ್ಟೂ ಯಥಾರ್ಥಗೊಳಿಸುವುದು, ಹಾಗೂ ‘ಫಿಲೋಮಿನೈಟ್’ ಗಳನ್ನು ಪ್ರಪಂಚದಲ್ಲಿ ತನ್ನತನವನ್ನು ಎತ್ತಿ ಹಿಡಿಯುವಂತಹ ಪುರುಷ – ಮಹಿಳೆ ಯರಾಗಿ ರೂಪಿಸುವುದು ಮತ್ತು ಸಮಾಜವನ್ನು ನಿಷ್ಕೃಷ್ಟ ಮಾದರಿಯಲ್ಲಿ ಪರಿವರ್ತಿಸುವುದು.