Back

ಪುರುಷರ ವಿದ್ಯಾರ್ಥಿ ನಿಲಯವು ಕಾಲೇಜಿನμÉ್ಟೀ ಹಳೆಯದ್ದಾಗಿರುತ್ತದೆ. ಇದು ಒಂದು ಯೋಗ್ಯ ವಸತಿಯನ್ನು ಒದಗಿಸುವುದರೊಂದಿಗೆ, ಸಹಯೋಗಿತ್ವ ಮತ್ತು ಜವಾಬ್ದಾರಿ, ಒಡಗೂಡಿಕೊಳ್ಳುವ ಭಾವನೆ ಮತ್ತು ಅನ್ಯೋನ್ಯತೆ, ಈ ಎಲ್ಲಾ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಅನುವಾಗುವಂತಹ ಹಾಗೂ ಪರಸ್ಪರ ಹಂಚಿಕೆ ಮತ್ತು ಪರಸ್ಪರ ಕಾಳಜಿಯನ್ನು ಮೈಗೂಡಿಸಿಕೊಳ್ಳುವಂತಹ ಅತ್ಯುತ್ತಮ ಹಾಗೂ ಅಹ್ಲಾದಕರ ವಾತಾವರಣವನ್ನೂ ಒದಗಿಸುತ್ತದೆ. ಪುರುಷರ ವಿದ್ಯಾರ್ಥಿ ನಿಲಯದ ವಸತಿಯು ವಾಸಿಸುವವರಲ್ಲಿ ಭ್ರಾತೃತ್ವದ ಭಾವನೆ ಬೆಳೆಯಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಲಭ್ಯವಿರುವ ಸಮಯದ ಗರಿಷ್ಠ ಬಳಕೆಗೆ ಇದು ನೆರವು ನೀಡುತ್ತದೆ.
ಹಾಸ್ಟೆಲ್ ನಲ್ಲಿ ಲಭ್ಯವಿರುವ ಸೌಕರ್ಯಗಳು
1. ಊಟದ ವ್ಯವಸ್ಥೆ –ನೈರ್ಮಲ್ಯವುಳ್ಳ ಸ್ಥಳದಲ್ಲಿ ತಯಾರಿಸಿದ ತಾಜಾ, ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ
2. ಸರ್ವೋಪಯೋಗಿ ಕೊಠಡಿ – ಈ ಕೊಠಡಿಯಲ್ಲಿ ದೂರದರ್ಶನ ಮತ್ತು ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ವೃತ್ತ ಪತ್ರಿಕೆಗಳು ಮತ್ತು ವಾರ ಪತ್ರಿಕೆ, ಮಾಸಪತ್ರಿಕೆಗಳು ಈ ಮುಂತಾದ ನಿಯತ ಕಾಲಿಕೆಗಳ (ಮ್ಯಾಗಝಿನ್) ಸಂಗ್ರಹಣೆ ಲಭ್ಯವಿರುತ್ತವೆ.
3. ಸುವ್ಯವಸ್ಥಿತ ವೇಳಾಪಟ್ಟಿ – (ಕಾಲೇಜಿನ ವೇಳಾ ಪಟ್ಟಿಯೊಂದಿಗೆ) ವಿದ್ಯಾರ್ಥಿಗಳ ದಿನಂಪ್ರತಿ ವೇಳಾಪಟ್ಟಿಯಲ್ಲಿ ಸ್ವ-ಅಧ್ಯಯನ, ಕ್ರೀಡೆ, ಮನೋರಂಜನೆ ಮತ್ತು ವಿಶ್ರಾಂತಿ ಇವೆಲ್ಲವಕ್ಕೂ ಸೂಕ್ತ ಸಮಯಗಳನ್ನು ಅಳವಡಿಸಲಾಗಿರುತ್ತದೆ.
4. ದೂರದರ್ಶನದ ಕೊಠಡಿಗಳು, ಓದಲು ಆರಾಮ ಕೊಠಡಿಗಳು, ಸ್ನೂಕರ್ ಆಟದ ಮೇಜುಗಳು, ಹಾಗೂ ಅಧ್ಯಯನಕ್ಕಾಗಿ ಪ್ರತ್ಯೇಕ ಸ್ಥಳಗಳನ್ನು ಒದಗಿಸಲಾಗಿರುತ್ತದೆ.
5. ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹಾಸ್ಟೆಲ್ ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳ ಸಾಧನ ಸಲಕರಣೆಗಳಿಂದ ಸುಸಜ್ಜಿತವಾಗಿರುತ್ತದೆ. ವ್ಯಾಯಾಮ ಶಾಲೆಯನ್ನು ಉಪಯೋಗಿಸಲು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಗುತ್ತದೆ.
6. ಲೇಖನ ಸಾಮಗ್ರಿಗಳ ಅಂಗಡಿ
7. ರಾಷ್ಟ್ರೀಕೃತ ಬ್ಯಾಂಕ್ ಮತ್ತು ಎ ಟಿ ಎಮ್ ಕೇಂದ್ರ
8. ಹಬ್ಬ ಹರಿದಿನ ಮತ್ತು ಇನ್ನಿತರ ಸಮಯ ಸಂದರ್ಭ ಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು
9. ವಿದ್ಯಾರ್ಥಿ ನಿಲಯದ ವಾರ್ಡನ್/ಮೇಲ್ವಿಚಾರಕರ ಮೂಲಕ ವಿದ್ಯಾರ್ಥಿಗಳಿಗೆ ದೂರವಾಣಿ/ಟೆಲಿಫೆÇೀನ್ ಬಳಸಲು ಅನುಕೂಲವಿರುತ್ತದೆ. ವಿದ್ಯಾರ್ಥಿ ನಿಲಯದ ಕಛೇರಿಯ ಮೂಲಕ ಪೆÇೀಷಕರು ವಿದ್ಯಾರ್ಥಿಗಳನ್ನು ಸಂಪರ್ಕಿಸ ಬಹುದು.
10. ವಿದ್ಯಾರ್ಥಿಗಳ ಯೋಗಕ್ಷೇಮವನ್ನು ನೋಡಿಕೊಳ್ಳಲೆಂದು ಗೃಹ ಸಿಬ್ಬಂದಿಗಳ ಒಂದು ತಂಡವಿರುತ್ತದೆ.
11. ವಿದ್ಯಾರ್ಥಿಗಳಿಗೆ ನಿರಂತರವಾಗಿ ರಕ್ಷಣೆ ಮತ್ತು ಮಾರ್ಗದರ್ಶನ ನೀಡಲು ಹಿರಿಯ ಶಿಕ್ಷಕರೊಬ್ಬರು ನಿವಾಸಿ ವಾರ್ಡನ್ ನಾಗಿ ಇರುತ್ತಾರೆ.