Back

ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿ        ಕ್ಲಿಕ್ ಮಾಡಿ

ಅರ್ಜಿ ಫಾರಮನ್ನು ಸ್ಪಷ್ಟವಾಗಿ ಭರ್ತಿಮಾಡಿ, ಅಭ್ಯರ್ಥಿ ಮತ್ತು ಪೋಷಕ/ಪಾಲಕರ ಸಹಿ ಮಾಡಿರತಕ್ಕದ್ದು. ಭರ್ತಿ ಮಾಡಿರುವ ಅರ್ಜಿಯ ನೊಂದಾವಣೆಗೆ ನಿಗದಿ ಪಡಿಸಿರುವ ನೊಂದಾವಣೆ ಶುಲ್ಕದೊಂದಿಗೆ ಕಾಲೇಜಿನ ಕಛೇರಿಯಲ್ಲಿ ಸಲ್ಲಿಸತಕ್ಕದ್ದು. ನೊಂದಾಯಿಸದೆ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸುವುದಿಲ್ಲ.
ಅರ್ಜಿಯೊಂದಿಗೆ ಪ್ರಿ-ಯುನಿವರ್ಸಿಟಿ  ಅಂಕಗಳ ಚೀಟಿ (ಮಾಕ್ರ್ಸ್ ಕಾರ್ಡ್), ನಡತೆಯ ಪ್ರಮಾಣ ಪತ್ರ, ವರ್ಗಾವಣೆ ಪ್ರಮಾಣ ಪತ್ರ (ಟಿ ಸಿ), ಮತ್ತು ಆಧಾರ್ ಚೀಟಿ – ಇವೆಲ್ಲದರ ನಕಲು ಪ್ರತಿಗಳನ್ನು (ಅಸಲು ಪ್ರತಿಗಳು ಅಲ್ಲ) ದಯವಿಟ್ಟು ಲಗತ್ತಿಸಿ.
ಕಛೇರಿಗೆ ನಿಮ್ಮ ಅರ್ಜಿಯನ್ನು ಸಲ್ಲಿಸುವ ಮುನ್ನ ಅರ್ಜಿ ಫಾರಮ್ ನ ಸಂಖ್ಯೆಯನ್ನು ದಯವಿಟ್ಟು ಬರೆದಿಟ್ಟುಕೊಳ್ಳಿ.
ಕಾಲೇಜಿಗೆ ಪ್ರವೇಶ ಪಡೆಯಲು ಒಂದು ನಿರ್ದಿಷ್ಟ ದಿನಾಂಕದಂದು ನಿಮ್ಮ ಪೋಷಕ/ಪಾಲಕರೊಂದಿಗೆ ನೀವು ಬರುವಂತೆ ನಿಮಗೆ ಆದೇಶ ನೀಡಲಾಗುತ್ತದೆ.
ಹೊರದೇಶದ ವಿದ್ಯಾರ್ಥಿಗಳು ತಾವು ಸಲ್ಲಿಸುವ ಅರ್ಜಿಯೊಂದಿಗೆ ತಮ್ಮ ಪಾಸ್ ಪೆÇೀರ್ಟ್ ನಲ್ಲಿ ಭರ್ತಿ ಮಾಡಲ್ಪಟ್ಟಿರುವ ಎಲ್ಲಾ ಪುಟಗಳ ನಕಲು ಪ್ರತಿಗಳನ್ನು ಹಾಗೂ (ಆಧಾರ್ ಚೀಟಿಯನ್ನು ಹೊರತು ಪಡಿಸಿ) ಮೇಲೆ ಹೇಳಿರುವ ನಕಲು ಪ್ರತಿಗಳೊಂದಿಗೆ ಸೇರಿಸಿ ಅರ್ಜಿಯನ್ನು ಸಲ್ಲಿಸತಕ್ಕದ್ದು.
ಗಮನಿಸಿ:
ಅರ್ಹತಾ ಪ್ರಮಾಣ ಪತ್ರ ಹೊರದೇಶದ ಮತ್ತು ಕರ್ನಾಟಕ ರಾಜ್ಯವನ್ನು ಬಿಟ್ಟು ಭಾರತದ ಇತರ ರಾಜ್ಯಗಳ ವಿದ್ಯಾರ್ಥಿಗಳು ತಮ್ಮ ಅರ್ಹತಾ ಪತ್ರವನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆಯತಕ್ಕದಾದರೂ ಮೈಸೂರು ವಿಶ್ವವಿದ್ಯಾಲಯದಿಂದ ಅರ್ಹತಾ ಪತ್ರವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಕಾಲೇಜು ಮಾರ್ಗ ದರ್ಶನ ಮತ್ತು ಸಹಾಯ ನೀಡುತ್ತದೆ.
ವಿದ್ಯಾರ್ಥಿ ನಿಲಯಕ್ಕೆ / ಹಾಸ್ಟೆಲ್ ಗೆ ಪ್ರವೇಶಾತಿ ಪ್ರಕ್ರಿಯೆ

ಹುಡುಗರಿಗೆ: ಸೈಂಟ್ ಫಿಲೋಮಿನಾಸ್ ಕಾಲೇಜಿನ ಆವರಣದೊಳಗಿರುವ ಹುಡುಗರ ಹಾಸ್ಟೆಲ್ ನ ವಾರ್ಡೆನ್ ಅವರನ್ನು (ಮೇಲ್ವಿಚಾರಕರನ್ನು) ಸಂಪರ್ಕಿಸಿ. ದೂರವಾಣಿ: 0821 – 2492886 (0821-2492886)
ಹುಡುಗಿಯರಿಗೆ: ಕಾಲೇಜಿನ ಆವರಣದೊಳಗಿರುವ ಮಹಿಳೆಯರ ಹಾಸ್ಟೆಲ್ ನಲ್ಲಿ ತಂಗಲು ಇಚ್ಛಿಸುವ
ವಿದ್ಯಾರ್ಥಿನೀಯರು ರೆಕ್ಟರ್ ಅವರನ್ನು ಸಂಪರ್ಕಿಸಿ. Mobile-9620542203

ಕಾಲೇಜಿನ ಆವರಣದ ಹೊರಗೆ –
1. “ಶಾಂತಲ– ಭವನ್”, #42, 1ನೇ ಮುಖ್ಯರಸ್ತೆ, ಸುಬಾಶ್ ನಗರ್, ಮೈಸೂರು – 07, ಈ ವಿಳಾಸದಲ್ಲಿ ವಾರ್ಡೆನ್ ಅವರನ್ನು ಸಂಪರ್ಕಿಸಿ. ದೂರವಾಣಿ: 0821-2498380 (0821-2498380)
2. “ಕರುಣಾ ನಿಲಯ”, ವಿದ್ಯಾನಿಕೇತನ್ ಎದುರಿಗೆ, ಬನ್ನಿಮಂಟಪ, ಮೈಸೂರು – 15, ಈ ವಿಳಾಸದಲ್ಲಿ ವಾರ್ಡೆನ್ ಅವರನ್ನು ಸಂಪರ್ಕಿಸಿ. ದೂರವಾಣಿ: 0821-2499759 (0821-2499759)
ಪ್ರವೇಶಾತಿ ಪಡೆಯುವ ದಿನದಂದು:
ಸಮಯಕ್ಕೆ ಸರಿಯಾಗಿ, ನಿಮ್ಮ ಪೋಷಕರೊಂದಿಗೆ/ಪಾಲಕರೊಂದಿಗೆ ಬರುವುದು. ಬರುವಾಗ ಎಸ್ ಎಸ್ ಎಲ್ ಸಿ, ಪಿ ಯು ಸಿ / + 2, ಇವುಗಳ ಅಂಕದ ಚೀಟಿ, ಟಿ ಸಿ, ಇವುಗಳ ಅಸಲು ಪ್ರತಿಗಳು ಹಾಗೂ ಅಂಚೆ ಚೀಟಿ ಅಳತೆಯ ನಿಮ್ಮ 2 ಛಾಯಾ ಚಿತ್ರಗಳು, ಇವೆಲ್ಲವನ್ನೂ ನಿಮ್ಮೊಂದಿಗೆ ತರತಕ್ಕದ್ದು.
ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಅವರವರ ಪೋಷಕ/ಪಾಲಕ ರೊಂದಿಗೆ ತಮ್ಮ ಕೊಠಡಿಯಲ್ಲಿ ಭೇಟಿ ಮಾಡಿ, ಕಾಲೇಜಿನ ನಿಯಮ, ಕಟ್ಟಳೆಗಳನ್ನು ವಿವರಿಸುತ್ತಾರೆ.
ಎಸ್ ಸಿ/ಎಸ್ ಟಿ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರದ ಅಸಲು ಪ್ರತಿಯ ಜೊತೆಗೆ ಧೃಢೀಕರಿಸಲ್ಪಟ್ಟಿರುವ ಅದರ 2 ಪ್ರತಿಗಳನ್ನು ತರತಕ್ಕದ್ದು. (ಎಸ್ ಸಿ/ಎಸ್ ಟಿ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದಲ್ಲಿ ಇಲಾಖೆಯಿಂದ ಅವರ ಶುಲ್ಕವನ್ನು ಮರಳಿಸಲಾಗುವುದು. ಕರ್ನಾಟಕ ಸರ್ಕಾರದ ಅಧಿಸೂಚನೆಯ ಪ್ರಕಾರ, ಎಲ್ಲಾ ರಿಯಾಯತಿ ಶುಲ್ಕಗಳು ಸರ್ಕಾರದಿಂದ ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮಾಯಿಸಲಾಗುತ್ತದೆ. ಅರ್ಹತೆಯುಳ್ಳ ವಿದ್ಯಾರ್ಥಿಗಳು ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಆಧಾರ್ ಚೀಟಿ ಮತ್ತು ಬ್ಯಾಂಕ್ ಖಾತೆಯ ಸಂಖ್ಯೆಯೊಂದಿಗೆ ಸಲ್ಲಿಸತಕ್ಕದ್ದು.
ವಿದ್ಯಾರ್ಥಿಗಳು ಪೋಷಕ/ಪಾಲಕರೊಂದಿಗೆ, ನಿಗದಿ ಪಡಿಸಿದ ದಿನಾಂಕದಂದು ನಿಗದಿ ಪಡಿಸಿದ ಸಮಯಕ್ಕೆ ಕಾಲೇಜಿಗೆ ಬರಲು ವಿಫಲರಾದರೆ, ಅಥವಾ, ಶುಲ್ಕವನ್ನು ಸಲ್ಲಿಸುವುದರಲ್ಲಿ ವಿಫಲರಾದರೆ, ಆ ವಿದ್ಯಾರ್ಥಿಯು ತಮಗೆ ದೊರೆತಿದ್ದ ಪ್ರವೇಶ ಸ್ಥಾನವನ್ನು (ಸೀಟನ್ನು) ಕಳೆದುಕೊಳ್ಳುವರು. ಮೈಸೂರಿನ ಹೊರಗಿನ ಸ್ಥಳಗಳಿಂದ ಬಂದಿರುವ ಯಾವುದೇ ವಿದ್ಯಾರ್ಥಿಯು ಸ್ಥಳೀಯ ಪಾಲಕರಿಂದ ಲಿಖಿತರೂಪದಲ್ಲಿ ತಾವು ‘ಲೋಕಲ್ ಗಾರ್ಡಿಯನ್’ ಎಂದು ಪ್ರಮಾಣೀಕರಿಸಿದ ಪತ್ರವನ್ನು ಸಲ್ಲಿಸದಿದ್ದಲ್ಲಿ, ಆ ವಿದ್ಯಾರ್ಥಿಗೆ ಕಾಲೇಜಿನೊಳಗೆ ಪ್ರವೇಶ ದೊರಕುವುದಿಲ್ಲ.
ಪ್ರವೇಶಾತಿ ಪ್ರಕ್ರಿಯೆಯ ಸಮಯದಲ್ಲಿ ನಿಮ್ಮ ಗುರುತು ಚೀಟಿಯನ್ನು ಮತ್ತು ಕಾಲೇಜಿನ ಕ್ಯಾಲೆಂಡರನ್ನು ಪಡೆಯಬಹುದು.