Back

ಬಿ. ಕಾಮ್
ಸಂಕ್ಷಿಪ್ತ ಇತಿಹಾಸ
ವಾಣಿಜ್ಯ ವಿಭಾಗವು ೧೯೬೯ರಲ್ಲಿ ಸ್ಥಾಪನೆಗೊಂಡಿತು. ಈ ವಿಭಾಗದ ಕೆಲವು ಅಗ್ರಮಾನ್ಯರನ್ನು ಇಲ್ಲಿ ಹೆಸರಿಸಲು ಇಚ್ಛಿಸುತ್ತೇವೆ –ಪ್ರೊಫೆಸರ್.ಬಾಲಸುಬ್ರಮಣ್ಯಮ್(೧೯೬೯), ಪ್ರೊಫೆಸರ್. ಕೆ.ಜಿ.ರಾಮಕ್ರಿಷ್ಣ (೧೯೭೧), ಪ್ರೊಫೆಸರ್. ಬಿ.ಆರ್.ಹರಿಣಿ (೧೯೭೨), ಪ್ರೊಫೆಸರ್.ರಾಜಗೋಪಾಲ ಶಾಸ್ತ್ರಿ(೧೯೭೩), ಪ್ರೊಫೆಸರ್. ಟಿ.ಎ.ಸುಬ್ರಮಣ್ಯ ಶೆಟ್ಟಿ, ಮತ್ತು ಪ್ರೊಫೆಸರ್. ಏಬ್ರಹಮ್ ಸೋಮ್ ಪ್ರಕಾಶ್ ಹಾಗೂ ಇನ್ನೂ ಹಲವರು ವಿಭಾಗದ ಅಭಿವೃಧ್ಧಿಯಲ್ಲಿ ಬಹು ದೊಡ್ಡ ಪಾತ್ರ ವಹಿಸಿರುವರು.
The Dept. of Management ೨೦೦೪ರಲ್ಲಿ ಸ್ಥಾಪಿತವಾಯಿತು. ಈ ವಿಭಾಗದೊಂದಿಗೆ, ವಾಣಿಜ್ಯ ವಿಭಾಗವು ಪ್ರತಿ ವರ್ಷ ಬಹು ಸಂಖ್ಯೆಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಾ ಕಾಲೇಜಿನ ಅತ್ಯಂತ ದೊಡ್ಡ ವಿಭಾಗವಾಗಿ ಬೆಳೆದಿರುತ್ತದೆ. ಪ್ರಸ್ತುತದಲ್ಲಿ, ಇಲ್ಲಿ ಬಿ.ಕಾಮ್ಪಠ್ಯಕ್ರಮದ ೩ ವಿಭಾಗಗಳು(ಸೆಕ್ಷನ್) ಹಾಗೂ ಬಿಬಿಎ, ಇದರ ೧ ವಿಭಾಗ ಇರುತ್ತವೆ. ಇದರಲ್ಲಿ ಈಗ ಉತ್ಸಾಹಿ ಹಾಗೂ ಪ್ರೇರಕರಾದ ೧೦ ಮಂದಿ ಪೂರ್ಣ ಸಮಯ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ..

ಸಾಧನೆಗಳು:
ಬಿ.ಕಾಮ್ ಮತ್ತು ಬಿಬಿಎವಿದ್ಯಾರ್ಥಿಗಳಿಗೆ, ತೆರಿಗೆ, ಬ್ಯಾಂಕಿಂಗ್, ಅಂತರ್ ರಾಷ್ಟ್ರೀಯ ವಾಣಿಜ್ಯೋದ್ಯಮಮತ್ತು E-Commerce ಮತ್ತು ಬಿಬಿಎ ಪದವಿಗೆ ಹಣಕಾಸು ನಿರ್ವಹಣೆ, ಮಾರುಕಟ್ಟೆ ನಿರ್ವಹಣೆ, ಮತ್ತು, ಮಾನವಸಂನ್ಮೂಲ ನಿರ್ವಹಣೆ,ಈ ಎಲ್ಲಾ ವಿಷಯಗಳನ್ನು ಐಚ್ಛಿಕ ಪಠ್ಯಕ್ರಮ ವಿಷಯಗಳಾಗಿ ನೀಡುತ್ತಿದೆ ಮಾನವ ಸಂಪನ್ಮೂಲ ನಿರ್ವಹಣೆ ಮಾರುಕಟ್ಟೆ ನಿರ್ವಹಣೆ, ಈ ವಿಷಯಗಳಲ್ಲಿ ಡಿಪ್ಲೊಮ ಪದವಿಯನ್ನು ಇತ್ತಿಚೆಗೆ ನೀಡಿದ್ದು, ಇನ್ನು ಮುಂದೆ ಮಾನವ ಸಂಪನ್ಮೂಲ ನಿರ್ವಹಣೆ, ವಿತ್ತೀಯ ಮಾರುಕಟ್ಟೆ, ಮತ್ತು, ಉದ್ಯಮಶೀಲತೆ ಅಭಿವೃಧ್ಧಿ, ಈ ವಿಷಯಗಳಲ್ಲಿ ಮುಕ್ತ ಡಿಪ್ಲೊಮ ಪದವಿಯನ್ನು ನೀಡಲು ವಿಭಾಗವು ಪ್ರಸ್ತಾಪಿಸಿರುತ್ತದೆ.
ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ವಿಭಾಗವು ಕಂಪೆನಿ ಕಾರ್ಯದರ್ಶಿ(ಅS) ಪಠ್ಯಕ್ರಮವನ್ನು ನೀಡುತ್ತದೆ. ಸಿ ಎಸ್ ಪಠ್ಯಕ್ರಮವನ್ನು ಕಲಿಯುತ್ತಿರುವ ವಿದ್ಯಾರ್ಥಿಗಳ ೨ನೇ ತಂಡ ಇದಾಗಿದೆ. ವಿಭಾಗವು ಚಾರ್ಟರ್ಡ್ ಅಕೌಂಟೆಂಟ್ (ಸಿ ಎ)ಪಠ್ಯಕ್ರಮವನ್ನು ಆಯ್ಕೆಮಾಡಿ ಕಲಿಯುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತದೆ. ಈಗಾಗಲೇ ಕೆಲವು ವಿದ್ಯಾರ್ಥಿಗಳು ಸಿ ಎ ಪಠ್ಯಕ್ರಮವನ್ನು ಆಯ್ಕೆ ಮಾಡಿ ಖಾಸಗಿಯಾಗಿ ಕಲಿಯುತ್ತಿದ್ದಾರೆ. ಎಸ್ ಎ ಪಿ SಂPಪಠ್ಯಕ್ರಮಕ್ಕೆ ತರಬೇತಿ ಪಡೆದಿರುವ ಕೆಲವು ಶಿಕ್ಷಕರು ವಿಭಾಗದಲ್ಲಿದ್ದಾರೆ. ಈ ತರಗತಿಗಳನ್ನು ಕಾಲೇಜಿನ ಆವರಣದಲ್ಲೆ ನಡೆಸಲಾಗುತ್ತಿದೆ.

ನಿಯಮಿತವಾಗಿ Management ಮತ್ತು ವಾಣಿಜ್ಯೋದ್ಯಮ ಉತ್ಸವಗಳನ್ನು ನಡೆಸುವುದರ ಮೂಲಕ ತಮ್ಮ ವೃತ್ತಿಗೆ ಅವಶ್ಯವಿರುವ ಕೌಶಲಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳನ್ನು ಉತ್ತೇಜಿಸಲಾಗುತ್ತದೆ. ವಿದ್ಯಾರ್ಥಿಗಳು ವೃತ್ತಿಯ ಬಗ್ಗೆ ಮಾರ್ಗದರ್ಶನ ಪಡೆಯಲು ಅತಿಥಿ ಉಪನ್ಯಾಸಗಳನ್ನು ಕಾಲ ಕಾಲಕ್ಕೆ ಸಂಯೋಜಿಸಲಾಗುತ್ತದೆ.
ವಿಭಾಗದ ತರಗತಿಗಳಲ್ಲಿ ಪ್ರಕ್ಷೇಪಕಗಳನ್ನು / ಪ್ರೊಜೆಕ್ಟರ್ ಗಳನ್ನು ಅಳವಡಿಸಲಾಗಿದ್ದು ಅವುಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚು ಪ್ರಮಾಣದಲ್ಲಿ ಬಳಸುತ್ತಾರೆ. ವಾಣಿಜ್ಯೇತರ ವಿಷಯಗಳನ್ನು ಕಲೆತು ಮುಗಿಸಿ ವಾಣಿಜ್ಯ ಪಠ್ಯಕ್ರಮವನ್ನು ಕಲಿಯಲು ಇಚ್ಛಿಸುವಂತಹ ವಿದ್ಯಾರ್ಥಿಗಳಿಗೆ ವಿಭಾಗವು bಡಿiಜge ಛಿouಡಿse ನ್ನು ನಡೆಸುತ್ತದೆ. ಮಂದಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗಾಗಿ ವಿಶೇಷ ಪರಿಹಾರ ತರಗತಿಗಳನ್ನು ನಡೆಸುವುದರ ಮೂಲಕ ವಿಭಾಗವು ಅವರ ಕಲಿಕೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತದೆ. ಉದ್ಯೋಗ ಕೋಶದೊಂದಿಗೆ ಕೆಲಸ ಮಾಡುತ್ತಾ ವಿಭಾಗವು ಕ್ಷೇತ್ರಾವರಣ ನೇಮಕಾತಿ ಯ ಬಗ್ಗೆ ಆಸಕ್ತಿ ತೆಗೆದುಕೊಳ್ಳುತ್ತದೆ. ಹೀಗಾಗಿ, ಹಲವಾರು ವಿದ್ಯಾರ್ಥಿಗಳು ಈಗಾಗಲೇ ಪ್ರಖ್ಯಾತ ಸಂಸ್ಥೆಗಳಲ್ಲಿ ನೇಮಕಾತಿ ಪಡೆದಿದ್ದಾರೆ.
“ಹಣಕಾಸಿನ ಕ್ಷೇತ್ರದಲ್ಲಿ ವೃತ್ತಿ ಅವಕಾಶಗಳು” – ಎಂಬ ವಿಷಯ ವಸ್ತುವನ್ನು ಕುರಿತು ಸಿ.ಎ.ನಂಬಿಯಾರ್ ಅವರಿಂದ ಭಾಷಣ. ಮೊದಲನೆ ವರ್ಷದಿ.ಕಾಮ್ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.
೨೦೧೬-೧೭, ಈ ಶೈಕ್ಷಣಿಕ ವರ್ಷದಲ್ಲಿ ನಮ್ಮ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಕೆಳಗಿನ ’ಕ್ಷೇತ್ರಾವರಣ ನೇಮಕಾತಿ / ಕ್ಯಾಂಪಸ್ ರೆಕ್ರ್ಯುಟ್ ಮೆಂಟ್ ನಲ್ಲಿ ಭಾಗವಹಿಸಿದ್ದರು:
೧. ಕಾನ್ಸೆಂಟ್ರಿಕ್ಸ್
೨. ಜಾರೊ ಎಜುಕೇಶನ್
೩. ಸಿಸ್ ಇನ್ ಫರ್ಮೇಶನ್ ಹೆಲ್ತ್ ಕೇರ್ ಇಂಡಿಯ ಪ್ರೈವೆಟ್ ಲಿಮಿಟೆಡ್.
೨೦೧೭ ರ ಫೆಬ್ರುವರಿ ತಿಂಗಳ ೨೨ನೇ ದಿನಾಂಕದಂದು, ಗ್ಲೋಬಲ್ ಆಪರ್ಚುನಿಟೀಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯು ಹೊರದೇಶಗಳಲ್ಲಿ ಉನ್ನತ ಅಧ್ಯಯನಕ್ಕೆ ಹೋಗಲು ಇಚ್ಛಿಸುತ್ತಿದ್ದ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ಮಾರ್ಗದರ್ಶನ ನೀಡುವ ಅಧಿವೇಶನವನ್ನು ನಡೆಸಿದ್ದರು.
ಥಾಂಪ್ಸನ್ ರಾಯ್ ಟರ್ಸ್ ಎಂಬ ಸಂಸ್ಥೆಯು ತಮ್ಮ “ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿ ಎಸ್ ಆರ್)” ಈ ಉಪಕ್ರಮದ ಅಂಗವಾಗಿ, ’ಜಿ ಟಿ ಟಿ ನ್ಯಾಸ್ ಕಾಮ್’ ಎಂಬ ಸಂಸ್ಥೆಯ ಸಹಭಾಗಿತ್ವದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉತ್ತಮ ವೃತ್ತಿ ಅವಕಾಶಗಳಿಗಾಗಿ ’ವಿತ್ತೀಯ ಮಾರುಕಟ್ಟೆಗಳು’, ಇದರ ಬಗ್ಗೆ ೧೦೦ಗಂಟೆಗಳ ಅವಧಿಯ ತರಬೇತಿಯನ್ನು ಉಚಿತವಾಗಿ ನೀಡಿದರು.
೨೦೧೭ರ ಫೆಬ್ರುವರಿ ತಿಂಗಳಲ್ಲಿ, ನಮ್ಮ ವಿದ್ಯಾರ್ಥಿಗಳು ಎಸ್. ಎ. ಪಿ. ಕುರಿತು ಗೊನೊಸ್ ಕನ್ಸಲ್ಟಿಂಗ್ ಪ್ರೈವೆಟ್ ಲಿಮಿಟೆಡ್ ನಡೆಸಿದ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.