Back

ಸಂತ ಫಿಲೋಮಿನ ಕಾಲೇಜು ವತಿಯಿಂದ ಸ್ಥಾಪಿಸಲ್ಪಟ್ಟ ಕ್ಯಾಂಟೀನ್ ಅದರ ಆರಂಭದಿಂದಲೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಾಕಷ್ಟು ವೈವಿಧ್ಯತೆ, ವ್ಯಾಪಕತೆಯುಳ್ಳ ಆಹಾರ ಪದಾರ್ಥಗಳನ್ನು ಅವುಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಾತರಿಗೊಳಿಸಿಕೊಂಡು ಶುಧ್ಧ ಸ್ಥಿತಿಯಲ್ಲಿ ಒದಗಿಸುವುದು ಕಾಲೇಜಿನ ಗುರಿಯಾಗಿರುತ್ತದೆ. ಇದೇ ಗುರಿ ಇಟ್ಟುಕೊಂಡು ಆಹಾರ/ತಿಂಡಿ ಪೆÇಟ್ಟಣಗಳನ್ನು ಮಾರುವ ಒಂದು ಕಿಯೋಸ್ಕ್ ನ್ನೂ (ಕಟೆ ಕಟೆಯನ್ನೂ) ಸ್ಥಾಪಿಸಲಾಗಿದೆ. ಈ ಕ್ಯಾಂಟೀನು ಕಾಲೇಜಿನ ಸಮಾರಂಭಗಳಿಗೂ ಆಹಾರ ಸರಬರಾಜಿನ ಸೇವೆಯನ್ನು ದಕ್ಷತೆಯಿಂದ ಒದಗಿಸುತ್ತಿದೆ. ಆಹಾರ ಪೂರೈಕೆ ನಿರ್ವಹಣೆಯಲ್ಲಿ ಒಳ್ಳೆಯ ಅನುಭವವುಳ್ಳ ವ್ಯಕ್ತಿಯೋರ್ವರು ಈ ಕ್ಯಾಂಟೀನ್‍ನನ್ನು ನಡೆಸುತ್ತಿದ್ದಾರೆ. ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೂ ಸೇರಿದಂತೆ ಈ ಕ್ಯಾಂಟಿನ್ ಗೆ ಭೇಟಿ ಕೊಡುವವರ ಅತ್ಯಧಿಕ ಸೌಕರ್ಯಕ್ಕಾಗಿ ಕ್ಯಾಂಟೀನಿನ ಗುಣಮಟ್ಟವನ್ನು ಕಾಪಾಡಲು ಕಾಲೇಜಿನ ನಿರ್ವಹಣಾ ಸಮಿತಿಯು ಸಂಪೂರ್ಣವಾಗಿ ಬಧ್ಧವಾಗಿರುತ್ತದೆ. ಕಾಲೇಜಿಗೆ ಬಹುದೂರದ ಸ್ಥಳಗಳಿಂದ ಬರುವ ವಿದ್ಯಾರ್ಥಿಗಳು ನಮ್ಮ ಕ್ಯಾಂಟೀನ್ ಗೆ ಬಂದು ತಮ್ಮ ಹಸಿವು ದಾಹಗಳನ್ನು ತಣಿಸಿಕೊಳ್ಳಲು ಇಷ್ಟ ಪಡುತ್ತಾರೆ. ಪ್ಲಾಸ್ಟಿಕ್ ರಹಿತ, ಪರಿಸರ ಸ್ನೇಹಿ ಕ್ಷೇತ್ರಾವರಣದಲ್ಲಿರುವ ಕ್ಯಾಂಟೀನ್‍ನ ಸುತ್ತ ಮುತ್ತಲಿನ ಪ್ರದೇಶವನ್ನು ಯಾವಾಗಲೂ ಸ್ವಚ್ಛವಾಗಿ ಓರಣವಾಗಿ ಇಡಲಾಗುತ್ತದೆ. ಭೋಜನ ಪ್ರಿಯರಿಗೆ ಈ ಕ್ಯಾಂಟೀನ್ ಒಂದು ವೈವಿಧ್ಯಮಯ ಎಡೆಯಾಗಿರುತ್ತದೆ.