Back

ರೂಸ ಯೋಜನೆಗಳ ಅಂಕೀಯ/ಡಿಜಿಟಲ್/ಮೊದಲಿಡುವಿಕೆ/ ಉದ್ಘಾಟನೆ
ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ರೂಸ ಯೋಜನೆಯನ್ನು ಶ್ರೀನಗರದ ಶೇರ್-ಎ ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಿಂದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೊ ಸಮ್ಮೇಳನದ ಮೂಲಕ ಡಿಜಿಟಲ್ ಮಾದ್ಯಮದಲ್ಲಿ ಉದ್ಘಾಟಿಸಿದರು. ಸೈಂಟ್ ಫಿಲೋಮಿನಾಸ್ ಕಾಲೇಜ್ ನ ಸಮ್ಮೇಳನ ಸಭಾಂಗಣದಲ್ಲಿ ಸಾಂಕೇತಿಕವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ರೂಸ ಯೋಜನೆಯ ಉದ್ಘಾಟನೆಯ ಗುರುತಾಗಿ ಫಲಕವನ್ನು ಅನಾವರಣ ಮಾಡಿದರು
ರೂಸ ಯೋಜನೆಯ ಅಡಿಯಲ್ಲಿ ಸೈಂಟ್ ಫಿಲೋಮಿನಾಸ್ ಕಾಲೇಜ್ “ಘಟಕ ೮” ಇದಕ್ಕೆ ಆಯ್ಕೆಯಾಗಿ ೫ ಕೋಟಿ ರುಪಾಯಿಗಳನ್ನು ಸ್ವೀಕರಿಸಲಿದೆ ಇದಕ್ಕೆ ತಕ್ಕ ತಯಾರಿಯನ್ನು ಕಾಲೇಜು ಸಿದ್ಧಪಡಿಸಿಕೊಂಡಿದೆ
ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ರೂತ್ ಶಾಂತಕುಮಾರಿ, ಅವರು ರೂಸ ಯೋಜನೆಯ ಕುರಿತು ಮತ್ತು ಅದರ ಕಾರ್ಯ ಯೋಜನೆಯನ್ನು ಕಾರ್ಯಗತಗೊಳಿಸುವುದರ ಬಗ್ಗೆ ಸವಿಸ್ತಾರ ವಿವರಣೆಯನ್ನು ನೀಡಿದರು.
ಈ ಮೇಲೆ ಹೇಳಿದ ಸಮಾರಂಭವನ್ನು ಕಾಲೇಜಿನ ಸಮ್ಮೇಳನ ಸಭಾಂಗಣದಲ್ಲಿ ಮಧ್ಯಾಹ್ನ ೨ರಿಂದ ೫ಗಂಟೆಯ ವರೆಗೆ ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಿಬ್ಬಂದಿಯವರೂ ಸೇರಿದಂತೆ ೧೩೦ ಮಂದಿ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಲಹಾಸಮಿತಿಯಿಂದ ಪಡೆದ ಮಾರ್ಗಸೂಚಕಗಳ ಪ್ರಕಾರ ಈ ಮುಂದೆ ವಿವರಿಸಿರುವ ವ್ಯವಸ್ಥೆಗಳನ್ನು ಮಾಡಲಾಗಿತ್ತು-ಡಿಜಿಟಲ್ ಬಿಡುಗಡೆಯ ವಿಡಿಯೊ ಸಮ್ಮೇಳನಕ್ಕಾಗಿ ಉಪಕರಣಗಳ ಸಜ್ಜೀಕರಣ, ಬ್ಯಾನರ್ ಗಳ ಪ್ರದರ್ಶನ, ನಿಗದಿಪಡಿಸಿದ್ದ ಅಳತೆಯುಳ್ಳ ಫಲಕ, ಅತಿಥಿ ಗಣ್ಯರಿಗೆ ಮತ್ತು ಸಭಾಸದರಿಗೆ ಆಸನ ವ್ಯವಸ್ಥೆ, ಈ ಮಂತಾದವು.
ಡಾ. ಪ್ರಮಿಳಾ, ವಿಶೇಷ ಅಧಿಕಾರಿ, ರೂಸ, ಡಿಪಾರ್ಟ್ಮೆಂಟ್ ಆಫ್ ಕಾಲೇಜಿಯೇಟ್ ಎಜುಕೇಶನ್, ಮೈಸೂರು; ರೆವರೆಂಡ್.ಫಾದರ್. ಬರ್ನಾರ್ಡ್ ಪ್ರಕಾಶ್ ಬಾರ್ನಿಸ್ ರೆಕ್ಟರ್/ಮ್ಯಾನೇಜರ್, ಸೈಂಟ್ ಫಿಲೋಮಿನಾಸ್ ಕಾಲೇಜ್
ರೆವರೆಂಡ್.ಫಾದರ್.ಮರಿಯಾಕ್ಸೇವಿಯರ್, ವೈಸ್-ರೆಕ್ಟರ್; ಡಾ.ರವಿಜೆ.ಡಿ.ಸಲ್ಡಾನ್ಹ ಹಾಗೂ ಹಿರಿಯ ಸಿಬ್ಬಂದಿ ವರ್ಗದವರು
ಉಪಸ್ಥಿತರಿದ್ದರು
ಶ್ರೀ ರೊನಾಲ್ಡ್ ಪ್ರಕಾಶ್ ಕುಟಿನ್ಹಾ ಅವರ ವಂದನಾರ್ಪಣೆಯೊಂದಿಗೆ ಸಮಾರಂಭವು ಮುಕ್ತಾಯಗೊಂಡಿತು.
—————————————————————-
ಸಂಯುಕ್ತರಾಷ್ಟ್ರಸಂಸ್ಥೆಯ ಸುಸ್ಥಿರ ಸಮರ್ಥನೀಯ ಅಭಿವೃಧ್ಧಿ ಗುರಿಗಳನ್ನು ಮುಂತರಲು ’ಜ್ಞಾನಪಾಲುಗಾರಿಕೆಗೆ” ಅಂತರ್ರಾಷ್ಟ್ರೀಯ ಸಮ್ಮೇಳನ.
ಸಂಯುಕ್ತರಾಷ್ಟ್ರಸಂಸ್ಥೆಯ ಸಮರ್ಥನೀಯಅಭಿವೃಧ್ಧಿಗುರಿ (ಎಸ್ಡಿಜಿ) ಗಳನ್ನುಮುಂತರಲುಆಯೋಜಿಸಲಾಗಿದ್ದ ೨ ದಿನಗಳ ’ಜ್ಞಾನಪಾಲುಗಾರಿಕೆಗಳ’ಅಂತರ್ರಾಷ್ಟ್ರೀಯಸಮ್ಮೇಳನದಲ್ಲಿ“ಸಾಧುವೆನ್ನಬಹುದಾದ ಜೀವನಶೈಲಿಗಳತ್ತಮತ್ತುಅಂತರ್ವಿಷ್ಟಸಮಾಜದತ್ತ’ – ಈವಿಷಯವಸ್ತುವನ್ನುಕುರಿತುಪ್ರಸ್ತುತದಲ್ಲಿ ಜನಸಾಮಾನ್ಯರಲ್ಲಿ ಇರುವ ಕಾಳಜಿಯನ್ನು ಎತ್ತಿ ಹಿಡಿಯಲಾಯಿತು. ಈ ಸಮ್ಮೇಳನವು ಸೈಂಟ್ ಫಿಲೋಮಿನಾಸ್ ಕಾಲೇಜ್ (ಸ್ವಾಯತ್ತ) ಮೈಸೂರು,” ಸುಸ್ಥಿರ ಸಮರ್ಥನೀಯ ಅಭಿವೃಧ್ಧಿ ಪ್ಲಾಟ್ಫ಼ಾರಮ್’,’ಏಶಿಯಾ ಆಂಡ್ ಸೆವಿಯರ್ ರ್ಬೋರ್ಡ್ ಆಫ್ ಎಜುಕೇಶನ್ ಇನ್ ಇಂಡಿಯಾ’, ಈ ಮೂರು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ೨೦೧೯ರ ಪೆಬ್ರುವರಿ ೮ ಮತ್ತು ೯ನೇ ದಿನಾಂಕಗಳಂದು ಆಯೋಜಿಸಲಾಗಿತ್ತು.
ಸಮರ್ಥನೀಯ ಅಭಿವೃಧ್ಧಿಯನ್ನು ಸಮರ್ಥವನ್ನಾಗಿರಿಸಲು’ ಒಂದರೊಳಗೊಂದನ್ನು ಅಡಕಿಸಿಡುವ’ ಮಾದರಿಯನ್ನು ರಚಿಸುವುದು ಈಎಸ್ಡಿಜಿಯ ಸೂಕ್ತಿಯಾಗಿರುತ್ತದೆ.
.
ಈ ಸಮ್ಮೇಳನದ ಆರಂಭವು ಕಾರ್ಯಾಗಾರವೊಂದರಿಂದ ಮೊದಲ್ಗೊಂಡಿತು. ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಗುಂಪು ಚಟುವಟಿಕೆಗಳ ಮೂಲಕ ರಚಿಸಿದ್ದ ಸೃಜನಶೀಲ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗಿತು. ಈ ಚಟುವಟಿಕೆಯ ನಂತರ, ಸರ್ವಸದಸ್ಯ ಅಧಿವೇಶನಗಳು ಮತ್ತು ಆಚಾರ್ಯ ತರಗತಿಗಳು ಪ್ರಭಾವಯುತ ಭಾಷಣಕಾರರಾದ, ಅರುಣ್ ಸುಬ್ರಮಣ್ಯಮ್, ಹಿರಿಯಪತ್ರಕರ್ತ; ರಾಬರ್ಟ್ ಸ್ಟೀಲ್, ಸುಸ್ಥಿರ ಸಮರ್ಥನೀಯ ಅಭಿವೃಧ್ಧಿ ಪ್ಲಾಟ್ಫ಼ಾರಮ್’ನ ಸದಸ್ಯ; ಜಹಾನ್ಜ಼ೇಬ್ಅಖ್ತರ್( ಐಆರ್ಎಸ್) ಪ್ರಿನ್ಸಿಪಲ್ ಕಮಿಶನರ್ ಅಪ್ ಇಂಕಾಮ್ ಟಾಕ್ಸ್ ಪಾಂಡಿಚೇರಿ; ಇಪ್ಶಿತಾ ಚತುರ್ವೇದಿ, ಸಮರ್ಥನೀಯ ಅಭಿವೃಧ್ಧಿಗೆ ಮುಡುಪಾಗಿಸಿಕೊಂಡಿರುವ ಮೊದಲ ಕಾನೂನು ಸಂಸ್ಥೆ ’ಸಿ & ಸಿ’ ಅಡ್ವೈಸರ್ಸ್’ ಇದರ ಸಹ-ಸ್ಥಾಪಕರು; ಪತ್ರಕರ್ತರು, ಪ್ರಕೃತಿ ತತ್ವವಾದಿ, ಮತ್ತು ಮಾನವ ಸಂಪನ್ಮೂಲ ತರಬೇತುಗಾರರು, ದೀಪಾಲನ್, ನೈಸರ್ಗಿಕವಾದಿ ; ಪವಿತ್ರ ಮೋಹನ್ ರಾಜ್, ಮೊದಲನೆ ಹಂತದ ಸ್ಟಾರ್ಟ್ಟ್-ಅಪ್’ ಸಂಸ್ಥೆಯಾದ ’ಇನಿಶಿಯೇಟಿವ್’ ನ ಸ್ಥಾಪಕರು; ಈ ಮುಂತಾದವರು ತಮ್ಮ ಸಕ್ರಿಯ ತೊಡಗುವಿಕೆಯೊಂದಿಗೆ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಾ ಸಭಿಕರಲ್ಲಿ ಅರಿವು ಮೂಡಿಸಿದರು.
ಫೆಬ್ರುವರಿ ೯ರಂದು ಸಮ್ಮೇಳನವು ಸಮಾರೋಪಉತ್ಸವ ಆಚರಣೆಯೊಂದಿಗೆ ಮುಕ್ತಾಯಗೊಂಡಿತು. ಈ ಸಮಾರೋಪ ಸಭೆಯಲ್ಲಿ, ಫಾದರ್. ಲೆಸ್ಲಿ ಮೊರಾಸ್ ರವರು,, ಎಪಿಸ್ಕೋಪಲ್ ವಿಕಾರ್ ಫಾದರ್. ಬರ್ನಾರ್ಡ್ ಪ್ರಕಾಶ್ ಬಾರ್ನಿಸ್
, ಡಾ.ರೂತ್ ಶಾಂತಕುಮಾರಿ, ಹಾಗೂ ಇತರ ಸಂಪನ್ಮೂಲ ವ್ಯಕ್ತಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ತಂಡಗಳ ಸದಸ್ಯರುಗಳು ೨ ದಿನಗಳ ಸಮ್ಮೇಳನದ ಬಗ್ಗೆ ತಮ್ಮ ಅನಿಸಿಕೆಗಳನ್ನು ಮುಂದಿಟ್ಟರು. ಮೈಸೂರಿನ ’ಪಬ್ಲಿಕ್ ಪಾಲಿಸಿ’ಅಭ್ಯರ್ಥಿ, ಖುಶಿ ಅವರು ಮುಂಬರುವ ’ವಿಟೂ/We ಣoo ಚಳವಳಿಯ ಕುರಿತು ದನಿ ಎತ್ತಿದರು.
ಫಾದರ್. ಲೆಸ್ಲಿ ಮೊರಾಸ್ ರವರು,ಸಮ್ಮೇಳನದ ಮುಕ್ತಾಯ ಭಾಷಣ ಮಾಡಿದರು. ತಮಿಳುನಾಡಿನ ತಿರುಚ್ಚಿ ನಗರದಿಂದ ಬಂದ ಕಿಶೋರ್ ಮತ್ತು ವೇಲನ್ ಇವರಿಬ್ಬರಿಗೂ ಅವರು ಮಾಡಿದ್ದ ಭಿತ್ತಿ ಪತ್ರವನ್ನು ಗುರುತಿಸಿ ಮೆಚ್ಚುಗೆಯ ಸಂಕೇತವಾಗಿ ಪ್ರಶಸ್ತಿ ನೀಡಲಾಯಿತು. ಡಾ.ರೂತ್ ಶಾಂತಕುಮಾರಿಯವರು ವಂದನಾರ್ಪಣೆ ಮಾಡಿದರು.
ಯುವಶಕ್ತಿಯಲ್ಲಿ ನಂಬಿಕೆ, ವಿಶ್ವಾಸವಿದ್ದರೆ ಏನನ್ನಾದರೂ ಸಾಧಿಸಬಹುದು ಮತ್ತು ಕೈಗೊಂಡಿದ್ದನ್ನು ಯಶಸ್ವಿಗೊಳಿಸ ಬಹುದು’ ಎಂಬ ಆಶಾ ಭಾವನೆಯೊಂದಿಗೆ ಸಮ್ಮೇಳನವು ಕೊನೆಗೊಂಡಿತು.
ಸೈಂಟ್ ಫಿಲೋಮಿನಾಸ್ ಕಾಲೇಜು ಸಿ ಐ ಪಿ ಇ ಟಿ-ಸಿ ಎಸ್ ಟಿ ಎಸ್ಒಂದಿಗೆ ಎಮ್ ಒ ಯು (ಮೆಮೊರ್ಯಾಂಡಮ್ ಆಫ್ ಅಂಡರ್ ಸ್ಟ್ಯಾಂಡಿಂಗ್) ಸಹಿ.Sಖಿ.PಊIಐಔ’S SIಉಓS ಒಔU WIಖಿಊ ಅIPಇಖಿ – ಅSಖಿS
.
ಸೈಂಟ್ ಫಿಲೋಮಿನಾಸ್ ಕಾಲೇಜು ಮತ್ತು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಪ್ರಾಸೆಸ್ಸಿಂಗ್ ಅಂಡ್ ಎಂಜಿನಿಯರಿಂಗ್ ಟೆಕ್ನಾಲಜಿ (ಸಿ ಐ ಪಿ ಇ ಟಿ) ಅIPಇಖಿ- ಸೆಂಟರ್ ಫಾರ್ ಸ್ಕಿಲ್ಲಿಂಗ್ ಅಂಡ್ ಟೆಕ್ನಿಕಲ್ ಸಪೋರ್ಟ್(ಸಿ ಎಸ್ ಟಿ ಎಸ್‍ಅSಖಿS),ಮೈಸೂರು, ಈ ಸಂಸ್ಥೆಗಳ ನಡುವೆ, ಅವರ ಸಹಯೋಗಿ ಯೋಜನೆಗಳ / ಚಟುವಟಿಕೆಗಳ ವರ್ಧನೆಗೆ ವಿದ್ವತ್ಪೂರ್ಣ ವಿಚಾರಗಳ ವಿನಿಮಯಕ್ಕೆ ಒಪ್ಪಂದ ಪತ್ರಕ್ಕೆ(ಒಔU) ಗೆ ೨೦೧೮ ರ ಅಕ್ಟೋಬರ್ ೧೮ರಂದು ಅಧಿಕೃತವಾಗಿ ಸಹಿ ಹಾಕಲಾಗಿದೆ. ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಆಶ್ರಯದಡಿಯಲ್ಲಿ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ.
ಈ ಒಪ್ಪಂದ ಪತ್ರದ ಮತ್ತೊಂದು ಉದ್ದೇಶವೇನೆಂದರೆ, ರಸಾಯನ ಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ಎರಡು ಸಂಸ್ಥೆಗಳ ನಡುವೆ ಶೈಕ್ಷಣಿಕ, ತರಬೇತಿ ಮತ್ತು ತಾಂತ್ರಿಕ ಸಹಕಾರದಲ್ಲಿ ಸಾಮಾನ್ಯ ಅಥವಾ ಸಹಯೋಗವುಳ್ಳ ಕಾರ್ಯಪೂರಕ ಸಂಬಂಧವನ್ನು ಗುರುತಿಸುವುದಾಗಿರುತ್ತದೆ. ಸೈಂಟ್ ಫಿಲೋಮಿನಾಸ್ ಕಾಲೇಜು ಮತ್ತು ಸಿ ಐ ಪಿ ಇ ಟಿ, ಇವೆರೆಡೂ ಸಂಸ್ಥೆಗಳು, ರಸಾಯನ ಶಾಸ್ತ್ರ ಶಿಕ್ಷಕ ಸಿಬ್ಬಂದಿಯವರಿಗೆ ವೃತ್ತಿಪರ ಅಭಿವೃಧ್ಧಿ ಕಾರ್ಯಕ್ರಮಗಳು, ಯೋಜನೆ ಕಾರ್ಯಗಳು, ರಸಾಯನ ಶಾಸ್ತ್ರದ ವಿದ್ಯಾರ್ಥಿಗಳಿಗಾಗಿ ಕಾರ್ಖಾನೆ ಸ್ಥಳದಲ್ಲೇ ತರಬೇತಿ, ಶೈಕ್ಷಣಿಕ ಪಠ್ಯಕ್ರಮದ ಅಭಿವೃಧ್ಧಿ, ಹಾಗೂ ವಿದ್ಯಾರ್ಥಿಗಳಿಗೆ ’ಪ್ಲಾಸ್ಟಿಕ್ ಪ್ರಾಸೆಸ್ಸಿಂಗ್ ಅಂಡ್ ಮೌಳ್ಡಿಂಗ್ ಟೆಕ್ನಾಲಜಿ’ ಈ ವಿಷಯಗಳಲ್ಲಿ ಉನ್ನತ ಶೀಕ್ಷಣ ಪಡೆಯಲು ಶಿಫಾರಸ್ಸು ಪತ್ರ ನೀಡುವುದು, ಈ ಮುಂತಾದ ಕಾರ್ಯಗಳನ್ನು ಜಂಟಿಯಾಗಿ ಕೈಗೊಳ್ಳಲು ಸಮ್ಮತಿಸಿರುತ್ತವೆ..
ಒಪ್ಪಂದ ಪತ್ರಕ್ಕೆ ಸಹಿ ಹಾಕಿ ಸಪ್ರಮಾಣಗೊಳಿಸುವ ಕಾರ್ಯಕ್ರಮವನ್ನು ಸೈಂಟ್ ಫಿಲೋಮಿನಾಸ್ ಕಾಲೇಜ್ ನ ಸಮ್ಮೇಳನ ಸಭಾಂಗಣದಲ್ಲಿ ಶಿಕ್ಷಕ ಸಿಬ್ಬಂದಿಯ ಉಪಸ್ಠಿತಿಯಲ್ಲಿ ನಡೆಸಲಾಯಿತು. ಈ ಒಪ್ಪಂದ ಪತ್ರಕ್ಕೆ ಸಿಐಪಿಎಟಿ-ಸಿ ಎಸ್ ಟಿ ಎಸ್ ಯಿಂದ ಆರ್.ಟಿ.ನಗರಹಳ್ಳಿ, ನಿರ್ದೇಶಕರು ಮತ್ತು ಸುಮನ್, ಆಡಿಳಿತಾಧಿಕಾರಿ, ಮತ್ತು ಕಾಲೇಜಿನ ಕಡೆಯಿಂದ ಪ್ರಾಂಶುಪಾಲರಾದ ಡಾ.ಟಿ.ರೂತ್ಶಾಂತಕುಮಾರಿ ಮತ್ತು ರೆವೆರೆಂಡ್.ಡಾ. ಬರ್ನಾರ್ಡ್ ಪ್ರಕಾಶ್ ಬಾರ್ನಿಸ್
, ಕಾಲೇಜಿನ ರೆಕ್ಟರ್ / ನಿರ್ವಹಣಕಾರರು, ಈ ನಾಲ್ವರೂ ಸಹಿ ಹಾಕಿರುತ್ತರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ರೂತ್ ಶಾಂತಕುಮಾರಿಯವರು, ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದು ಎರಡೂ ಸಂಸ್ಥೆಗಳಿಗೆ ಒಂದು ಮುಹೂರ್ತ ವಾಗಿದೆ ಎಂದು ಹೇಳುತ್ತಾ, ಇಂತಹ ಪಾಲುಗಾರಿಕೆಗಳು ಸಂಸ್ಥೆಗಳಿಗೆ ಸ್ವಾವಲಂಬನೆಯ ವ್ಯಾಪಕ ಗುರಿಗಳನ್ನು ಸಾಧಿಸಲು ಅನುವು ಮಾಡುವುದೆಂದು ಹೇಳಿದರು. ಕಾಲೇಜಿನ ಸಿಬ್ಬಂದಿವರ್ಗದವರನ್ನು ಉದ್ದೇಶಿಸಿ, ಈ ಒಪ್ಪಂದ ಪತ್ರದಿಂದ ಪ್ರೇರೇಪಿತರಾಗಿ ಇತರ ಹೆಸರಾಂತ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಶ್ರಮಿಸಬೇಕೆಂದು ಕರೆ ನೀಡಿದರು.
ಆರ್.ಟಿ.ನಗರಹಳ್ಳಿ ಸಿಐಪಿಎಟಿ-ಸಿಎಸ್ಟಿಎಸ್ ಇದರ ನಿರ್ದೇಶಕರು, ಅವರ ಸಂಸ್ಥೆಯನ್ನು ಬಗ್ಗೆ ಪರಿಚಯಿಸಿದರು. ವಿದ್ಯಾರ್ಥಿಗಳು ಇಂಟರ್ನ್ ಗಿರಿ, ಮತ್ತು ಯೋಜನಾಕಾರ್ಯಗಳ ರೂಪದಲ್ಲಿ ಕೌಶಲ ತರಬೇತಿ ಪಡೆಯಲು ಅವರನ್ನು ಪ್ರೇರೇಪಿಸಬೇಕೆಂದು ಬೋಧನಾ ಸಿಬ್ಬಂದಿಯವರಲ್ಲಿ ಮನವಿ ಮಾಡಿಕೊಂಡರು.
ಡಾ.ರವಿ .ಡಿ.ಸಲ್ಡಾನ್ಹ, ರಸಾಯನ ಶಾಸ್ತ್ರದ ಅಸಿಸ್ಟೆಂಟ್ ಪ್ರೊಫೆಸರ್, ಸೈಂಟ್.ಲೋಮಿನಾಸ್ ಕಾಲೇಜ್(ಸ್ವಾಯತ್ತ
), ಸ್ವಾಗತ ಕೋರಿದರು. ಶ್ರೀ. ರೊನಾಲ್ಡ್ ಪ್ರಕಾಶ್ ಕುಟಿನ್ಹಾ ಅವರು ವಂದನಾರ್ಪಣೆ ಸಲ್ಲಿಸಿದರು.
———————————————————————–
II Iಟಿಣeಡಿಟಿಚಿಣioಟಿಚಿಟ ಅoಟಿಜಿeಡಿeಟಿಛಿe oಟಿ ಏಟಿoತಿಟeಜge Pಚಿಡಿಣಟಿeಡಿshiಠಿs ಣo ಂಜvಚಿಟಿಛಿe ಣhe Uಓ Sಆಉs
ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ಸಮರ್ಥನೀಯ ಅಭಿವೃಧ್ಧಿ ಗುರಿಗಳನ್ನು ಮುಂತರಲು ’ಜ್ಞಾನಪಾಲುಗಾರಿಕೆ” ಪ್ರಯುಕ್ತ ೨ನೇ ಅಂತರ್ರಾಷ್ಟ್ರೀಯ ಸಮ್ಮೇಳನ.
“ಖಿoತಿಚಿಡಿಜsSusಣಚಿiಟಿಚಿbಟe ಐiಜಿesಣಥಿಟes ಚಿಟಿಜ Iಟಿಛಿಟusive Soಛಿieಣies”
“ಸಾಧುವೆನ್ನಬಹುದಾದ ಜೀವನ ಶೈಲಿಗಳತ್ತ ಮತ್ತು ಅಂತರ್ವಿಷ್ಟ ಸಮಾಜದತ್ತ’
೨೦೧೯ರ ಫ಼ೆಬ್ರುವರಿ ೮, ೯ ನೇ ದಿನಾಂಕಗಳಂದು ಸೈಂಟ್. ಫಿಲೋಮಿನಾಸ್ ಕಾಲೇಜು,ಮೈಸೂರು ಹಾಗೂ ಕ್ಸೇವಿಯರ್ ಬೋರ್ಡ್ ಆಫ಼್ ಹೈಯರ್ ಎಜುಕೇಶನ್, ಈ ಎರಡೂ ಸಂಸ್ಥೆಗಳ ಪಾಲುಗಾರಿಕೆಯಲ್ಲಿ.
ಉನ್ನತ ಶಿಕ್ಷಣ ಸಂಸ್ಥೆಗಳ ಸಾಮರ್ಥ್ಯವನ್ನು ವರ್ಧಿಸುವುದು ಸಮ್ಮೇಳನದ ಉದ್ದೇಶವಾಗಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮಸಾಮರ್ಥ್ಯ, ಕೌಶಲ, ದೋರಣೆಗಳನ್ನು ವೃಧ್ಧಿಗೊಳಿಸಿಕೊಳ್ಳುವತ್ತ ಅವರನ್ನು ಅಭಿಮುಖವಾಗಿಸಲು ಪ್ರತಿಯೊಂದು ಕ್ಷೇತ್ರದ ಆಯಾ ವಿಷಯಗಳ ತಜ್ಞರಿಂದ ಆಚಾರ್ಯ ತರಗತಿಗಳನ್ನು ನಡೆಸಿಕೊಡಲಾಗುವುದು. ಈ ಆಚಾರ್ಯ ತರಗತಿಗಳಲ್ಲಿ ಸಮರ್ಥನೀಯ ಭವಿಷ್ಯಕ್ಕಾಗಿ ಅಂತರ್ಗತ ಸಮಾಜಗಳನ್ನು ಕಟ್ಟಲು, ಉದ್ಯೋಗಗಳನ್ನು ಸೃಷ್ಟಿಸಲು ಶಿಕ್ಷಣದ ಹಲವಾರು ಆಯಾಮಗಳನ್ನು ಸಂಯೋಜಿಸಲಾಗಿರುತ್ತದೆ. ಈ ಸಮ್ಮೇಳನದ ಕೆಲವು ಸೂಚಕ ವಿಷಯಗಳು ಇಂತಿವೆ – ಹವಾಮಾನ ಬದಲಾವಣೆ; ಹವಾಮಾನ ಬದಲಾವಣೆ ಕಾರ್ಯಗಳ ಮೇಲೆ ಅವಲಂಬಿಸಿರುವ ಆರ್ಥಿಕ ವರ್ತುಲಗಳು; ಅಂತರ್ಗತ ಸಮಾಜಗಳ ನಿರ್ಮಾಣ; ವಿಪತ್ತಿನಿಂದಾಗುವ ಹಾನಿಗಳ ಕಡಿತ; ಹವಾಮಾನ ಬದಲಾವಣೆ ಮತ್ತು ಚೇತರಿಕೆ; ವಿಪತ್ತು ಅಪಾಯ ವಿಮೆ; ಕ್ಷೇತ್ರಾವರಣಗಳನ್ನು ಹಸಿರುಗೊಳಿಸುವುದು;
ನವೀಕರಿಸಬಹುದಾದ ಶಕ್ತಿ; ಸಮರ್ಥನೀಯ ಮತ್ತು ಅಂತರ್ಗತ ನಗರಗಳಿಗೆ ವಿದ್ಯುಚ್ಛಕ್ತಿ ವಾಹಕ ಬಲೆಗಳಿಲ್ಲದ(’ಆಫ಼್ ಗ್ರಿಡ್) ಪರಿಹಾರಗಳು; ಸಮರ್ಥನೀಯ ಅಭಿವೃಧ್ಧಿಗಾಗಿ ದತ್ತಾಂಶವಿಶ್ಲೇಷಕ; ವಿನ್ಯಾಸ ಮತ್ತು ವ್ಯವಸ್ಥೆಗಳ ಪರ್ಯಾಲೋಚನೆ; ಸಮರ್ಥನೀಯ ಅಭಿವೃಧ್ಧಿಗಾಗಿ ಕೌಶಲ ಮತ್ತು ವೃತ್ತಿಪರ ಶಿಕ್ಷಣಕ್ಕೆ ಅವಕಾಶಗಳು; ಸಮಗ್ರ ಆರೋಗ್ಯದತ್ತ; ಬೌದ್ದಿಕ ಆಸ್ತಿ ನಿಯಮಗಳ ಗ್ರಹಿಕೆ ಮತ್ತು ಕಾರ್ಯ.

ಖUSಂ gಡಿಚಿಟಿಣ ಜಿoಡಿ Sಣ. Phiಟomeಟಿಚಿ’s ಛಿoಟಟege (ಂuಣoಟಿomous), ಒಥಿsoಡಿe
ಸೈಂಟ್ ಫಿಲೋಮಿನಾಸ್ ಕಾಲೇಜ್ (ಸ್ವಾಯತ್ತ), ಮೈಸೂರು. ಈ ಸಂಸ್ಥೆಗೆ ರೂಸ ಅನುದಾನ.
ಮಾನವಸಂಪನ್ಮೂಲಅಭಿವೃಧ್ಧಿಮಂತ್ರಾಲಯವು’ರಾಷ್ಟ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನ್’ (ಆರ್ಯುಎಸ್ಎ / ರೂಸ) ಯೋಜನೆಯಅಡಿಯಲ್ಲಿಅಂಶ೮, ಇದನ್ನುನನುಸರಿಸಿ ಅಪೇಕ್ಷಿಸಲ್ಪಟ್ಟ ಗುರಿ, ’ಉನ್ನತ ಶಿಕ್ಷಣದಲ್ಲಿ ಶೈಕ್ಷಣಿಕ ಉತ್ಕೃಷ್ಟತೆ’ ಸಾಧಿಸಿದಕಾರಣ ೫ಕೋಟಿ ರೂಪಾಯಿಗಳ ಅನುದಾನ ನೀಡಲು ಸೈಂಟ್ ಫಿಲೋಮಿನಾಸ್ ಕಾಲೇಜ್, ಮೈಸೂರು. ಇದನ್ನು, ಆಯ್ಕೆಮಾಡಿರುತ್ತದೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯು (ಕೆ ಹೆಚ್ ಇ) ಕೊಲೆಜಿಯೇಟ್ ಶಿಕ್ಷಣ ವಿಭಾಗದ ಮೂಲಕ ಹೊರಡಿಸಿದ ಹಾಗೂ ಎಮ್ ಹೆಚ್ ಆರ್ ಡಿ(ರೂಸ) ಇದರ ಜಾಲತಾಣದಲ್ಲಿ ಮಂಡಿಸಿರುವ ಸುತ್ತೋಲೆಯಲ್ಲಿ, ೨೦೧೮ರ ಮೇ ತಿಂಗಳಲ್ಲಿ ನಡೆದ ’ದ ಮಿನಟ್ಸ್ ಆಫ್ ಪ್ರಾಜೆಕ್ಟ್ ಅಪ್ರೂವಲ್ ಮಂಡಳಿಯ ಸಮಾಲೋಚನಾ ಸಭೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಲಿಯ[ಕೆ ಎಸ್ ಹೆಚ್ ಎ] ಟಿಪ್ಪಣಿಯ ಪ್ರಕಾರ, ಎಮ್ ಎಚ್ ಆರ್ ಡಿ ಯಿಂದ ನೀಡಲ್ಪಡುವ ಅನುದಾನವು ’ಗುಣಮಟ್ಟ ವರ್ಧನೆ ಮತ್ತು ಉತ್ಕೃಷ್ಟತೆ’ ಸಾಧಿಸುವ ಏಕೈಕ ಕಾರಣಕ್ಕೆ ರೂಸ ೮, ಈ ಅಂಶದ ಅಡಿಯಲ್ಲಿ ಆಯ್ಕೆಗೊಂಡಿರುವ ಸ್ವಾಯತ್ತ ಕಾಲೇಜ್ ಗಳಿಗೆ ಬಿಡುಗಡೆ ಮಾಡುವಂತೆ ಸೈಂಟ್.ಫಿಲೋಮಿನಾಸ್ಕಾಲೇಜಿಗೆಬಿಡುಗಡೆಯಾಗಿರುತ್ತದೆ. ನ್ಯಾಕ್ ಸಿ ಜಿ ಪಿ ಎ ೩.೫೧ ನಷ್ಟು ಮತ್ತು ಅದಕ್ಕೂ ಮೇಲ್ಪಟ್ಟು ಅಂಶ ಹೊಂದಿರುವ ಮತ್ತು ಯು ಜಿ ಸಿ ಯ ಸ್ವಯಮಾಧಿಕಾರ ನಿಯಮಗಳ ಅಡಿಯಲ್ಲಿ ಕಾಲೇಜುಗಳಿಗೆ ಬೋಧನೆಯ ಗುಣಮಟ್ಟ ವರ್ಧನೆಗೆ ಮತ್ತು ಸಂಶೋಧನೆಗೆ ಬೆಂಬಲ ಒದಗಿಸಲಾಗುತ್ತದೆ.
ಈ ಅನುದಾನವು ಕಾಲೇಜಿನ ಮೂಲಸೌಕರ್ಯ ಸಂಪನ್ಮೂಲಗಳಿಗೆ ಹೊಸ ಆಯಾಮವನ್ನು ಒಸಗಿಸುವುದು. ಇದರಿಂದ ಉನ್ನತ ಶಿಕ್ಷಣಕ್ಕೆ ಗುಣಮಟ್ಟ ಮತ್ತು ಒಳ್ಳೆಯ ಛಾಪನ್ನೂ ಒದಗಿಸಲು ಸಹಾಯ ಮಾಡುತ್ತದೆ. ಈ ಅನುದಾನವು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು, ನವೀಕರಣಗೊಳಿಸಲು ಮತ್ತು ಸುಧಾರಣೆಗೊಳಿಸಲು, ಹೊಸ ಉಪಕರಣಗಳನ್ನು ಖರೀದಿಸಲು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಮಟ್ಟದಲ್ಲಿ ಉಪಯೋಗಿಸಲ್ಪಡುವುದು.
ಗುಣಮಟ್ಟ ವರ್ಧನೆ ಮತ್ತು ಉತ್ಕೃಷ್ಟತೆ ಇವೆರೆಡನ್ನೂ ಗುರಿಯಾಗಿಟ್ಟುಕೊಂಡು ಎಮ್ ಹೆಚ್ ಆರ್ ಡಿ ಹಾಗೂ ಕೆ ಎಸ್ ಹೆಚ್ ಇ – ವಿಧಿಸಿರುವ ಮಾದರಿಗಳನ್ನನುಸರಿಸಿ ಅನುಮೋದನೆಯಾಗಿರುವ ಅನುದಾನವನ್ನು ಬಳಕೆ ಮಾಡಲು ಸಾಂಸ್ಥಿಕ ಅಭಿವೃಧ್ಧಿ ಯೋಜನೆ(ಐಡಿಪಿ), ಭೌತಿಕ ಮತ್ತು ಹಣಹೂಡುವಿಕೆ, ಮತ್ತು (೫ ರಿಂದ ೧೦ ವರುಷಗಳ) ಉದ್ದೇಶಿತ ಕಾರ್ಯತಂತ್ರ ಯೋಜನೆಯೊಂದನ್ನು ತಯಾರಿಸಬೇಕಿರುತ್ತದೆ.
ಹೊಸ ತರಗತಿಗಳ, ಶೌಚಾಲಯಗಳ, ಗಣಕ ಯಂತ್ರ ಪ್ರಯೋಗಾಲಯಗಳ ನಿರ್ಮಾಣ; ಪ್ರಯೋಗಾಲಯಗಳ, ಕ್ರೀಡಾ ಸೌಲಭ್ಯಗಳ, ವ್ಯಾಸಂಗ ಮತ್ತು ಆಡಳಿತ ಕಟ್ಟಡಗಳ, ವಿದ್ಯಾರ್ಥಿನಿಲಯಗಳ ಆಧುನೀಕರಣ ಮತ್ತು ಸಬಲೀಕರಣ ಮಾಡಿ ಈ ಎಲ್ಲದರ ನವೀಕರಣಕ್ಕೆ; ಜ್ಞಾನ ಸಂಪನ್ಮೂಲಗಳ ಸುಲಭ್ಯತೆ ಮತ್ತು ಗ್ರಂಥಾಲಯಗಳ ಸಬಲೀಕರಣಕ್ಕೆ; ಹೊಸ ಆಸನೋಪಕರಣಗಳನ್ನು ಮತ್ತು ನೆಲೆವಸ್ತುಗಳನ್ನು ಖರೀದಿಸಲು; ಈ ಎಲ್ಲಾ ಅವಶ್ಯಕ ಕ್ಷೇತ್ರಗಳಿಗೆ ಅನುದಾನವನ್ನು ಬಳಸಲಾಗುತ್ತದೆ
———————————————————————————-
ಖಿhಡಿee ಜಚಿಥಿs Iಟಿಣeಡಿಟಿಚಿಣioಟಿಚಿಟ ಅoಟಿಜಿeಡಿeಟಿಛಿe oಟಿ ಅಐIಒಂಖಿಇ ಅಊಂಓಉಇ
ಹವಾಮಾನ ಬದಲಾವಣೆ ಕುರಿತು ೩ ದಿನಗಳ ಅಂತರ್ ರಾಷ್ಟ್ರೀಯ ಸಮ್ಮೇಳನ.

ಹವಾಮಾನ ಬದಲಾವಣೆಯಿಂದಾಗಿರುವ ಪರಿಣಾಮಗಳು ಮಹತ್ತರ ಹಾಗೂ ನೈಜವಾದ ಸತ್ಯ. ಇದರಿಂದುಂಟಾಗುತ್ತಿರುವ ಕಟುವೇದನೆಯನ್ನು ಹಲವಾರು ರೂಪಗಳಲ್ಲಿ ಈಗಿನ ಮಾನವ ತಲೆಮಾರು ಅನುಭವಿಸುತ್ತಿದೆ. ಹವಾಮಾನ ಬದಲಾವಣೆಯು ಅತ್ಯಂತ ಗಮನ ಸೆಳೆದಿರುವ ಜಾಗತಿಕ ಮತ್ತು ದೇಶೀಯ ವಿದ್ಯಮಾನವಾಗಿರುತ್ತದೆ. ಇದರ ಪರಿಣಾಮವು ಬಹುಮುಖಿಯಾಗಿದ್ದು ನಮ್ಮ ಗ್ರಹದ ಮೇಲಿರುವ ಬಹುತೇಕ ಜೀವಿಗಳ ಎಲ್ಲಾ ಅಂಶಗಳನ್ನು ಸ್ಪರ್ಶಿಸುತ್ತದೆ. ಬದಲಾವಣೆಯು ಜೀವರಾಶಿಗಳ ವಿಕಸನಕ್ಕೆ ಅನಿವಾರ್ಯವಾದರೂ, ಪ್ರಸ್ತುತ ಹವಾಮಾನ ಬದಲಾವಣೆಯು ತೀವ್ರ ಗತಿಯದ್ದಾಗಿದ್ದು, ಅಷ್ಟೇ ಅಲ್ಲದೆ, ಅದು ಹೆಚ್ಚಾಗಿ ಮಾನವಜನ್ಯವಾಗಿದ್ದು ನಮ್ಮ ಭೂಮಿಗೆ ಮತ್ತು ಅದರ ನಿವಾಸಿಗಳಿಗೆ ದೊಡ್ಡ ಕೇಡನ್ನು ಒಡ್ಡಿದೆ.
ಪ್ರಸ್ತುತ ಸನ್ನಿವೇಶದ ಗಂಭೀರತೆಯನ್ನು ಗ್ರಹಿಸುತ್ತಾ, ನಮ್ಮ ಕಾಲೇಜಿನ ವಿವಿಧ ವ್ಯಾಸಂಗ ವಿಭಾಗಗಳು, ಪರಿಸರ ವಿಜ್ಞಾನ ಮತ್ತು ಸಾರ್ವಜನಿಕ ಕ್ರಿಯಾವಾದ ವಿಚಾರ ಕ್ಷೇತ್ರಗಳ ಕೆಲ ಸಲಹೆಗಾರರೊಂದಿಗೆ ಮಾಡಿದ ಉದ್ದೇಶಪೂರ್ವಕ ಚರ್ಚೆಗಳ ನಂತರ ಕಾಲೇಜು ಹವಾಮಾನ ಬದಲಾವಣೆ ಕುರಿತು ೩ ದಿನಗಳ ಅಂತರ್ ರಾಷ್ಟ್ರೀಯ ಸಮ್ಮೇಳನವನ್ನು ೨೦೧೫ರ ಏಪ್ರಿಲ್ ತಿಂಗಳ ೯ನೇ ದಿನಾಂಕದಿಂದ ೧೧ನೇ ದಿನಾಂಕದವರೆಗೆ ಯಶಸ್ವಿಯಾಗಿ ಸಂಘಟಿಸಿರುತ್ತದೆ.
ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ಅನುಭವಗಳನ್ನು ಹಂಚಿಕೊಂಡು ಅವನ್ನು ನಿಭಾಯಿಸುವ ಕಾರ್ಯ ವಿಧಾನಗಳನ್ನು ವ್ಯವಸ್ಥಿತವಾಗಿ ನಿರೂಪಿಸಲು ಈ ಸಮ್ಮೇಳನವು ಒಂದು ಅವಕಾಶ ಎಂಬ ಕಲ್ಪನೆಯೊಂದಿಗೆ ಸಮ್ಮೇಳನವನ್ನು ಸಂಘಟಿಸಲಾಗಿತ್ತು. ಸ್ಥಳೀಯ ಮಟ್ಟದಲ್ಲಿ ಭಾಗವಹಿಸುವಿಕೆಯನ್ನು ಸಚೇತನಗೊಳಿಸಲೆಂದು ಸಮ್ಮೇಳನಕ್ಕೆ ಪೂರ್ವಭಾವಿಯಾಗಿ, ಪ್ರಬಂಧ ಸ್ಫರ್ಧೆ, ಭಿತ್ತಿಪತ್ರ ಸ್ಫರ್ಧೆ, ಘೋಷಣೆ ಬರವಣಿಗೆ ಸ್ಫರ್ಧೆ, ರಸಪ್ರಶ್ನೆ ಸ್ಫರ್ಧೆ, ಮಾದರಿ ತಯಾರಿಕೆ ಸ್ಫರ್ಧೆ, ಈ ಎಲ್ಲಾ ಚಟುವಟಿಕೆಗಳನ್ನು ಸಾಮಾನ್ಯ ವಿಷಯ ಪಠ್ಯಕ್ರಮಗಳ ಮತ್ತು ವೃತ್ತಿಪರ ಪಠ್ಯಕ್ರಮಗಳ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿತ್ತು.
—————————————————————-
ಖಿಇಆxSPಅ @ Sಣ.Phiಟomeಟಿಚಿ’s ಅoಟಟege
ಟೆಡ್ ಎಕ್ಸ್ಎಸ್ ಪಿ ಸಿ – ಸೈಂಟ್,ಫಿಲೋಮಿನಾಸ್ಕಾಲೇಜ್, ಮೈಸೂರು.,
Sಣ. Phiಟomeಟಿಚಿ’s ಅoಟಟege oಡಿgಚಿಟಿizes ಣhe ಖಿಇಆx eveಟಿಣ oಜಿ iಟಿಣeಡಿಟಿಚಿಣioಟಿಚಿಟ ಜಿಚಿme
ವಿಶ್ವವಿಖ್ಯಾತ ‘ಟೆಡ್ ಎಕ್ಸ್’ ಕಾರ್ಯಕ್ರಮವನ್ನು ಸೈಂಟ್,ಫಿಲೋಮಿನಾಸ್ಕಾಲೇಜ್ಆಯೋಜಿಸಿರುತ್ತದೆ.
ಸೈಂಟ್ ಫಿಲೋಮಿನಾಸ್ ಕಾಲೇಜ್, ಮೈಸೂರು.,ಟೆಡ್ ಎಕ್ಸ್ಎಸ್ ಪಿ ಸಿ, ಇದು ಕಾಲೇಜಿನ ಸಭಾಂಗಣದಲ್ಲಿ ೨೦೧೮ ರ ಏಪ್ರಿಲ್ ತಿಂಗಳ ೨೯ನೇ ದಿನಾಂಕದಂದು ಸ್ವತಂತ್ರವಾಗಿ ಆಯೋಜಿಸಿದ ಕಾರ್ಯಕ್ರಮವಾಗಿರುತ್ತದೆ. ಈ ಕಾರ್ಯಕ್ರಮವನ್ನು ಮೈಸೂರಿನ ಮಹಾರಾಜರಾದ ಶ್ರೀಮನ್ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉದ್ಘಾಟಿಸಿದರು. ಡಾ. ಥಾಮಸ್ ಅಂತೋಣಿ ವಾಳಪಲ್ಲಿ, ಬಿಶಪ್ ಎಮೆರಿಟಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೆವರೆಂಡ್. ಶ್ರೇಷ್ಠ ಗುರು ಲೆಸ್ಲಿ ಮೊರಾಸ್ ಎಪಿಸ್ಕೋಪಲ್ ವಿಕಾರ್ ಎಮ್ ಡಿ ಇ ಎಸ್ , ಡಾ.ಟಿ. ರೂತ್ ಶಾಂತಕುಮಾರಿ, ಕಾಲೇಜಿನ ಪ್ರಾಂಶುಪಾಲರು ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀಮನ್ ಯದುವೀರ್ ಕೃಷ್ಣದತ್ತ ಒಡೆಯರ್ ಅವರು ಮೈಸೂರಿನ ಶ್ರೀಮಂತ ಪರಂಪರೆಯನ್ನು ಸಮರ್ಥನೀಯವಾಗಿಸಲು ಈ ಕಾರ್ಯಕ್ರಮವು ಎಷ್ಟು ಮುಖ್ಯವೆಂದು ಹೇಳುತ್ತಾ, ಇದೇ ರೀತಿಯ ಚರ್ಚೆಗಳು ಮೈಸೂರಿನ ಆಸ್ಥಾನಗಳಲ್ಲಿ ನಡೆಯುತ್ತಿದ್ದವೆಂದು ಇತಿಹಾಸದಿಂದ ಕೆಲವು ನಿದರ್ಶನಗಳನ್ನು ಉದಹರಿಸಿ ಹೇಳಿದರು.
ಹವಾಮಾನ ಬದಲಾವಣೆ, ಆರೋಗ್ಯ ಮತ್ತು ಜೀವನಶೈಲಿ, ಕಲೆ, ಮನೋರಂಜನೆ, ಅಂತರ್ ಧರ್ಮ ಸಾಮರಸ್ಯ ಈ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಪರಿಣತೆಯನ್ನು ಹೊಂದಿರುವಂತಹ ೧೬ ಭಾಷಣಕಾರರು ಸಮರ್ಥನೀಯ ಸಮಾಜದ ಅಭಿವೃಧ್ಧಿಯ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡರು.
ಟಾಸ್ಕ್ ಎಜುಕೇಶನ್ ಚ್ಯಾರಿಟಬಲ್ ವೆಲ್ಫ಼ೇರ್ ಟ್ರಸ್ಟ್, ಭಾರತ್ ಇಂಟರ್ ನ್ಯಾಶನಲ್ ಟೂರ್ಸ್ ಅಂಡ್ ಟ್ರಾವೆಲ್ಸ್, ಫೋರಮ್ ಸೆಂಟ್ರಲ್ ಮಾಲ್, ಕಾರ್ನಿಶ್ ಕೆಫೆ, 21 ಡಿಗ್ರೀಸ್, ಟೆಕ್ರೆಫ್ ಸೊಲ್ಯುಶನ್ಸ್ ಪ್ರೈವೆಟ್ ಲಿಮಿಟೆಡ್ ಮತ್ತು ಹೊನ್ನಸಿರಿ ನಿಸ್ಸಾನ್, ಈ ಮೊದಲಾದ ಸಂಸ್ಥೆಗಳು ಈ ಟೆಡ್ ಎಕ್ಸ್ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.
ಈ ಕಾರ್ಯಕ್ರಮದ ಸಂಯೋಜಕರ ಮತ್ತು ಸಹ-ಸಂಯೋಜಕರ ವಂದನಾರ್ಪಣೆಯೊಂದಿಗೆ ಈ ಟೆಡ್ ಎಕ್ಸ್ಎಸ್ ಪಿ ಸಿ ಕಾರ್ಯಕ್ರಮವು ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಗಿಡಗಳ ಸಸಿಗಳನ್ನು ಕೊಡುಗೆಯಾಗಿ ನೀಡಲಾಯಿತು.
———————————————————————-
ಖಿತಿo-ಆಚಿಥಿ ಈಆP oಟಿ ಖಿeಚಿಛಿhiಟಿg ಚಿಟಿಜ ಐeಚಿಡಿಟಿiಟಿg ಜಿoಡಿ ಖಿeಚಿಛಿhiಟಿg Sಣಚಿಜಿಜಿ
ಶಿಕ್ಷಕ ವರ್ಗದವರಿಗೆ ಬೋಧನೆ ಮತ್ತು ಕಲಿಕೆ. ಈ ವಿಷಯ ಕುರಿತು ೨ ದಿನಗಳ ಶಿಕ್ಷಕವರ್ಗ ಅಭಿವೃಧ್ಧಿ ಕಾರ್ಯಕ್ರಮ (ಎಫ್ ಡಿ ಪಿ)
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಸ್ಟಿಟ್ಯೂಟ್ ಫಾರ್ ಮ್ಯಾನೇಜ್ ಮೆಂಟ್ ಡೆವೆಲಪ್ಮೆಂಟ್(ಎಸ್ ಡಿ ಐ ಎಮ್ ಡಿ) ಮತ್ತು ಸೈಂಟ್,ಫಿಲೋಮಿನಾಸ್ಕಾಲೇಜ್, ಮೈಸೂರು., ಕಾಲೇಜಿನ ಶಿಕ್ಷಕರಿಗೆ ೨ ದಿನಗಳ ’ಬೋಧನೆ ಮತ್ತು ಕಲಿಕೆ’ ಈ ವಿಷಯದಲ್ಲಿ ಶಿಕ್ಷಕವರ್ಗ ಅಭಿವೃಧ್ಧಿ ಕಾರ್ಯಕ್ರಮವನ್ನು ೨೦೧೯ರ ಮಾರ್ಚ್ ತಿಂಗಳ ೨೧ ಮತ್ತು ೨೨ನೇ ದಿನಾಂಕಗಳಂದು ಎಸ್ ಡಿ ಒ ಐ ಎಮ್ ಡಿ ಸಂಸ್ಥೆಯಲ್ಲಿ ಏರ್ಪಡಿಸಲಾಗಿತ್ತು. ’ಬೋಧನೆ ಮತ್ತು ಕಲಿಕೆ’ (ಎಫ್ ಡಿ ಪಿ), ಈ ಕಾರ್ಯಕ್ರಮದಲ್ಲಿ, ಪಠ್ಯಕ್ರಮದ ನೀಡಿಕೆಯಲ್ಲಿ ಹಾಗೂ ಪ್ರವಚನ ವೈಖರಿಯಲ್ಲಿ ಆಗಿರುವ ಪ್ರಗತಿಪರ ವಿಚಾರಗಳನ್ನು ಮತ್ತು ’ಬೋಧನೆ ಮತ್ತು ಕಲಿಕೆ’ ಪ್ರಕ್ರಿಯೆಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದನ್ನು ಪರಿಚಯಿಸುವುದರ ಬಗ್ಗೆ ಗಮನವನ್ನು ಕೇಂದ್ರೀಕರಿಸಲಾಗಿತ್ತು.

ಡಾ.ಜಗದೀಶ್, ಪ್ರೊಫೆಸರ್, ಎಸ್ ಡಿ ಎಮ್ ಐ ಎಮ್ ಡಿ, ಅವರು ಕಾರ್ಯಕ್ರಮದ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ಸ್ವಾಗತಿಸಿ, ಕಾರ್ಯಕ್ರಮದ ಪಕ್ಷಿ ನೋಟವನ್ನು ಪ್ರಸ್ತುತಪಡಿಸಿದರು.ರೆವೆರೆಂಡ್.ಫಾದರ್.ಡ.ಬರ್ನಾರ್ಡ್ಪ್ರಕಾಶ್ಬರ್ನಿಸ್,ರೆಕ್ಟ್ಟರ್, ಸೈಂಟ್ ಫಿಲೋಮಿನಾಸ್ ಕಾಲೇಜ್ ಸಂಸ್ಥೆಗಳು, ಡಾ.ಎನ್.ಆರ್.ಪರಶುರಾಮನ್, ನಿರ್ದೇಶಕರು, ಎಸ್ ಡಿ ಎಮ್ ಐ ಎಮ್ ಡಿ; ಡಾ.ಗಾಯತ್ರಿ, ಉಪನಿರ್ದೇಶಕರು, ಎಸ್ ಡಿ ಎಮ್ ಐ ಎಮ್ ಡಿ; ಮತ್ತು ಡಾ.ಟಿ.ರೂತ್ ಶಾಂತಕುಮಾರಿ, ಪ್ರಾಂಶುಪಾಲರು, ಸೈಂಟ್ ಫಿಲೋಮಿನಾಸ್ ಕಾಲೇಜ್ ಸಂಸ್ಥೆಗಳು, ಈ ಎಲ್ಲಾ ಗಣ್ಯ ವ್ಯಕ್ತಿಗಳೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಜಾಲತಾಣಗಳಿಂದ ಯಥೇಷ್ಟ ಮಾಹಿತಿ ಲಭ್ಯವಿರುವುದರಿಂದ, ಶಿಕ್ಷಕರ ಪಾತ್ರದಲ್ಲಿ ಬದಲಾವಣೆ ಉಂಟಾಗಿ, ಅವರು ವಿದ್ಯಾರ್ಥಿಗಳಿಗೆ ಸುಗಮಕಾರರಾಗಿ, ಮಾರ್ಗದರ್ಶಕರಾಗಿ, ಸ್ನೇಹಿತರಾಗಿ ಮತ್ತು ತತ್ವ ಜ್ಞಾನಿಗಳಾಗಿರುತ್ತಾರೆ. ಈಗ ತಾಂತ್ರಿಕತೆಯ ಅಳವಡಿಕೆಯ ಬಗ್ಗೆ, ಇತ್ತಿಚಿನ ಹೊಸ ಹೊಸ ಬೆಳವಣಿಗೆಗಳ ಬಗ್ಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವತ್ತ ಶಿಕ್ಷಕರ ಪಾತ್ರಗಳು ರೂಪಾಂತರಗೊಳ್ಳಬೇಕಿರುತ್ತದೆ, ಔದ್ಯೋಗಿಕ ಕ್ಷೇತ್ರಗಳಲ್ಲಿ ಬದಲಾಗುತ್ತಿರುವ ಬೇಡಿಕೆಗಳಿಗೆ ಪ್ರತಿಕ್ರಿಯಾಶೀಲರಾಗಿರಬೇಕಿರುತ್ತದೆ, ಯಾವುದೇ ಶಿಕ್ಷಣ ಸಂಸ್ಥೆಯ ಪ್ರಮುಖ ಭಾಗೀದಾರರಾದ ವಿದ್ಯಾರ್ಥಿ ಸಮುದಾಯದ ಶೈಕ್ಷಣಿಕ ಅವಶ್ಯಕತೆಗಳ ಕುರಿತು ಸಕ್ರಿಯಶೀಲರಾಗಿರಬೇಕಿರುತ್ತದೆ, ಎಂದು ವ್ಯಕ್ತಪಡಿಸಿದರು.
ಡಾ.ಎನ್.ಆರ್.ಪರಶುರಾಮನ್,ಅವರು ಸಭಿಕರನ್ನುದ್ದೇಶಿಸಿ ಮಾತನಾಡುವಾಗ, ಸೈಂಟ್ ಫಿಲೋಮಿನಾಸ್ ಕಾಲೇಜ್ ನ ಆಂತರಿಕ ಗುಣಮಟ್ಟ ಅಳವಡಿಕೆಯ ಕೋಶ (ಐ ಕ್ಯು ಎ ಸಿ) ವು ಶಿಕ್ಷಕರ ನೆರವಿಗಾಗಿ ಶಿಕ್ಷಕ ವರ್ಗ ಅಭಿವೃಧ್ಧಿ ಕಾರ್ಯವನ್ನು ನೀಡುವುದರಲ್ಲಿ ಮಾಡುತ್ತಿರುವ ಶ್ರಮವನ್ನು ಪ್ರಶಂಸಿಸಿದರು. ಅಂತೆಯೇ ಮುಂದುವರಿದು, ಬೋಧನಾ ಸಮುದಾಯದ ಸಾಮರ್ಥ್ಯ ದಕ್ಷತೆ ಮತ್ತು ವಿಶ್ವಾಸವನ್ನು ಅವರಲ್ಲಿ ನೆಲೆಗೊಳಿಸಲು ಈ ರೀತಿಯ ಕಾರ್ಯಕ್ರಮಗಳು ನಿಯತಕಾಲಿಕವಾಗಿ ಸಂಯೋಜಿಸಬೇಕೆಂದು ವಿವರಿಸಿದರು.
ಈ ಸಂದರ್ಭಲ್ಲಿ ಮಾತನಾಡಿದ ರೆವೆರೆಂಡ್. ಫಾದರ್.ಡಾ. ಬರ್ನಾರ್ಡ್ ಪ್ರಕಾಶ್ ಬಾರ್ನಿಸ್ ಅವರು, ಗುಣಮಟ್ಟ ಶಿಕ್ಷಣ ನೀಡುವುದರಲ್ಲಿ ಅಡ್ಡಿ ಬರುವ ಅಡಚಣೆಗಳನ್ನು ತೊಡೆದು ಹಾಕಲು ಶೈಕ್ಷಣಿಕ ತಾಂತ್ರಿಕತೆಯು ನೆರವಾಗುವುದು ಎಂದು ಅಭಿಪ್ರಾಯ ಪಟ್ಟರು. ಡಾ.ಗಾಯತ್ರಿ ಯವರು ಕಾರ್ಯಕ್ರಮವನ್ನು ಸಂಘಟಿಸಿದ ಎರಡೂ ಸಂಸ್ಥೆಗಳ ಶ್ರಮವನ್ನು ಪ್ರಶಂಸಿಸಿದರು. ಎಸ್ ಡಿ ಎಮ್ ಐ ಎಮ್ ಡಿ; ಸಂಸ್ಥೆಯ ಇನ್ನಿತರ ಸಂಪನ್ಮೂಲ ವ್ಯಕ್ತಿಗಳಾದ, ಡಾ. ಸುನಿಲ್. ಎಮ್.ವಿ, ಗ್ರಂಥಪಾಲಕರು, ಪ್ರೊಫೆಸರ್.ಮಿನ್ಹಜ್, ಶಿಕ್ಷಕವರ್ಗ-ವ್ಯವಸ್ಥೆಗಳು; ಡಾ.ವಿನಯ್, ಸ್ಥಾಪಕ ಮತ್ತು ಸಿ ಇ ಒ. ಪೈರೂಬಿ ಮತ್ತು ಸೈಂಟ್ ಫಿಲೋಮಿನಾಸ್ ಕಾಲೇಜ್ ನ ಸಂಯೋಜಕರಾದ ಶ್ರೀ. ರೊನಾಲ್ಡ್ ಪ್ರಕಾಶ್ ಕುಟಿನ್ಹಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಭಾಗವಹಿಸಿದವರಿಗೆ ಪ್ರಮಾಣಪತ್ರಗಳನ್ನು ವಿತರಿಸುವ ಮತ್ತು ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು೨೦೧೯ರ ಮಾರ್ಚ್ ೨೨ನೇ ದಿನಾಂಕದಂದು ನಡೆಯಿತು. ಪ್ರೊಫೆಸರ್. ಅಗ್ನಿಸ್ಡಿ’ಸೌಜ಼ಾ, ಮುಖ್ಯಸ್ಥೆ ವಿಜ್ಞಾನವಿಭಾಗ, ಸೈಂಟ್ ಫಿಲೋಮಿನಾಸ್ ಕಾಲೇಜ್, ಮೈಸೂರು. ಇವರು ಸಮಾರೋಪ ಭಾಷಣವನ್ನು ಮಾಡಿ ಪ್ರಮಾಣ ಪತ್ರಗಳನ್ನು ನೀಡಿದರು. ನಂತರದಲ್ಲಿ, ಭಾಗವಹಿಸಿದವರು ಕಾರ್ಯ ಕ್ರಮದ ಬಗ್ಗೆ ಮಾಹಿತಿಯನ್ನು ನೀಡುತ್ತಾ ತಮ್ಮ ತೃಪ್ತಿಯನ್ನು ವ್ಯಕ್ತಪಡಿಸಿದರು.