Back

ಲಭ್ಯವಿರುವ ಸೌಲಭ್ಯಗಳು
ಃoಥಿs’ ಊosಣeಟ
ಪುರುಷರ ವಿದ್ಯಾರ್ಥಿ ನಿಲಯ
ಪುರುಷರ ವಿದ್ಯಾರ್ಥಿ ನಿಲಯವು ಕಾಲೇಜಿನಷ್ಟೇ ಹಳೆಯದ್ದಾಗಿರುತ್ತದೆ. ಇದು ಒಂದು ಯೋಗ್ಯ ವಸತಿಯನ್ನು ಒದಗಿಸುವುದರೊಂದಿಗೆ, ಸಹಯೋಗಿತ್ವ ಮತ್ತು ಜವಾಬ್ದಾರಿ, ಒಡಗೂಡಿಕೊಳ್ಳುವ ಭಾವನೆ ಮತ್ತು ಅನ್ಯೋನ್ಯತೆ,ಈ ಎಲ್ಲಾ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಅನುವಾಗುವಂತಹ ಹಾಗೂ ಪರಸ್ಪರ ಹಂಚಿಕೆ ಮತ್ತು ಪರಸ್ಪರ ಕಾಳಜಿಯನ್ನು ಮೈಗೂಡಿಸಿಕೊಳ್ಳುವಂತಹ ಅತ್ಯುತ್ತಮ ಹಾಗೂ ಅಹ್ಲಾದಕರ ವಾತಾವರಣವನ್ನೂ ಒದಗಿಸುತ್ತದೆ. ಪುರುಷರ ವಿದ್ಯಾರ್ಥಿ ನಿಲಯ ದ ವಸತಿಯು ವಾಸಿಸುವವರಲ್ಲಿ ಭ್ರಾತೃತ್ವದ ಭಾವನೆ ಬೆಳೆಯಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಲಭ್ಯವಿರುವ ಸಮಯದ ಗರಿಷ್ಠ ಬಳಕೆಗೆ ಇದು ನೆರವು ನೀಡುತ್ತದೆ.

ಊosಣeಟ ಚಿmeಟಿiಣies
ಹಾಸ್ಟೆಲ್ ನಲ್ಲಿ/ ವಿದ್ಯಾರ್ಥಿ ನಿಲಯದಲ್ಲಿ ಲಭ್ಯವಿರುವ ಸವಲತ್ತುಗಳು / ಸೌಕರ್ಯಗಳು

 1. ಊಟದ ವ್ಯವಸ್ಥೆ –ನೈರ್ಮಲ್ಯವುಳ್ಳ ಸ್ಥಳದಲ್ಲಿ ತಯಾರಿಸಿದ ತಾಜಾ, ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ
 2. ಸರ್ವೋಪಯೋಗಿ ಕೊಠಡಿ –ಈ ಕೊಠಡಿಯಲ್ಲಿ ಟೆಲಿವಿಜ಼ನ್ ಮತ್ತು ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ವೃತ್ತ ಪತ್ರಿಕೆಗಳು ಮತ್ತು ವಾರ ಪತ್ರಿಕೆ, ಮಾಸಪತ್ರಿಕೆಗಳು ಈ ಮುಂತಾದ ನಿಯತ ಕಾಲಿಕೆಗಳ (ಮ್ಯಾಗಝಿನ್) ಸಂಗ್ರಹಣೆ ಲಭ್ಯವಿರುತ್ತವೆ.
 3. ಸುವ್ಯವಸ್ಥಿತ ವೇಳಾಪಟ್ಟಿ –(ಕಾಲೇಜಿನ ವೇಳಪಟ್ಟಿಯೊಂದಿಗೆ) ವಿದ್ಯಾರ್ಥಿಗಳ ದಿನಂಪ್ರತಿ ವೇಳಾಪಟ್ಟಿಯಲ್ಲಿ ಸ್ವ-ಅಧ್ಯಯನ, ಕ್ರೀಡೆ, ಮನೋರಂಜನೆ ಮತ್ತು ವಿಶ್ರಾಂತಿ ಇವೆಲ್ಲವಕ್ಕೂ ಸೂಕ್ತ ಸಮಯಗಳನ್ನು ಅಳವಡಿಸಲಾಗಿರುತ್ತದೆ.
 4. ಟೆಲಿವಿಜ಼ನ್ ಕೊಠಡಿಗಳು, ಓದಲು ಆರಾಮ ಕೊಠಡಿಗಳು, ಸ್ನೂಕರ್ ಆಟದ ಮೇಜುಗಳು, ಹಾಗೂ ಅಧ್ಯಯನಕ್ಕಾಗಿ ಪ್ರತ್ಯೇಕ ಸ್ಥಳಗಳನ್ನು ಒದಗಿಸಲಾಗಿರುತ್ತದೆ.
 5. ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹಾಸ್ಟೆಲ್ ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳ ಸಾಧನ ಸಲಕರಣೆಗಳಿಂದ ಸುಸಜ್ಜಿತವಾಗಿರುತ್ತದೆ. ವ್ಯಾಯಾಮ ಶಾಲೆಯನ್ನು ಉಪಯೋಗಿಸಲು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಗುತ್ತದೆ.
 6. ಲೇಖನ ಸಾಮಗ್ರಿಗಳ ಅಂಗಡಿ
 7. ರಾಷ್ಟ್ರೀಕೃತ ಬ್ಯಾಂಕ್ ಮತ್ತು ಎ ಟಿ ಎಮ್ ಕೇಂದ್ರ
 8. ಹಬ್ಬ ಹರಿದಿನ ಮತ್ತು ಇನ್ನಿತರಸಮಯ ಸಂದರ್ಭ ಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳುವಿದ್ಯಾರ್ಥಿ ನಿಲಯದ ವಾರ್ಡನ್/ಮೇಲ್ವಿಚಾರಕರ ಮೂಲಕ ವಿದ್ಯಾರ್ಥಿಗಳಿಗೆ ದೂರವಾಣಿ/ಟೆಲಿಫೋನ್ ಬಳಸಲು ಅನುಕೂಲವಿರುತ್ತದೆ. ವಿದ್ಯಾರ್ಥಿ ನಿಲಯದ ಕಛೇರಿಯ ಮೂಲಕ ಪೋಷಕರು ವಿದ್ಯಾರ್ಥಿಗಳನ್ನು ಸಂಪರ್ಕಿಸ ಬಹುದು.
 9. ವಿದ್ಯಾರ್ಥಿಗಳ ಯೋಗಕ್ಷೇಮವನ್ನು ನೋಡಿಕೊಳ್ಳಲೆಂದು ಗೃಹ ಸಿಬ್ಬಂದಿಗಳ ಒಂದು ತಂಡವಿರುತ್ತದೆ.
 10. ವಿದ್ಯಾರ್ಥಿಗಳಿಗೆ ನಿರಂತರವಾಗಿ ರಕ್ಷಣೆ ಮತ್ತು ಮಾರ್ಗದರ್ಶನ ನೀಡಲು ಹಿರಿಯ ಶಿಕ್ಷಕರೊಬ್ಬರು ನಿವಾಸಿ ವಾರ್ಡನ್ ನಾಗಿ ಇರುತ್ತಾರೆ.

ಉiಡಿಟs’ ಊosಣeಟ
ಮಹಿಳೆಯರ ವಿದ್ಯಾರ್ಥಿ ನಿಲಯ
ಹುಡುಗಿಯರ / ಮಹಿಳೆಯರಹಾಸ್ಟೆಲ್ / ವಿದ್ಯಾರ್ಥಿ ನಿಲಯ- “ ಮನೆಯಿಂದ ದೂರವಿರುವ ಮತ್ತೊಂದು ಮನೆ”

ಕಾಲೇಜಿನ ಕ್ಷೇತ್ರಾವರಣದೊಳಗಿರುವ ಈ ಹಾಸ್ಟೆಲ್ ಸುರಕ್ಷಿತವಾದ ೪ ಮಹಡಿಗಳ ಕಟ್ಟಡವನ್ನು ಒಳಗೊಂಡಿರುತ್ತದೆ. ಇದು ಹಿತಕರ ವಸತಿಯನ್ನು ಒದಗಿಸುವುದರೊಂದಿಗೆ, ಸಹಯೋಗಿತ್ವ ಮತ್ತು ಜವಾಬ್ದಾರಿ ಬೆಳೆಸಿಕೊಳ್ಳಲು ಅನುವಾಗುವಂತಹ ಅತ್ಯುತ್ತಮ ಪರಿಸರವನ್ನು ಒದಗಿಸುತ್ತದೆ. ಮನೆಯಿಂದಾಚೆ ದೂರದಲ್ಲಿರುವ ಮತ್ತೊಂದು ಮನೆಯಾಗಿದ್ದು ಇಲ್ಲಿ ಯುವ ವಿದ್ಯಾರ್ಥಿನಿಯರು ಒಡಗೂಡಿ ಒಟ್ಟಾಗಿ ಇರುವ ಹುರುಪನ್ನು ಹಾಗೂ ಪರಸ್ಪರ ಹಂಚಿಕೆ ಮತ್ತು ಪರಸ್ಪರ ಕಾಳಜಿ – ಈ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಹಾಸ್ಟೆಲ್ ವಸತಿಯು ವಾಸಿಸುವವರಲ್ಲಿ ಭ್ರಾತೃತ್ವದ ಭಾವನೆ ಬೆಳೆಯಲು ಸಹಾಯ ಮಾಡುತ್ತದೆ. ವಿದ್ಯಾರ್ಥಿನಿಯರಿಗೆ ಲಭ್ಯವಿರುವ ಸಮಯದ ಗರಿಷ್ಠ ಬಳಕೆಗೆ ಇದು ನೆರವು ನೀಡುತ್ತದೆ.

ಹಾಸ್ಟೆಲ್ ಒಂದು ಸಂರಕ್ಷಿತ ವಾ-ಸ್ಥಾನವಾಗಿರುತ್ತದೆ. ಏಕೆಂದರೆ, ನಮಗೆ ವಿದ್ಯಾರ್ಥಿನಿಯರ ಭದ್ರತೆಯು ಅತಿ ಮುಖ್ಯವಾದ ವಿಷಯವಾಗಿರುತ್ತದೆ. ಹಾಸ್ಟೆಲ್ ಪರಿಸರ ಸ್ನೇಹಿ ವಾತಾವರಣವನ್ನು ಹೊಂದಿದ್ದು, ಸುತ್ತ ಮುತ್ತಲೂ ಹೂವಿನ ಗಿಡಗಳನ್ನು, ಮಾವು, ಬೇವು, ತೆಂಗು ಈ ಮೊದಲಾದ ಮರಗಳನ್ನೊಳಗೊಂಡಿರುವ ಸ್ವಚ್ಛ ಹಾಗೂ ಆರೋಗ್ಯಕರ ತಾಣವಾಗಿರುತ್ತದೆ.
.
ಖಿhe ಚಿmeಟಿiಣies ಜಿoಡಿ ಣhe hosಣeಟeಡಿs

 1. ಊಟದ ವ್ಯವಸ್ಥೆ – ನೈರ್ಮಲ್ಯವುಳ್ಳ ಸ್ಥಳದಲ್ಲಿ ತಯಾರಿಸಿದ ತಾಜಾ, ಆರೋಗ್ಯಕರ, ಮತ್ತು ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ.
 2. ಸರ್ವೋಪಯೋಗಿ ಕೊಠಡಿ – ಈ ಕೊಠಡಿಯಲ್ಲಿ ಟೆಲಿವಿಜ಼ನ್ ಮತ್ತು ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ವೃತ್ತ ಪತ್ರಿಕೆಗಳು ಮತ್ತು ವಾರ ಪತ್ರಿಕೆ, ಮಾಸಪತ್ರಿಕೆಗಳು ಈ ಮುಂತಾದ ನಿಯತ ಕಾಲಿಕಗಳ (ಮ್ಯಾಗಝಿನ್) ಸಂಗ್ರಹಣೆ ಲಭ್ಯವಿರುತ್ತವೆ.
 3. ಸುವ್ಯವಸ್ಥಿತ ವೇಳಾಪಟ್ಟಿ – (ಕಾಲೇಜಿನ ವೇಳಪಟ್ಟಿಯೊಂದಿಗೆ) ವಿದ್ಯಾರ್ಥಿಗಳ ದಿನಂಪ್ರತಿ ವೇಳಾಪಟ್ಟಿಯಲ್ಲಿ ಸ್ವ-ಅಧ್ಯಯನ, ಕ್ರೀಡೆ, ಮನೋರಂಜನೆ ಮತ್ತು ವಿಶ್ರಾಂತಿ ಇವೆಲ್ಲವಕ್ಕೂ ಸೂಕ್ತ ಸಮಯಗಳನ್ನು ಅಳವಡಿಸಲಾಗಿರುತ್ತದೆ
 4. ಟೆಲಿವಿಜ಼ನ್ ಕೊಠಡಿಗಳು, ಓದಲು ಆರಾಮ ಕೊಠಡಿಗಳು, ಸ್ನೂಕರ್ ಆಟದ ಮೇಜುಗಳು, ಹಾಗೂ ಅಧ್ಯಯನಕ್ಕಾಗಿ ಪ್ರತ್ಯೇಕ ಸ್ಥಳಗಳನ್ನು ಒದಗಿಸಲಾಗಿರುತ್ತದೆ.
 5. ವಿದ್ಯಾರ್ಥಿನಿಯರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹಾಸ್ಟೆಲ್ ನಲ್ಲಿ ಒಳಾಂಗಣ ಹಾಗೂ ಹೊರಾಂಗಣಗಳು, ಕ್ರೀಡೆಗಳ ಸಾಧನ ಸಲಕರಣೆಗಳಿಂದ ಸುಸಜ್ಜಿತವಾಗಿರುತ್ತದೆ. ವ್ಯಾಯಾಮ ಶಾಲೆಯನ್ನು ಉಪಯೋಗಿಸಲು ವಿದ್ಯಾರ್ಥಿನಿಯರಿಗೆ ಉತ್ತೇಜನ ನೀಡಲಾಗುತ್ತದೆ.  ರಾಷ್ಟ್ರೀಕೃತ ಬ್ಯಾಂಕ್ ಮತ್ತು ಎ ಟಿ ಎಮ್ ಕೇಂದ್ರ
 6. ಲೇಖನ ಸಾಮಗ್ರಿಗಳ ಅಂಗಡಿ
 7. ರಾಷ್ಟ್ರೀಕೃತ ಬ್ಯಾಂಕ್ ಮತ್ತು ಎ ಟಿ ಎಮ್ ಕೇಂದ್ರ
 8. ಹಬ್ಬ ಹರಿದಿನ ಮತ್ತು ಇನ್ನಿತರ ಸಮಯ ಸಂದರ್ಭ ಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು
 9. ಹಾಸ್ಟೆಲ್ ನ ವಾರ್ಡನ್/ಮೇಲ್ವಿಚಾರಕರ ಮೂಲಕ ವಿದ್ಯಾರ್ಥಿಗಳಿಗೆ ದೂರವಾಣಿ/ಟೆಲಿಫೋನ್ ಬಳಸಲು ಅನುಕೂಲವಿರುತ್ತದೆ. ಹಾಸ್ಟೆಲ್ ನ ಕಛೇರಿಯ ಮೂಲಕ ಪೋಷಕರು ವಿದ್ಯಾರ್ಥಿಗಳನ್ನು ಸಂಪರ್ಕಿಸ ಬಹುದು.
 10. ಸಂಪೂರ್ಣ ಕಾಳಜಿಯೊಂದಿಗೆ ವಿದ್ಯಾರ್ಥಿನಿಯರ ಯೋಗಕ್ಷೇಮವನ್ನು ನೋಡಿಕೊಳ್ಳಲೆಂದು ಗೃಹ ಸಿಬ್ಬಂದಿಗಳ ಒಂದು ತಂಡವಿರುತ್ತದೆ.
 11. ನಿವಾಸಿ ವಾರ್ಡನ್ ಒಬ್ಬ ಹಿರಿಯ ಶಿಕ್ಷಕಿಯಾಗಿದ್ದು ಅವರು ವಿದ್ಯಾರ್ಥಿನಿಯರಿಗೆ ಸಹಾಯ ಮತ್ತು ಮಾರ್ಗದರ್ಶನ ನೀಡಲು ಯಾವಾಗಲೂ ಬಧ್ಧರಾಗಿರುತ್ತಾರೆ.

ಬ್ಯಾಂಕ್ ಮತ್ತು ಎ ಟಿ ಎಮ್
ನಮ್ಮ ಕಾಲೇಜಿನ ಆವರಣದಲ್ಲಿ ೨ ಎ ಟಿ ಎಮ್ ಕೌಂಟರ್ (ಎ ಟಿ ಎಮ್ ಮಂಟಪ)ಗಳಿರುತ್ತವೆ. ಇವುಗಳಲ್ಲಿ ಒಂದು ಸಿಂಡಿಕೇಟ್ ಬ್ಯಾಂಕ್ ಗೆ ಸೇರಿರುತ್ತದೆ, ಮತ್ತೊಂದು ಸೌತ್ ಇಂಡಿಯನ್ ಬ್ಯಾಂಕ್ ಗೆ ಸೇರಿರುತ್ತದೆ.

ಬ್ಯಾಂಕ್ ರಜೆದಿನಗಳ ಮತ್ತು ಸಾರ್ವಜನಿಕ ರಜಾದಿನಗಳ ಬಗ್ಗೆ ಚಿಂತಿಸುವ ಅಗತ್ಯವಿರುವಿದಿಲ್ಲ. ದಿನದ ೨೪ ಗಂಟೆಗಳು ಹಾಗೂ ವಾರದ ೭ ದಿನಗಳೂ ಮತ್ತು ವರ್ಷದುದ್ದಕ್ಕೂ ಬ್ಯಾಂಕ್ ವ್ಯವಹಾರ ಮಾಡಲು ಸೌಲಭ್ಯವಿರುತ್ತದೆ. ಕಾಲೇಜಿನ ಸಿಬ್ಬಂದಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಕೇವಲ ಬಟನ್ ಗಳನ್ನು ಒತ್ತಿ ಬ್ಯಾಂಕ್ ವ್ಯವಹಾರಮಾಡಿ ಅದರ ಹಲವಾರು ಸವಲತ್ತುಗಳನ್ನು ಅನುಭೋಗಿಸಬಹುದು:

 • ತ್ವರಿತ ನಗದು ಹಿಂತೆಗೆದುಕೊಳ್ಳುವಿಕೆ
 • ಖಾತೆ ಸಮತೋಲನ ವಿಚಾರಣೆ
 • ಹಣವನ್ನು ಹಿಂತೆಗೆದುಕೊಳ್ಳುವುದು
 • ಸುಪ್ತವಾಗಿರುವ ಖಾತೆಯನ್ನು ಉಳಿಸಿಕೊಳ್ಳುವುದು
 • ಕಿರು ಲೆಕ್ಕಪಟ್ಟಿ (ಮಿನಿ ಸ್ಟೇಟ್ ಮೆಂಟ್) ಮೂಲಕ ಇತ್ತೀಚಿನ ವ್ಯವಹಾರಗಳ ವಿವರಗಳು
 • ಯಾವುದೇ ಸಮಯದಲ್ಲಿ ನಗದು / ಚೆಕ್ ಗಳನ್ನು ಠೇವಣಿ ಮಾಡಬಹುದು
 • ಹೊಸ ಚೆಕ್ ಬುಕ್ ಗಾಗಿ ವಿನಂತಿ
 • ಖಾತೆಗಳ ನಡುವೆ ನೈಜ ಸಮಯದ ಆಧಾರದ ಮೇಲೆ ವರ್ಗಾವಣೆ ಮಾಡಬಹುದು.
 • ನಿತ್ಯೋಪಯುಕ್ತ ಬಿಲ್ ಗಳನ್ನು ಪಾವತಿಸಬಹುದು.

ಕ್ಯಾಂಟೀನು / ತಿಂಡಿಕಟ್ಟೆ
ಸೈಂಟ್ ಫಿಲೋಮಿನಾಸ್ ಕಾಲೇಜ್ ವತಿಯಿಂದ ಸ್ಥಾಪಿಸಲ್ಪಟ್ಟ ಕ್ಯಾಂಟೀನ್ ಅದರ ಆರಂಭದಿಂದಲೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಾಕಷ್ಟು ವೈವಿಧ್ಯತೆ, ವ್ಯಾಪಕತೆಯುಳ್ಳ ಆಹಾರ ಪದಾರ್ಥಗಳನ್ನು ಅವುಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಾತರಿಗೊಳಿಸಿಕೊಂಡು ಶುಧ್ಧ ಸ್ಥಿತಿಯಲ್ಲಿ ಒದಗಿಸುವುದು ಕಾಲೇಜ್ ನ ಗುರಿಯಾಗಿರುತ್ತದೆ. ಇದೇ ಗುರಿ ಇಟ್ಟುಕೊಂಡು ಆಹಾರ/ತಿಂಡಿ ಪೊಟ್ಟಣಗಳನ್ನು ಮಾರುವ ಒಂದು ಕಿಯೋಸ್ಕ್ ನ್ನೂ (ಕಟೆ ಕಟೆಯನ್ನೂ) ಸ್ಥಾಪಿಸಲಾಗಿದೆ. ಈ ಕ್ಯಾಂಟೀನು ಕಾಲೇಜಿನ ಸಮಾರಂಭಗಳಿಗೂ ಆಹಾರ ಸರಬರಾಜಿನ ಸೇವೆಯನ್ನು ದಕ್ಷತೆಯಿಂದ ಒದಗಿಸುತ್ತಿದೆ. ಆಹಾರ ಪೂರೈಕೆ ನಿರ್ವಹಣೆಯಲ್ಲಿ ಒಳ್ಳೆಯ ಅನುಭವವುಳ್ಳ ವ್ಯಕ್ತಿಯೋರ್ವರು ಈ ಕ್ಯಾಂಟೀನ್ ನ್ನು ನಡೆಸುತ್ತಿದ್ದಾರೆ. ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೂ ಸೇರಿದಂತೆ ಈ ಕ್ಯಾಂಟಿನ್ ಗೆ ಭೇಟಿ ಕೊಡುವವರ ಅತ್ಯಧಿಕ ಸೌಕರ್ಯಕ್ಕಾಗಿ ಕ್ಯಾಂಟೀನಿನ ಗುಣಮಟ್ಟವನ್ನು ಕಾಪಾಡಲು ಕಾಲೇಜಿನ ನಿರ್ವಹಣಾ ಸಮಿತಿಯು ಸಂಪೂರ್ಣವಾಗಿ ಬಧ್ಧವಾಗಿರುತ್ತದೆ. ಕಾಲೇಜಿಗೆ ಬಹುದೂರದ ಸ್ಥಳಗಳಿಂದ ಬರುವ ವಿದ್ಯಾರ್ಥಿಗಳು ನಮ್ಮ ಕ್ಯಾಂಟೀನ್ ಗೆ ಬಂದು ತಮ್ಮ ಹಸಿವು ದಾಹಗಳನ್ನು ತಣಿಸಿಕೊಳ್ಳಲು ಇಷ್ಟ ಪಡುತ್ತಾರೆ. ಪ್ಲಾಸ್ಟಿಕ್ ರಹಿತ, ಪರಿಸರ ಸ್ನೇಹಿ ಕ್ಷೇತ್ರಾವರಣದಲ್ಲಿರುವ ಕ್ಯಾಂಟೀನ್ ನ ಸುತ್ತ ಮುತ್ತಲಿನ ಪ್ರದೇಶವನ್ನು ಯಾವಾಗಲೂ ಸ್ವಚ್ಛವಾಗಿ ಓರಣವಾಗಿ ಇಡಲಾಗುತ್ತದೆ. ಭೋಜನ ಪ್ರಿಯರಿಗೆ ಈ ಕ್ಯಾಂಟೀನ್ ಒಂದು ವೈವಿಧ್ಯಮಯ ಎಡೆಯಾಗಿರುತ್ತದೆ.