Back

ನಮ್ಮ ಹಿಂದಿನ ಪ್ರಾಂಶುಪಾಲರು

ರೆ ಫಾ ಸಿ ಎ ಬ್ರೌನ್ (1946-1948)

 


ಬಿಷಪ್ ರೆನೆ ಫ್ಯೂಗರವರು ತಾವು ಸ್ಥಾಪಿಸಿದ ಈ ಕಾಲೇಜಿಗೆ ಮೊದಲ ಪ್ರಾಂಶುಪಾಲರಾಗಿ ಉತ್ಕøಷ್ಟರಾದವರನ್ನು ಹೆಕ್ಕಿ ತೆಗೆಯಬೇಕಾದಾಗ ಕಂಡದ್ದು ಶಿಸ್ತಿನ ಮತ್ತು ಜ್ಞಾನಿಯ ಮುಖಚಹರೆಯನ್ನು ಹೊಂದಿದ್ದ ಆಂಗ್ಲ ಮನುಷ್ಯ ರೆ ಫಾ ಸಿ ಎ ಬ್ರೌನ್‍ರವರು. ರೆ ಫಾ ಸಿ ಎ ಬ್ರೌನ್‍ರವರಿಗೆ ಆಗಾಗಲೇ ಬೆಂಗಳೂರಿನ ಸಂತ ಜೋಸೆಫರ ಕಾಲೇಜು, ಸೈಂಟ್ ಜೋಸೆಫ್ ಯುರೋಪಿಯನ್ ಹೈಸ್ಕೂಲ್ ಮತ್ತು ಸೈಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್‍ಗಳಲ್ಲಿ ದುಡಿದ ಅಗಾಧ ಅನುಭವ ಇತ್ತು. ಹೊಸ ಕಾಲೇಜಿಗೆ ಅಗತ್ಯವಿರುವುದು ಒಳ್ಳೆಯ ಅಧ್ಯಾಪಕರು ಎಂಬುದನ್ನು ಮನಗಂಡಿದ್ದ ಇವರು ಹೊಸ ಆವಿμÁ್ಕರಗಳ ಕಡೆಗೆ ಒಲವಿರುವ ಅಧ್ಯಾಪಕರನ್ನು ಹುಡುಕಿ ತೆಗೆದುಕೊಳ್ಳುತ್ತಿದ್ದರು. ಇಂತಹ ಒಳ್ಳೆಯ ಅಧ್ಯಾಪಕರ ಗುಂಪನ್ನು ಕಟ್ಟಿ ಅವರಿಗೆ ತಮ್ಮ ದೂರದೃಷ್ಟಿಯ ಯೋಜನೆಗಳ ಬಗ್ಗೆ ತಿಳಿಸಿ ಅವರು ನಿವೃತ್ತಿ ಹೊಂದುವವರೆಗೆ ಕಾಲೇಜಿಗಾಗಿ ನಿಸ್ವಾರ್ಥವಾಗಿ ದುಡಿಯುವ ತಮ್ಮ ಚಮತ್ಕಾರವನ್ನು ಅವರ ಮೇಲೆ ಪ್ರಯೋಗಿಸಿದರು. ನಂತರ, ಮೊದಲ ವಿದ್ಯಾರ್ಥಿಗಳು ಪದವಿ ಗಳಿಸಿದಾಗ ರೆ ಫಾ ಬ್ರೌನ್‍ರವರ ಮತ್ತು ಅಧ್ಯಾಪಕರ ತಂಡದ ನಿಸ್ವಾರ್ಥ ಸೇವೆ ಬಿಷಪ್ಪರು ಅವರ ಮೇಲೆ ಇರಿಸಿದ್ದ ನಂಬಿಕೆಯನ್ನು ಸಾಬೀತುಪಡಿಸಿತ್ತು. ರೆ ಫಾ ಬ್ರೌನ್‍ರವರು ಆಗಿನ್ನೂ ಹಸುಕಂದನಂತ್ತಿದ್ದ ಕಾಲೇಜಿಗೆ ಹಾಲುಣಿಸಿ ಬೆಳೆಸಿದರು, ಆನಂತರ, ಅನೇಕ ವರ್ಷಗಳ ಬಳಿಕ ರೆ ಫಾ ಬ್ರೌನ್‍ರವರು ಮರಣಿಸುವಾಗ ಸಂತ ಫಿಲೋಮಿನಾ ಕಾಲೇಜು ಅವರ ಹೃದಯದಲ್ಲಿ ಅಮರವಾಗಿ ಕೆತ್ತಲ್ಪಟ್ಟಿತ್ತು ಎಂಬುದು ಮಾತ್ರ ಸತ್ಯ.


ಶೆವ್ಲಿ ಸಿ ಜೆ ವರ್ಕಿ (1948-1951)

ರೆ ಫಾ ಬ್ರೌನ್‍ರವರ ಬಳಿಕ ಬಂದವರು ಇತಿಹಾಸ ತಜ್ಞ ಮತ್ತು ಉತ್ತಮ ಮೇಧಾವಿಯೂ ಆಗಿದ್ದ ಶೆವ್ಲಿ ಸಿ ಜೆ ವರ್ಕಿ, ಇವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸಿ. ರಾಜಗೋಪಾಲಾಚಾರಿಯವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಶಿಕ್ಷಣ ಮಂತ್ರಿಗಳಾಗಿದ್ದರು. ಆಗಿನ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದ ಬಿ.ಎಲ್.ಮಂಜುನಾಥ್‍ರವರ ಸ್ನೇಹಿತರು ಮತ್ತು ಸಲಹೆಗಾರರಾಗಿದ್ದರು. ಶೆವ್ಲಿ ಸಿ ಜೆ ವರ್ಕಿಯವರು 1951ರಲ್ಲಿ ಸಂತ ಫಿಲೋಮಿನಾ ಕಾಲೇಜನ್ನು ಅಗಲುವ ಸಮಯಕ್ಕಾಗಲೇ ತಮ್ಮ ದೂರದೃಷ್ಟಿಯುಳ್ಳ ಯೋಜನೆಗಳಿಂದ ಮತ್ತು ಕಠಿಣ ಪರಿಶ್ರಮದಿಂದ ಹಳೇ ಮೈಸೂರು ರಾಜ್ಯಕ್ಕೆ ಉತ್ಕøಷ್ಟ ಕಾಲೇಜಾಗಿ ಹೆಸರುವಾಸಿಪಡಿಸಿದ್ದರು.
ಶೆವ್ಲಿ ಸಿ ಜೆ ವರ್ಕಿಯವರ ಕಾರ್ಯಗಳಿಂದಾಗಿ ವಿಶಾಲ ಸಮಾಜದಲ್ಲಿ ಸಂತ ಫಿಲೋಮಿನಾ ಕಾಲೇಜು ಗುರಿ ಉದ್ದೇಶಿತ ಪ್ರಭಾವ ಬೀರಿತ್ತು. ಇವರ ಸಮಯದಲ್ಲೇ ಇಂದಿಗೂ ಈ ಕಾಲೇಜಿನ ಹೆಗ್ಗುರುತಾದ ವಿವಿಧ ದೇಶ-ಭಾμÉ-ಸಮುದಾಯಗಳ ಪ್ರಾಧ್ಯಾಪಕರ, ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಗಳ ವೈವಿಧ್ಯತೆಯ ಸೌಂದರ್ಯಕ್ಕೆ ಶಿಲಾನ್ಯಾಸವಾದುದು.


ರೆ ಫಾ ಡಾ ಜೆ ಬಿ ಫ್ರೀಮನ್ (1951-1952)

ಆಗಾಗಲೇ ಹೊತ್ತಿಸಿದ್ದ ದೀವಟಿಗೆ ಕೈಯಿಂದ ಕೈಗೆ ಬದಲಾಗುತ್ತಿತ್ತು, ಈಗ ಸ್ವಲ್ಪ ಸಮಯಕ್ಕೆ, ಖಗೋಳಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತ ಹಾಗೂ ವಿವಿಧ ವಿಷಯಗಳಲ್ಲಿ ಪಾಂಡಿತ್ಯಗಳಿಸಿದ್ದ ರೆ ಫಾ ಡಾ ಜೆ ಬಿ ಫ್ರೀಮನ್ ಅವರ ಆಗಮನವಾಯಿತು. ಫಾ ಫ್ರೀಮನ್‍ರವರು ಸಿಬ್ಬಂದಿಗಳ ಕೊಠಡಿಗಳಿಗೆ ಅಗತ್ಯವಾಗಿದ್ದ ಫ್ಯಾನ್‍ಗಳನ್ನು ಮತ್ತು ಪ್ರಯೋಗಶಾಲೆಗಳಿಗೆ ಅಗತ್ಯವಾಗಿದ್ದ ಉಪಕರಣಗಳನ್ನು ಒದಗಿಸಿ ಸರ್ವರ ಒಳಿತಿನ ಬಗ್ಗೆ ಪಾಂಡಿತ್ಯದ
ಜೊತೆಗೆ ಒಬ್ಬ ಮಾನವೀಯತೆಯನ್ನು ಮೆರೆದವರು. ರೆ ಫಾ ಡಾ ಜೆ ಬಿ ಫ್ರೀಮನ್‍ವರವ ಅಲ್ಪಾವಧಿಯಲ್ಲೇ ಮುಂದೆ ಈ ಸಂಸ್ಥೆಯ ಬೆಳವಣಿಗೆಗೆ ಬೇಕಾದ ಪ್ರೇರಣೆಯ ಅಡಿಗಲ್ಲು ಹಾಕಿದರು.


ರೆ ಫಾ ಔದೇ (1952-1960)

ರೆ ಫಾ ಔದೇ, ಸಂತ ಫಿಲೋಮಿನಾ ಕಾಲೇಜಿನ ಸ್ಥಾಪನೆಯ ಮುಖ್ಯ ವ್ಯಕ್ತಿಗಳ ತಂಡದಲ್ಲಿ ಒಬ್ಬರಾಗಿದ್ದರು. 1952ರಲ್ಲಿ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸುವುದಕ್ಕೆ ಮುಂಚೆಯೇ ಎಲ್ಲರೊಂದಿಗೆ ಸಂತೋಷದಿಂದ ಬೆರೆಯುವ ಈ ಫ್ರೆಂಚ್ ಮನುಷ್ಯ ಜೀವನೋತ್ಸಾಹಕ್ಕೆ ಹೆಸರುವಾಸಿಯಾಗಿದ್ದರು. ಅವರು ಎಷ್ಟು ಪ್ರಖ್ಯಾತರಾಗಿದ್ದರು ಎಂದರೆ ಮೈಸೂರು ನಗರಪಾಲಿಕೆ ಚುನಾವಣೆಯಲ್ಲಿ ಅವರು ವಾರ್ಡ್‍ನ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ರೆ ಫಾ ಔದೇ ಇಲ್ಲಿಗೆ ಬಂದದ್ದೇ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಮತ್ತು ಕೌಶಲ್ಯಗಳನ್ನು ತಮ್ಮ ಮಾತೃ ಭಾμÉಯಲ್ಲೇ ತೋರ್ಪಡಿಸಲು ಪ್ರೋತ್ಸಾಹ ನೀಡುತ್ತಿದ್ದರು. ಕಾಲೇಜಿನಲ್ಲಿದ್ದ ದೇಶದ ನಾನಾ ಭಾಗಗಳಿಂದ ಮಾತ್ರವಲ್ಲ ನಾನಾ ದೇಶಗಳಿಂದ ಬಂದಿರುವ ವಿದ್ಯಾರ್ಥಿಗಳ ಎಲ್ಲಾ ವೈವಿಧ್ಯತೆಗಳನ್ನು ಉತ್ಸವದಂತೆ ಕೊಂಡಾಡುತ್ತಿದ್ದರು. ಮುಂದೆ, ಫಾ ಲೆಸ್ಲಿ ಮೋರಾಸ್‍ರವರು ಪ್ರಾಂಶುಪಾಲರಾಗಿದ್ದಾಗ ರೆ ಫಾ ಔದೇ ಸಂತ ಫಿಲೋಮಿನಾ ಕಾಲೇಜಿಗೆ ಮರಳಿದ್ದರು, ಆಗ ಅವರಿಗೆ 90ರ ವಯಸ್ಸು ಆದರೆ ಅವರ ಕಣ್ಣುಗಳಲ್ಲಿನ ಮಿಂಚು ಇನ್ನೂ ಮಾಸಿರಲಿಲ್ಲ.


ರೆ ಫಾ ಎನ್ ಟಿ ಥಾಮಸ್

ರೆ ಫಾ ಎನ್ ಟಿ ಥಾಮಸ್ 1960ರಲ್ಲಿ ಕಾಲೇಜಿನ 5ನೇ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡು ಆರು ವರ್ಷಗಳ ಸದೃಢ ಆಡಳಿತವನ್ನು ನೀಡಿದರು. ಫಾ ಎನ್ ಟಿ ಥಾಮಸ್‍ರವರು ಪ್ರಾಂಶುಪಾಲರಾಗಿ ಅಧಿಕಾರ ಪಡೆದ ಇದೇ ಕಾಲೇಜಿನ ಮೊದಲ ವಿದ್ಯಾರ್ಥಿ. ಸರಳ, ದೀನ ಮತ್ತು ಪ್ರೀತಿಯುಳ್ಳ ಫಾ ಎನ್ ಟಿ ಥಾಮಸ್ ಅರ್ಥಶಾಸ್ತ್ರ ವಿಭಾಗ ಮತ್ತು ಕಾಲೇಜನ್ನು ಸಮರ್ಥವಾಗಿ ಮುನ್ನಡೆಸಿದರು. ವಿಷಯವನ್ನು ಕಲಿಸುವ ರೀತಿ ಮತ್ತು ಆಸಕ್ತಿ ಪದವಿಯಲ್ಲಿ ಅರ್ಥಶಾಸ್ತ್ರ ವಿಷಯವನ್ನು ಅನೇಕ ವಿದ್ಯಾರ್ಥಿಗಳು ಇವರ ಸಲುವಾಗಿಯೇ ತೆಗೆದುಕೊಳ್ಳುವಂತೆ ಮಾಡಿತ್ತು. ಆಘಾತ! ಕಾಲೇಜಿನ ಸರ್ವತೋಮುಖ ಏಳಿಗೆಗಾಗಿ ಸತತವಾಗಿ ದುಡಿಯುತ್ತಿದ್ದ ಫಾ ಎನ್ ಟಿ ಥಾಮಸ್‍ರವರ ಚೇತನ 1966ರಲ್ಲಿ ಕಾರು ಅಪಘಾತದಲ್ಲಿ ಅಂತ್ಯವಾಗಿ ಹೋಯಿತು.


ರೆ ಫಾ ಎ ಫ್ಲ್ಯೂರಿ (1966-1971)

 

ಫಾ ಎನ್ ಟಿ ಥಾಮಸ್‍ರವರ ಆಘಾತಕಾರಿ ಮರಣದ ನಂತರ ಆಗ ಉಪಪ್ರಾಂಶುಪಾಲರಾಗಿದ್ದ ಫಾ ಎ ಫ್ಲ್ಯೂರಿ ಅವರನ್ನು ಪ್ರಾಂಶುಪಾಲರ ಹುದ್ದೆಗೆ ಆಹ್ವಾನಿಸಲಾಯಿತು. ಫಾ ಎ ಫ್ಲ್ಯೂರಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀμï ಸ್ನಾತಕೋತ್ತರ ಪದವಿ ಗಳಿಸಿ, ಇಂಗ್ಲೀμï ವಿಭಾಗವನ್ನು ಮುನ್ನಡೆಸುತ್ತಿದ್ದವರು ಹಾಗೂ ಮೈಸೂರಿನ ಸಾಹಿತ್ಯ ಬಳಗದಲ್ಲಿ ಮೇರು ವ್ಯಕ್ತಿತ್ವ ಹೊಂದಿದವರಾಗಿದ್ದರು. ಕಾಲೇಜಿನ ಮುಖ್ಯಗ್ರಂಥ ಪಾಲಕರಾಗಿ, ಪ್ರಾಧ್ಯಾಪಕರಾಗಿದ್ದರೂ ಆಡಳಿತದಲ್ಲೂ ಕರ್ತವ್ಯಗಳನ್ನು ನಿಭಾಯಿಸುವುದರಲ್ಲೂ ಅವಿಶ್ರಾಂತರಾಗಿ ಯಶಸ್ವಿಯಾಗಿ ದುಡಿಯುತ್ತಿದ್ದರು. 1971ರಲ್ಲಿ ನಿವೃತ್ತಿಯಾಗುವವರೆಗೂ ಸಂದಿಗ್ಧ ಪರಿಸ್ಥಿತಿಗಳಲ್ಲಿ ದೃಢವಾಗಿ ನಿಂತು ಕಾಲೇಜಿನ ಹಡಗನ್ನು ಸ್ಥಿರವಾಗಿಯೂ ಭದ್ರವಾಗಿಯೂ ನಡೆಸಿದರು.


ರೆ ಫಾ ಫ್ರಾಂಕ್ ಡಿ’ಸೋಜಾ (1971-1977)

1971ನೇ ವರ್ಷದಲ್ಲಿ ಅಲ್ಲಿಯವರೆಗೆ ಫಾ ಎ ಫ್ಲ್ಯೂರಿಯವರಿಗೆ ಸಹಾಯಕರಾಗಿದ್ದ ಫಾ ಫ್ರಾಂಕ್ ಡಿ’ಸೋಜಾ ಮಿಲಿಟರಿಯಲ್ಲಿರುವಂತಹ ಶಿಸ್ತನ್ನು ತಂದರು. ಆಗ ಫಾ ಫ್ರಾಂಕ್ ಡಿ’ಸೋಜಾ ಪುರುಷರ
ಹಾಸ್ಟೆಲ್ ವಾರ್ಡನ್ ಆಗಿಯೂ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿಯೂ ಇದ್ದರು. ನೇರ ಮತ್ತು ಸರಳ ಭಾμÉಯಲ್ಲಿ ತಮಗನ್ನಿಸಿದ್ದನ್ನು ಯಾವುದೇ ಹಿಂಜರಿಕೆಯಿಲ್ಲದೆ ಹೇಳುವ ಗಟ್ಟಿ ಮನುಷ್ಯ. ಆದರೂ, ತಮಗೆ ಒಪ್ಪಿಸಿದ ಕೆಲಸವನ್ನು ಶ್ರದ್ಧೆಯಿಂದ ಪೂರ್ಣಗೊಳಿಸುವ ನಿಷ್ಪಕ್ಷಪಾತ ಮೃದುಹೃದಯಿ. ಇಂತಹ ವ್ಯಕ್ತಿತ್ವವುಳ್ಳವರು 1971ರಲ್ಲಿ ಕಾಲೇಜಿನ ಬೆಳ್ಳಿ ಮಹೋತ್ಸವವನ್ನು ಆಚರಿಸುವಾಗ ಆಡಳಿತದಲ್ಲಿದ್ದದ್ದು ಸುಕೃತವೇ ಆಗಿತ್ತು.


ರೆ ಫಾ ಥಾಮಸ್ ವಾಳಪಳ್ಳಿ (1977-1979)

ಫಾ ಫ್ರಾಂಕ್ ಡಿ’ಸೋಜಾರವರಿಂದ ಫಾ ಥಾಮಸ್ ವಾಳಪಳ್ಳಿಯವರು ಸೆಪ್ಟೆಂಬರ್ 1977ರಲ್ಲಿ ಅಧಿಕಾರ ಪಡೆವಾಗ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಪುರುಷರ ಹಾಸ್ಟೆಲ್‍ನ ವಾರ್ಡನ್ ಆಗಿದ್ದರು. ಆಗ ಕಾಲೇಜು ಹಣಕಾಸಿನ ಮುಗ್ಗಟ್ಟನ್ನು ಅನುಭವಿಸುತ್ತಿದ್ದ ಸಮಯ, ಫಾ ಥಾಮಸ್ ವಾಳಪಳ್ಳಿ ಇದ್ದ ಎಲ್ಲಾ ಸಂಪನ್ಮೂಲಗಳನ್ನು ಉಳಿಸಿ ಕ್ರೋಢಿಕರಿಸಿ ಪರಿಸ್ಥಿತಿಯನ್ನು ಸುಧಾರಿಸಿದರು. 1979ರಲ್ಲಿ ರೋಮ್‍ನ ಪ್ರೋಪಗೇಷನ್ ಆಫ್ ಫೆಯ್ತ್ ಸಭೆಯ ಕಾರ್ಯದರ್ಶಿಯೂ ಬೆಂಗಳೂರಿನ ಆಗಿನ ಮಹಾಧರ್ಮಾಧ್ಯಕ್ಷರೂ ಆಗಿದ್ದ ಕಾರ್ಡಿನಲ್ ಲೂರ್ದುಸ್ವಾಮಿ ನೂತನ ಲೈಬ್ರರಿ ಸಮುಚ್ಚಯಕ್ಕೆ ಶಿಲಾನ್ಯಾಸ ಮಾಡಿದರು. ಅದೇ ವರ್ಷ ಅಂದರೆ, 1979ರಲ್ಲಿ ಫಾ ಥಾಮಸ್ ವಾಳಪಳ್ಳಿಯವರು ಪಾಶ್ರ್ವವಾಯುಗೆ ಒಳಗಾಗಿ 17 ಅಕ್ಟೋಬರ್ 1979ರಲ್ಲಿ ಚಿರಶಾಂತಿಗೆ ಒಯ್ಯಲ್ಪಟ್ಟರು.


ರೆ ಫಾ ಥಾಮಸ್ ಎಳನ್ಜಿಕಾಟ್ (1979-1980)


ಆಗ ಭೌತಶಾಸ್ತ್ರ ವಿಭಾಗದಲ್ಲಿದ್ದ ರೆ ಫಾ ಥಾಮಸ್ ಎಳನ್ಜಿಕಾಟ್‍ರವರನ್ನು ಫಾ ಥಾಮಸ್ ವಾಳಪಳ್ಳಿಯವರ ಆಕಸ್ಮಿಕ ಮರಣದಿಂದ ತೆರವಾಗಿದ್ದ ಸ್ಥಾನವನ್ನು ತುಂಬಲು ಕರೆಯಲಾಯಿತು. ಅವರ ಅಲ್ಪಸಮಯಾವಧಿ ಆಗ ಅತ್ಯಗತ್ಯವಾಗಿದ್ದ ಪ್ರಯೋಗಶಾಲೆ ಉಪಕರಣಗಳನ್ನು ಪಡೆದುಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟಿತು. ಅವರ ಭೌತಶಾಸ್ತ್ರ ವಿಭಾಗದಲ್ಲಿ ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಭೌತಶಾಸ್ತ್ರ ಕೈಪಿಡಿ ಪುಸ್ತಕದ ಸೈಕ್ಲೋಸ್ಟೈಲ್‍ಗಳನ್ನು ಪಡೆಯಲು ಸಾಧ್ಯವಾಯಿತು. ಅವರು ಶ್ರದ್ಧಾ-ಭಕ್ತಿಯುಳ್ಳ ಯಾಜಕ, ತರಗತಿಯಲ್ಲಿ ಒಳ್ಳೆಯ ಶಿಕ್ಷಕ ಮತ್ತು ಉತ್ತಮ ಆಡಳಿತಗಾರ. ಸ್ವಭಾವತಃ ಮೃದು ಮಾತಿನ ಇವರು ಸ್ವಲ್ಪ ಕಾಲದಲ್ಲೇ ತಮ್ಮ ಸಹೋದ್ಯೋಗಿಗಳ ಹೃದಯವನ್ನು ಗೆದ್ದವರು.


ರೆ ಫಾ ವಲೇರಿಯನ್ ಡಿ’ಸೋಜ (1980-1992)


ರೆ ಫಾ ವಲೇರಿಯನ್ ಡಿ’ಸೋಜರವರು ಹನ್ನೆರಡು ವರ್ಷಗಳ ಕಾಲ ಹತ್ತನೆಯ ಪ್ರಾಂಶುಪಾಲರಾಗಿ ಇದ್ದರು. ರೆ ಫಾ ವಲೇರಿಯನ್ ಡಿ’ಸೋಜರವರು ಕನ್ನಡ, ಇಂಗ್ಲೀμï ಹಾಗೂ ಸಂವಹನ ಮತ್ತು ಮಾಧ್ಯಮ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಗಳಿಸಿದವರು. ಕನ್ನಡ ವಿಭಾಗದ ಚುಕ್ಕಾಣಿ ಹಿಡಿದರೂ ಇಂಗ್ಲೀμï ಸಾಹಿತ್ಯ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನೀಡುತ್ತಿದ್ದರು. ಅವರು ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದ ಒಳ್ಳೆಯ ಶಿಕ್ಷಕ, ಕಾಳಜಿಯುಕ್ತ ಪ್ರಾಂಶುಪಾಲ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯ ಆಡಳಿತಗಾರ. ಪ್ರತಿವಾರ ರೆ ಫಾ ಡಿ’ಸೋಜ ಪುಟ್ಟ ಪುಟ್ಟ ದೇಶ-ವಿದೇಶಗಳ ವ್ಯಕ್ತಿ-ವಿಷಯಗಳ ಸುದ್ದಿ ತುಣುಕುಗಳನ್ನು “ಪ್ರಿನ್ಸಿ’ಸ್ ಪ್ಲಾಟಿಟ್ಯೂಡ್” ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದರು. ವಿದ್ಯಾರ್ಥಿಗಳ ನಡುವೆ ಭಿನ್ನತೆ-ವ್ಯಾಜ್ಯಗಳನ್ನು ಸಂಭಾಷಣೆಯೊಂದಿಗೆ ಇತ್ಯರ್ಥ ಮಾಡಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದರು. ಇವರು ಪ್ರಕೃತಿಯನ್ನು ಪ್ರೀತಿಸುವ ಮತ್ತು ಕಾಲೇಜಿನ ಸುತ್ತಲನ್ನು ಗಿಡ-ಸಸಿಗಳಿಂದ ಅಲಂಕರಿಸುವ ಯಾವುದೇ ಪುಟ್ಟ ಅವಕಾಶವನ್ನೂ ಬಿಡಲಿಲ್ಲ. ಕಾಲೇಜಿನ ಒಳಬರುವ ಪ್ರತಿಯೊಬ್ಬರನ್ನು ಆಕರ್ಷಿಸುವ ಸಾಲು ಸಾಲು ನೇರವಾಗಿ ನಿಂತಿರುವ ಅಶೋಕ ಮರಗಳು ಫಾ ವಲೇರಿಯನ್‍ರವರನ್ನು ನೆನಪಿಸುತ್ತದೆ.


ರೆ ಫಾ ಲೆಸ್ಲಿ ಮೋರಾಸ್ (1992-2015)


ರೆ ಫಾ ಲೆಸ್ಲಿ ಮೋರಾಸ್‍ರವರು ಸಂತ ಫಿಲೋಮಿನಾ ಕಾಲೇಜಿನಲ್ಲಿ 23ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಹನ್ನೊಂದನೇ ಪ್ರಾಂಶುಪಾಲರು ಹಾಗೂ ಆನಂತರ ಇನ್ನೆರಡು ವರ್ಷಗಳು ನಿರ್ದೇಶಕರಾಗಿದ್ದವರು.
ರೆ ಫಾ ಲೆಸ್ಲಿ ಮೋರಾಸ್‍ರವರು ಕಾಲೇಜಿನ ಮೂಲಸೌಕರ್ಯಗಳನ್ನು ಮತ್ತು ಶೈಕ್ಷಣಿಕ ಏಳಿಗೆಯನ್ನು ತಂದುಕೊಟ್ಟವರು. ಇಂಗ್ಲೀμï ಸಾಹಿತ್ಯದ ನಿತ್ಯ ವಿದ್ಯಾರ್ಥಿಯಾಗಿ, ತಮ್ಮ ಕೂಲಂಕುಶ ಸೌಂದರ್ಯ ಪ್ರಜ್ಞೆಯಿಂದ ಕಾಲೇಜಿನ ದೃಶ್ಯವನ್ನೇ ಸ್ಪರ್ಶಿಸಿ ಮಾರ್ಪಡಿಸಿದರು.
ಬೃಹತ್ತಾಗಿದ್ದ ಕಾಲೇಜಿನ ಆವರಣಕ್ಕೆ ತಡೆಗೋಡೆ ನಿರ್ಮಿಸುವ ಮಹಾನ್ ಕಾರ್ಯವನ್ನು ಪ್ರಥಮ ಆದ್ಯತೆಯಾಗಿ ಕೈಗೊಂಡರು, ಆಗಿದ್ದ ನೂತನ ಲೈಬ್ರರಿ ಕಟ್ಟಡಕ್ಕೆ ಇನ್ನೂ ಮೂರು ಅಂತಸ್ತುಗಳನ್ನು ಸೇರಿಸಿದರು, ಐದು ಅಂತಸ್ತಿನ ಸ್ನೇಹನಿಲಯ ಎಂಬ ವಿದ್ಯಾರ್ಥಿನಿಯರ ಹಾಸ್ಟೆಲ್ಲನ್ನು ನಿರ್ಮಿಸಿದರು. ಹದಿಮೂರು ವಿಭಾಗಗಳಿರುವ ಸ್ವತಂತ್ರ ಹಾಗೂ ಆಕರ್ಷಣೀಯ ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನಾಲಯವನ್ನು, ಅದರೊಂದಿಗೆ, ದೃಕ್-ಶ್ರವಣ ಕಲಾ ಮಾಧ್ಯಮವಿರುವ ಕಲಾಮಂದಿರವನ್ನು ಸ್ಥಾಪಿಸಿದ್ದು ರೆ ಫಾ ಲೆಸ್ಲಿ ಮೋರಾಸ್‍ರವರ ಇನ್ನೊಂದು ಸಾಧನೆ.
ರೆ ಫಾ ಲೆಸ್ಲಿ ಮೋರಾಸ್‍ರವರು ಹೊರಾಂಗಣ ಕ್ರೀಡಾಂಗಣವನ್ನು ಮತ್ತು ಸುಮಾರು 1500 ಆಸನಗಳ ಮತ್ತು ಎಲ್ಲಾ ಆಧುನಿಕ ವ್ಯವಸ್ಥೆಯುಳ್ಳ ಬೃಹತ್ತಾದ ವಿವಿದೋದ್ಧೇಶದ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಿದರು. ಹಸಿರು ಮರಗಳ ನಡುವೆ ಹಚ್ಚಹಸಿರಿನ ಕೈತೋಟವನ್ನು ಎದುರಿಗೆ ಕಾಣುವಂತಿರುವ ಕ್ಯಾಂಟಿನ್ ಸುವರ್ಣ ಮಹೋತ್ಸವಕ್ಕೆ ಕಾಲೇಜಿಗೆ ಸೇರ್ಪಡೆಯಾದುದು. ಕಾರಂಜಿಗಳ ಮಧ್ಯೆ ಎತ್ತರದ ಸ್ತರದಲ್ಲಿ ಇರಿಸಿರುವ ಸಂತ ಫಿಲೋಮಿನಾರ ಪ್ರತಿಮೆ ಸುತ್ತಲಿನ ಸೌಂದರ್ಯವನ್ನು ಇನ್ನೂ ಹೆಚ್ಚಿಸುವಂತದ್ದು.
ಹಸಿರಿನ ಕರಗಳು ಎಂಬ ಗಾದೆಗೆ ಹೊಂದುವಂತೆ ರೆ ಫಾ ಲೆಸ್ಲಿ ಮೋರಾಸ್‍ರವರು ಕಾಲೇಜಿನ ಅಂಗಳದಲ್ಲಿ ನೂರಾರು ಮರಗಳನ್ನು, ಹೂ ಬಿಡುವ ಸಸಿಗಳನ್ನು ನೆಡೆಸಿ ಮತ್ತು ಸಭಾಂಗಣದ ಹಿಂಭಾಗದಲ್ಲಿ ವೈದ್ಯಕೀಯ ಗುಣಗಳಿರುವ ಸಸ್ಯಗಳ ಹಸಿರುಮನೆಯನ್ನು ನಿರ್ಮಿಸಿದರು. ಇದೆಲ್ಲಕ್ಕೂ ಮುಕುಟಪ್ರಾಯವಾಗಿರುವುದು, ಅಷ್ಟಕೋನದ ಬಿಷಪ್ ರೆನೆಫ್ಯೂಗರ ಸ್ಮರಣಾರ್ಥ ನಿರ್ಮಿಸಿರುವ ಪ್ರಾರ್ಥನಾಲಯ.
ಶೈಕ್ಷಣಿಕ ವಿಷಯದಲ್ಲಾದರೇ, ರೆ ಫಾ ಲೆಸ್ಲಿ ಮೋರಾಸ್ ಃSW, ಃಃಒ, ಃಅಂ, ಃಖಿಊಒ, ಃಗಿoಛಿ ಇತ್ಯಾದಿ ಹದಿಮೂರು ಕೋರ್ಸ್‍ಗಳನ್ನು ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳನ್ನು, ಜೊತೆಗೆ, ಸಂವಹನ ಮಾಧ್ಯಮ, ಮನಶಾಸ್ತ್ರ, ಕ್ರಿಮಿನಾಲಜಿ, ಫಂಕ್ಷನಲ್ ಇಂಗ್ಲೀμï, ಕಂಪ್ಯೂಟರ್ ಸೈನ್ಸ್, ಬಯೋ ಕೆಮಿಸ್ಟ್ರಿ, ಬಯೋ ಟೆಕ್ನೋಲಜಿ, ಮೈಕ್ರೋ ಬಯೋಲಜಿ, ಫೂಡ್ ಸೈನ್ಸ್ & ನ್ಯೂಟ್ರೀಷನ್, ಲೈಫ್ ಸ್ಕಿಲ್ಸ್, ಇಂಟರ್ ರಿಲಿಜಿಯಸ್ ಡಯಲಾಗ್, ಆಲ್ಟರ್ನೇಟ್ ಇಂಗ್ಲೀμï ಇನ್ನೂ ಇತ್ಯಾದಿ ವಿಷಯಗಳನ್ನು ಪ್ರಾರಂಭಿಸಿದರು.
33 ಅಂತರಾಷ್ಟ್ರೀಯ ಮತ್ತು ನಮ್ಮ ದೇಶದ 19 ವಿವಿಧ ರಾಜ್ಯಗಳ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ವಿದ್ಯಾರ್ಥಿಗಳ ಸಂಖ್ಯೆ ತೀವ್ರವಾಗಿ ಏರಿತು. ಇವರ ಸಮಯದಲ್ಲಿ ಕಾಲೇಜು ಅನೇಕ ಮೈಲುಗಲ್ಲುಗಳನ್ನು ಸಾಧಿಸಿತು: ಓಂಂಅ ಸಂಸ್ಥೆಯ 4 ಅಂಕದ ಅಳತೆಪಟ್ಟಿಯಲ್ಲಿ 2004ರಲ್ಲಿ ಂ3+ ಮತ್ತು 2014ರಲ್ಲಿ 3.58ರೊಂದಿಗೆ ಂ ಶ್ರೇಣಿಯನ್ನು ನೀಡಿತ್ತು. Uಉಅ ಮೊದಲಿಗೆ ಕಾಲೇಜನ್ನು “ಅತ್ಯುತ್ತಮದತ್ತ ಕಾಲೇಜು” ಮತ್ತು ನಂತರ “ಉತ್ತಮ ಕಾಲೇಜು” ಎಂದೂ 2011ರಲ್ಲಿ ಕಾಲೇಜಿಗೆ “ಸ್ವಾಯತ್ತ” ಶ್ರೇಣಿಯನ್ನು ಘೋಷಿಸಿತು.
ಫಾ ಮೋರಾಸ್‍ರವರು ಕಾಲೇಜಿನ ಬೆಳ್ಳಿ ಮಹೋತ್ಸವದ ಸಮಯದಲ್ಲಿ ಕಾಲೇಜಿನ ವಿದ್ಯಾರ್ಥಿಯಾಗಿ, ಸುವರ್ಣ ಮತ್ತು ವಜ್ರ ಮಹೋತ್ಸವದ ಸಮಯದಲ್ಲಿ ಪ್ರಾಂಶುಪಾಲರಾಗಿಯೂ, ಮೈಸೂರು ನಗರದ ಅತ್ಯಂತ ಪ್ರಾಚೀನವಾದ “ಹಳೇ ವಿದ್ಯಾರ್ಥಿ ಸಂಘ”ದ ಸುವರ್ಣ ಮತ್ತು ವಜ್ರ ಮಹೋತ್ಸವಗಳಲ್ಲಿ ತಾವೂ ಭಾಗಿಯಾಗುವ ಮತ್ತು ಏರ್ಪಡಿಸುವ ಅಪರೂಪದ ಅವಕಾಶಪಡೆದವರಾದರು. ಪ್ರಸ್ತುತ ಮೈಸೂರು ಧರ್ಮಕ್ಷೇತ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಅಧಿಕಾರಿಯಾಗಿ ಹಾಗೂ ಧರ್ಮಕ್ಷೇತ್ರದ ವಿವಿಧ ಆಡಳಿತ ಅಂಗಗಳಲ್ಲಿ ಸದಸ್ಯರಾಗಿ ಸೇವೆಯನ್ನು ಮುಂದುವರಿಸುತ್ತಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ವಲಯಗಳಲ್ಲೂ ಮತ್ತು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಶೈಕ್ಷಣಿಕ ವಲಯಗಳಲ್ಲೂ ಫಾ ಮೋರಾಸ್‍ರವರು ಗೌರವಕ್ಕೆ ಪಾತ್ರರಾಗಿದ್ದಾರೆ. ಇವರು ಮೈಸೂರು ವಿಶ್ವವಿದ್ಯಾಲಯದ ಇಂಗ್ಲೀμï ಭಾμÁ ಕಲಿಕೆ, ಶೈಕ್ಷಣಿಕ ಆಲೋಚನಾ ಮಂಡಳಿ, ಆಡಳಿತ ಮಂಡಳಿ ಮತ್ತು ವಿಶೇಷ ಸಮಿತಿಗಳಲ್ಲಿಯೂ ಸದಸ್ಯರಾಗಿದ್ದರು. 2012ರಿಂದ 2015ರವರೆಗೆ ಂIಂಅಊಇ (ಂಟಟ Iಟಿಜiಚಿ ಂssoಛಿiಚಿಣioಟಿ oಜಿ ಅhಡಿisಣiಚಿಟಿ ಊigheಡಿ ಇಜuಛಿಚಿಣioಟಿ) ನ ಅಧ್ಯಕ್ಷರಾಗಿಯೂ ನಂತರ ಉಪಾಧ್ಯಕ್ಷರಾಗಿಯೂ, ಘಿಚಿvieಡಿ ಃoಚಿಡಿಜ oಜಿ ಊigheಡಿ ಇಜuಛಿಚಿಣioಟಿ iಟಿ Iಟಿಜiಚಿ (2013-2019) ನಲ್ಲಿ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದಾರೆ. ಮೆಲ್ಬೋರ್ನ್‍ನಲ್ಲಿ, ಐರ್ಲೆಂಡಿನ ಮೆನ್ನೂತ್‍ನಲ್ಲಿ ಮತ್ತು ಬ್ರೆಜಿಲ್‍ನ ರಾಸಿಫ್‍ನಲ್ಲಿ ನಡೆದ ಖಿಡಿieಟಿಟಿiಚಿಟ ಅoಟಿಜಿeಡಿeಟಿಛಿe oಜಿ Iಟಿಣeಡಿಟಿಚಿಣioಟಿಚಿಟ ಈeಜeಡಿಚಿಣioಟಿ oಜಿ ಅಚಿಣhoಟiಛಿ Uಟಿiveಡಿsiಣies ನಲ್ಲಿ ಭಾಗವಹಿಸಿದ್ದರು.
ಫಾ ಲೆಸ್ಲಿ ಮೋರಾಸ್, 2017ರಲ್ಲಿ 35 ವರ್ಷಗಳ ಕಾಲ ಪ್ರಾಂಶುಪಾಲರಾಗಿ ದುಡಿದು ನಿರ್ಗಮಿಸುವಾಗ ಸಂತ ಫಿಲೋಮಿನಾ ಕಾಲೇಜು ತನ್ನ ಇತಿಹಾಸದ ಔನತ್ಯದಲ್ಲಿತ್ತು.


ಶ್ರೀ ಎಂ ಕೃμÉ್ಣಗೌಡ (2015-2017)


ಶ್ರೀ ಎಂ ಕೃμÉ್ಣಗೌಡರು ಫಾ ಲೆಸ್ಲಿ ಮೋರಾಸ್‍ರವರ ನಂತರ 1 ಜೂನ್ 2015ರಲ್ಲಿ ಕಾಲೇಜಿನ 12ನೇ ಪ್ರಾಂಶುಪಾಲರಾಗಿ ಬಂದವರು. ಇವರು ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿಗಳ ನಡುವೆ ಪ್ರಭಾವಿ ಮತ್ತು ಪ್ರಖ್ಯಾತರೂ, ವಿದ್ಯಾರ್ಥಿಗಳಿಗೆ ಪ್ರೀತಿಪಾತ್ರರೂ ಆಗಿದ್ದರು. ಇವರು ದೇಶ-ವಿದೇಶಗಳನ್ನು ಸುತ್ತಿ, ಕನ್ನಡ ನಾಡು-ನುಡಿ-ಸಾಹಿತ್ಯ-ಸಂಸ್ಕøತಿಗಳನ್ನು ಪ್ರಚುರಪಡಿಸಿದ ಪರಿಪೂರ್ಣ ಕೌಶಲ್ಯಭರಿತ ಗಾಯಕ. ಲೇಖಕ, ಹಾಸ್ಯಗಾರ, ಕವಿ ಮತ್ತು ಕಲೆಗಾರ. ಇವರನ್ನು 1996-1997ರಲ್ಲಿ ಕರ್ನಾಟಕ ಸರ್ಕಾರ ಮೈಸೂರು ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತ ಆಂದೋಲನದ ಮುಖ್ಯ ಮೇಲಧಿಕಾರಿಯನ್ನಾಗಿ ನೇಮಿಸಿತ್ತು. ಪ್ರಾಧ್ಯಾಪಕರಾಗಿ ತಮ್ಮ ಬೋಧನೆಗಳು ಮತ್ತು ವಾಕ್ಚಾತುರ್ಯದಿಂದ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಿದ್ದರು. ಇವರ ಸಮಯದಲ್ಲಿ Uಉಅ ಯಿಂದ ಮಹತ್ವದ ಅನುದಾನಗಳನ್ನು ಪಡೆದುಕೊಡುವದರಲ್ಲಿಯೂ ಮತ್ತು ಹೊಸ ಃ. ಗಿoಛಿ ಕೋರ್ಸ್‍ಗಳನ್ನು ಪ್ರಾರಂಭಿಸುವುದರಲ್ಲಿಯೂ ಯಶಸ್ವಿಯಾದರು.
ಶ್ರೀ ಎಂ ಕೃμÉ್ಣಗೌಡರು ತಮ್ಮ ಹಸನ್ಮುಖ ಮತ್ತು ಎಲ್ಲರನ್ನು ಸೆಳೆಯುವ ವ್ಯಕ್ತಿತ್ವದೊಂದಿಗೆ ಎಲ್ಲರ ಸ್ನೇಹಿತರಾಗಿದ್ದರು. ಒಮ್ಮೆ ಹಿತ ಚಿಂತಕರೊಬ್ಬರು ಇವರು ಹೇಗೆ ಎಲ್ಲವನ್ನೂ ಮಾಡಲು ಶಕ್ತಿಪಡೆಯುತ್ತಾರೆ ಎಂದು ಕೇಳಿದರು, ತಕ್ಷಣವೇ ಉತ್ತರ ಬಂತು, “ನಾನು ಸೈಂಟ್ ಫಿಲೋಮಿನಾಸ್ ಕಾಲೇಜಿಗೆ ಹೋಗುತ್ತೇನೆ”, ಅವರ ಈ ಮಾತು ಕಾಲೇಜಿನ ಮೇಲೆ ಅವರಿಗಿದ್ದ ಅಪಾರ ಗೌರವ, ಪ್ರೀತಿ-ಅಭಿಮಾನವನ್ನು ತೋರಿಸುತ್ತದೆ.