Back

ಧರ್ಮಾಧ್ಯಕ್ಷರೊಬ್ಬರ ಕನಸು ಹಾಗೂ ಮಹಾರಾಜರ ಉದಾರತೆ, ಇವೆರೆಡರ ಸಮ್ಮಿಲನವು 1946ನೇ ಇಸವಿಯ ಅಕ್ಟೋಬರ್ 6ನೇ ದಿನಾಂಕದಂದು ಸಂತ ಫಿಲೋಮಿನ ಕಾಲೇಜು ಎಂಬ ಮಹಾವಿದ್ಯಾಲಯದ ಪ್ರತಿಷ್ಠಾಪನೆಯಲ್ಲಿ ಮುಕ್ತಾಯಗೊಂಡಿತು. ಮೈಸೂರಿನ ಪ್ರಪ್ರಥಮ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ರೆನೆ ಫ್ಯೂಗಾ ಅವರು ತರಗತಿಗಳನ್ನು ನಡೆಸಲೆಂದು ತಮ್ಮ ಭವನವನ್ನು ಕಾಲೇಜ್ ಗಾಗಿ ಬಿಟ್ಟುಕೊಟ್ಟರು. ಧರ್ಮಕ್ಷೇತ್ರ ಕೈಗೊಂಡಿದ್ದ ಉನ್ನತ ಶಿಕ್ಷಣದ ಈ ಪ್ರಥಮ ಪ್ರಯತ್ನವನ್ನು ಮೈಸೂರಿನ ರಾಜಮನೆ ತನದವರಾದ ಒಡೆಯರ್ ಅವರು ಉತ್ತೇಜಿಸಿದರು. ಸಂತ ಫಿಲೋಮಿನ ಕಾಲೇಜು, ಮೈಸೂರಿನ ಶ್ರೀಮನ್ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರಿಂದಲೆ ಉದ್ಘಾಟನೆಗೊಂಡಿತು. ಇದು ಆ ಸಂಸ್ಥೆಗೆ ದೊರೆತ ಅಪೂರ್ವ ಗೌರವ ಹಾಗೂ ಸುಯೋಗ.
ಇಲ್ಲಿ ಒಂದೇ ಒಂದು ಮಾತ್ರವಲ್ಲ, ಹಲವಾರು ರೀತಿಗಳಲ್ಲಿ ಇತಿಹಾಸವು ಸ್ಥಾಪಿತಗೊಳ್ಳವುದರಲ್ಲಿದೆ ಎಂದು ಆ ಕಾಲೇಜಿನ ಮೊದಲ ತಂಡದ ವಿದ್ಯಾರ್ಥಿಗಳಾದ 380 ‘ಫಿಲೋಮನೈಟ್’ ಗಳಿಗೆ ಆಗಲೇ ಅರಿವಾಗಿತ್ತು. ರಾಜಪ್ರಭುತ್ವದ ಆಡಳಿತದಲ್ಲಿದ್ದ ನಗರದಲ್ಲಿರುವ ಹಾಗೂ ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ಅಂಗೀಕೃತಗೊಂಡಿರುವ ಮೊಟ್ಟಮೊದಲ ಖಾಸಗಿ ಪ್ರಥಮ ಶ್ರೇಣಿಯ ಮಹಾವಿದ್ಯಾಲಯದೊಳಗೆ ತಾವೆಲ್ಲರೂ ಅಡಿ ಇಡುತ್ತಿದ್ದೇವೆಂದು ಅವರಿಗೆ ತಿಳಿದಿತ್ತು. ಇದಕ್ಕಿಂತಲೂ ಮಖ್ಯವಾದದ್ದೆಂದರೆ, ಈ ಸಂತ ಫಿಲೋಮಿನ ಕಾಲೇಜು ಹಳೆಯ ಮೈಸೂರು ಪ್ರಾಂತ್ಯಲ್ಲಿ ವಿಜ್ಞಾನ ಶಾಸ್ತ್ರವನ್ನು ಭೋಧಿಸುವ ಮೊದಲ ಖಾಸಗಿ ಪದವಿ ಕಾಲೇಜಾಗಿತ್ತು.
ಸಂತ ಫಿಲೋಮಿನ ಕಾಲೇಜಿನ ಧ್ಯೇಯ ಸೂತ್ರವನ್ನು ಅದರ ಸ್ಥಾಪನೆಗೆ ಮೊದಲೇ, ಜಗದ್ಗುರುರವರಿಂದ ಸ್ವೀಕರಿಸಲಾಗಿತ್ತು. ವಿಶ್ವಗುರುರವರು, “Cartias vestra magic ac magis abundet in scientia”, ಅಂದರೆ, “ನಿನ್ನ ಪ್ರೀತಿ, ಜ್ಞಾನದ ಮೂಲಕ ಮತ್ತಷ್ಟೂ ಶ್ರೀಮಂತವಾಗಿ ಬೆಳೆಯಲಿ” ಎಂಬ ಸೂತ್ರವಾಕ್ಯವನ್ನು ಆಯ್ಕೆ ಮಾಡಿದ್ದರು. ಸೂತ್ರವಾಕ್ಯದ ಮೊದಲ ಮತ್ತು ಕೊನೆಯ ಪದಗಳಾದ Cartias in scientia -“ಜ್ಞಾನದಲ್ಲಿ ಪ್ರೀತಿ” ಸಂತ ಫಿಲೋಮಿನ ಕಾಲೇಜಿನ ಧ್ಯೇಯ ಸೂತ್ರವಾಯಿತು.

ಕಾಲೇಜಿನ ಕಿಶೋರಾವಸ್ಥೆಯ ವರುಷಗಳಲ್ಲಿ, ಅದರ ಭವಿಷ್ಯವು ಅತ್ಯಂತ ಸಾಮಥ್ರ್ಯವುಳ್ಳ ಶಿಕ್ಷಕರಿಂದ ರೂಪುಗೊಂಡಿತು. ಇಂತಹ ಶಿಕ್ಷಕರಲ್ಲಿ ಆಧುನಿಕ ಕನ್ನಡ ಕಾವ್ಯದ ಮುನ್ನಡೆಯಲ್ಲಿ ಪ್ರಮುಖರಾಗಿದ್ದ ಪ್ರೊಫೆಸರ್ ಗೋಪಾಲಕೃಷ್ಣ ಅಡಿಗ ಅವರು, ಹಾಗೂ ಐ ಎಸ್ ಆರ್ ಒ ಸಂಸ್ಥೆಯ ಪೂರ್ವ ಅಧ್ಯಕ್ಷರಾಗಿದ್ದ ಪ್ರೊಫೆಸರ್ ಯು.ಆರ್.ರಾವ್ ಅವರು ಮತ್ತು ಹಲವರಿದ್ದರು. ಹಲವಾರು ಉನ್ನತ ಮಾರ್ಗದರ್ಶಕರಾದ ಪ್ರಾಂಶುಪಾಲರು ಹಾಗೂ ಶಿಕ್ಷಕರೂ ಸಹ ಕಾಲೇಜನ ಭವಿಷ್ಯವನ್ನು ರೂಪಿಸುವುದರಲ್ಲಿ ಭಾಗಿಗಳಾಗಿದ್ದರು.
ಈಗ, 75 ವರ್ಷಗಳ ನಂತರ, ವಿದ್ಯಾರ್ಥಿ ಸಂಖ್ಯಾಬಲವು ಪರಿಪರಿಯಾಗಿ ಇಮ್ಮಡಿ, ಮುಮ್ಮಡಿಗೊಂಡಿದೆ. ಹೊಸ ಹೊಸ ಕಟ್ಟಡಗಳು ನಿರ್ಮಾಣಗೊಂಡು ಹಲವಾರು ಮೂಲ ವ್ಯವಸ್ಥೆಗಳ ಹಾಗೂ ವ್ಯಾಸಂಗ ವಿಷಯ ಸರಣಿಗಳ ಸಂಖ್ಯಾಭಿವೃಧ್ಧಿಯಾಗಿದೆ. ಪ್ರತಿ ವರ್ಷ, ಸಂತ ಪಿಲೋಮಿನ ಕಾಲೇಜು ಹೊಸದರೊಂದಿಗೆ ಹಳೆಯದನ್ನು ಸಮನ್ವಯ ಗೊಳಿಸುತ್ತಾ ಪ್ರಪಂಚದಲ್ಲಿ ಉಂಟಾಗುತ್ತಿರುವ ತ್ವರಿತ ಬದಲಾವಣೆಗಳಿಗೆ ಹೊಂದಿಕೊಳ್ಳಲು ತನ್ನನ್ನು ತಾನು ಪುನರ್- ಕಲ್ಪಿಸಿಕೊಳ್ಳುತ್ತದೆ. ಹಳೆಯ ವಿಭಾಗಗಳು-ಹೊಸ ವಿಭಾಗಳು – ಈ ಪ್ರಕ್ರಿಯೆ ಮುಂದುವರಿಯುತ್ತಲೇ ಇದ್ದು ಅದು ಕಾಲೇಜಿನ ಕ್ಷೇತ್ರ ವ್ಯಾಪ್ತಿಯ ವೈವಿಧ್ಯತೆಯನ್ನು ವೃಧ್ದಿಗೊಳಿಸುತ್ತಿದೆ. ಬಯೊ ಟೆಕ್ನಾಲಜಿ, ಬಯೊ ಕೆಮಿಸ್ಟ್ರಿ, ಮೈಕ್ರೊ ಬಯಾಲಜಿ, ಇಲೆಕ್ಟ್ರಾನಿಕ್ಸ್ (ವಿದ್ಯುನ್ಮಾನಶಾಸ್ತ್ರ), ಗಣಕ ಯಂತ್ರ ವಿಜ್ಞಾನ, ಸೋಷಿಯಲ್ ವರ್ಕ್, ಕಮ್ಮ್ಯೂನಿಕೇಶನ್ ಮತ್ತು ಜರ್ನಲಿಸಮ್, ಹಾಗೂ ಯು ಜಿ ಸಿ ಪ್ರಾಯೋಜಿತ ಕಾರ್ಯಕಾರಿ ಇಂಗ್ಲಿಷ್ ಭಾಷೆಯಲ್ಲಿ ಬೋಧಿಸಲಾಗುವ ವೃತ್ತಿಪರ ಪಠ್ಯವಿಷಯಗಳು, ಈ ಮುಂತಾದ ನವನವೀನ, ಕುತೂಹಲಕರ ಹಾಗೂ ಸಮಕಾಲೀನ ಪಠ್ಯ ವಿಷಯಗಳ ಒಟ್ಟೊಟ್ಟಿಗೆ ಸಾಂಪ್ರದಾಯಿಕ ಪಠ್ಯ ವಿಷಯಗಳೂ ಅಸ್ತಿತ್ವದಲ್ಲಿವೆ. ಇವೆಲ್ಲದರೊಂದಿಗೆ ವ್ಯವಹಾರ ಆಡಳಿತ ಸ್ನಾತಕ ಪದವಿ (ಬ್ಯಾಚೆಲರ್ ಆಫ್ ಬಿಸ್ನೆಸ್ ಅಡ್ಮಿನಿಸ್ಟ್ರೇಶನ್), ಕಂಪ್ಯೂಟರ್ ಅಪ್ಲಿಕೇಶನ್ಸ್ ಸ್ನಾತಕ ಪದವಿ, ಬ್ಯಾಚೆಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಬಿ ಸಿ ಎ), ಬ್ಯಾಚೆಲರ್ ಆಫ್ ಟೂರಿಸಮ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್ (ಬಿ ಟಿ ಹೆಚ್ ಎಮ್), ಮತ್ತು ಬಯೊ ಟೆಕ್ನಾಲಜಿ, ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಇಲೆಕ್ಟ್ರಿಕ್ ಮತ್ತು ಇಲೆಕ್ಟ್ರಾನಿಕ್ ಎಕ್ವಿಪ್‍ಮೆಂಟ್ ಮೈಂಟೆನೆನ್ಸ್, ಮತ್ತು ಕಂಪ್ಯೂಟರ್ ನೆಟ್ ವಕಿರ್ಂಗ್ ಈ ಮುಂತಾದ ಯು ಜಿ ಸಿ ವತಿಯಿಂದ ಪೂರಕ ಪಡಿಸಲ್ಪಟ್ಟಿರುವ ಪಠ್ಯ ವಿಷಯಗಳೂ ಸೇರ್ಪಡೆಯಾಗಿವೆ.
ಸ್ನಾತಕ ಪದವಿ ಮಟ್ಟದಲ್ಲಿ ಸಂತ ಫಿಲೋಮಿನ ಕಾಲೇಜು, ಬಿ.ಎ., ಬಿ.ಎಸ್ಸಿ., ಬಿ.ಕಾಮ್., ಬಿಬಿಎ, ಬಿಎಸ್‍ಡಬ್ಲ್ಯೂ, ಬಿಸಿಎ, ಬಿಟಿಹೆಚ್‍ಎಮ್ ಹಾಗೂ ಹೆಲ್ತ್ ಕೇರ್ ಟೆಕ್ನಾಲಜಿ, ಮೀಡಿಯ ಮತ್ತು ಎಂಟರ್ಟೈನ್ ಮೆಂಟ್ ಪದವಿ ಗಳನ್ನು ನೀಡುತ್ತದೆ. ಈ ಪದವಿಗಳಷ್ಟೇ ಅಲ್ಲದೆ, ರಸಾಯನಶಾಸ್ತ್ರ (ಕೆಮಿಸ್ಟ್ರಿ), ಭೌತ ಶಾಸ್ತ್ರ/ಫಿಸಿಕ್ಸ್, ಗಣಕ ವಿಜ್ಞಾನ/ಕಂಪ್ಯುಟರ್ ಸೈನ್ಸ್, ಸಾಮಾಜಿಕ ಕಾರ್ಯ/ಸೋಶಿಯಲ್ ವರ್ಕ್, ವಾಣಿಜ್ಯ/ಕಾಮರ್ಸ್, ಆಂಗ್ಲಭಾಷೆ/ಇಂಗ್ಲಿಷ್, ಸಂವಹನ ಮತ್ತು ಪತ್ರಿಕೋದ್ಯಮ/ಕಮ್ಯುನಿಕೇಶನ್ ಮತ್ತು ಜರ್ನಲಿಸಂ, ಅರ್ಥ ಶಾಸ್ತ್ರ/ಎಕನಾಮಿಕ್ಸ್, ಸಮಾಜ ಶಾಸ್ತ್ರ/ಸೋಶಿಯಾಲಜಿ, ಗಣಿತ ಶಾಸ್ತ್ರ/ಮ್ಯಾಥೆಮ್ಯಾಟಿಕ್ಸ್, ಕ್ರಿಶ್ಚಿಯನ್ ಧರ್ಮ/ಕ್ರಿಸ್ಟಿಯಾನಿಟಿ ಮತ್ತು ಪಾವಿತ್ರ್ಯ ಆಧ್ಯಾತ್ಮಿಕತೆ/ಹೋಲಿಸ್ಟಿಕ್ ಸ್ಪಿರಿಚ್ವಾಲಿಟಿ, ಈ ಪಠ್ಯ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನೂ ಇಲ್ಲಿ ನೀಡಲಾಗುತ್ತದೆ. ಅತ್ಯುನ್ನತ ಮಟ್ಟದ ಮೂಲ ವ್ಯವಸ್ಥೆಗಳಿಂದ ಕೂಡಿರುವ ಈ ಕಾಲೇಜಿನ ಗ್ರಂಥಾಲಯವು ಮುದ್ರಿತ ಪುಸ್ತಕಗಳ ಜೊತೆಗೆ ಡಿಜಿಟಲ್ ವ್ಯವಸ್ಥೆಯನ್ನು ಹೊಂದಿರುತ್ತದೆ. ಬಹುತೇಕ ತರಗತಿಗಳಲ್ಲಿ ಎಲ್ ಸಿ ಡಿ ಪ್ರೊಜೆಕ್ಟರ್ ಅನ್ನು ಜೋಡಿಸಲಾಗಿರುತ್ತದೆ. ಕಾಲೇಜಿನ ಸಮಗ್ರ ಕ್ಷೇತ್ರಾವರಣವು ಒ ಎಫ್ ಸಿ ಜಾಲ ಜೋಡಣೆಯಿಂದ ಆವೃತ್ತವಾಗಿರುತ್ತದೆ. ವಿಶಾಲವಾದ ಆಟದ ಮೈದಾನಗಳು ಹಾಗೂ ಹೊಸದಾಗಿ ನಿರ್ಮಾಣಗೊಂಡಿರುವ ಒಳಾಂಗಣ ಕ್ರೀಡಾಂಗಣವನ್ನೂ ಈ ಕಾಲೇಜ್ ಹೊಂದಿರುತ್ತದೆ.
ಭಾರತ ದೇಶದ 19 ರಾಜ್ಯಗಳ ಹಾಗೂ ಪ್ರಪಂಚದ 32 ರಾಷ್ಟ್ರಗಳ ವಿದ್ಯಾರ್ಥಿ ಸಮುದಾಯವನ್ನು ಹೊಂದಿರುವ ಸೈಂಟ್ ಫಿಲೋಮಿನಾಸ್ ಕಾಲೇಜು ನಿಜಕ್ಕೂ ಒಂದು “ಜಾಗತಿಕ ಗ್ರಾಮ”. ಈ ಕಾಲೇಜಿನ ಕ್ಷೇತ್ರಾವರಣದಲ್ಲಿ ಬಹು ವೈವಿದ್ಯತೆಯುಳ್ಳ ಸಾಂಸ್ಕೃತಿಕ, ಧಾರ್ಮಿಕ ಮತ್ತು ಜನಾಂಗೀಯ ವೈವಿದ್ಯತೆ ಇದ್ದರೂ ಸಹ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿ ಸದಸ್ಯರು ಇಲ್ಲಿ ಸಾಮರಸ್ಯ ಭಾವನೆಯಿಂದ ಒಟ್ಟಾಗಿ ಇರುತ್ತಾರೆ
ಸಂತ ಫಿಲೋಮಿನ ಕಾಲೇಜು 2011 ನೇ ಇಸವಿಯಲ್ಲಿ ಸ್ವಯಂಮಾಧಿಕಾರ (ಸ್ವಾಯತ್ತತೆ) ಹೊಂದಿದ ಕಾಲೇಜಾಗಿ ಪರಿವರ್ತನೆಗೊಂಡಿತು. ಯು ಜಿ ಸಿ ಯಿಂದ ಈ ಸಂಸ್ಥೆಯು 2015 ಇಸವಿ ಏಪ್ರಿಲ್ ತಿಂಗಳ ಮೊದಲನೇ ತಾರೀಖಿನಿಂದ ‘ಕಾಲೇಜ್ ಆಫ್ ಎಕ್ಸೆಲೆನ್ಸ್’ (ಶ್ರೇಷ್ಠತೆಯ ಕಾಲೇಜು) ಎಂದು ಘೋಷಿಸಲ್ಪಟ್ಟಿತು. ಈ ಮಾನ್ಯತೆಯನ್ನು ಪಡೆದ ಭಾರತದ 14 ಹಾಗೂ ಕರ್ನಾಟಕ ರಾಜ್ಯದ 3 ಕಾಲೇಜ್ ಗಳಲ್ಲಿ ಸಂತ ಫಿಲೋಮಿನ ಕಾಲೇಜು ಒಂದಾಗಿರುವುದು ಈ ಸಂಸ್ಥೆಗೆ ಸಂದ ವಿಶೇಷ ಗೌರವ ಆಗಿರುತ್ತದೆ. ಉನ್ನತ ವಿದ್ಯಾಭ್ಯಾಸದ ಸಂಸ್ಥೆಗಳ ಕಾರ್ಯವನ್ನು ಮೌಲ್ಯಿಕರಿಸಿ ಮಾನ್ಯತೆ ನೀಡಿರುಡುವ ದೇಶದ ಉನ್ನತ ಸಂಸ್ಥೆ ಯಾದ ನ್ಯಾಕ್ ಈ ಕಾಲೇಜಿಗೆ ಮೊದಲ ಆವರ್ತದಲ್ಲಿ ಎ+ ಮಾನ್ಯತೆಯನ್ನು ಹಾಗೂ ಎರಡನೇ ಆವರ್ತದಲ್ಲಿ 4.0 ಅಂಕಗಳ ಮಾಪನದಲ್ಲಿ ‘ಎ’ ಶ್ರೇಣಿಯೊಂದಿಗೆ 3.58 ಸಿಜಿಪಿಎ ನೀಡಿ ಧೃಢೀಕರಿಸಿರುತ್ತದೆ.
ಸಂತ ಫಿಲೋಮಿನ ಕಾಲೇಜು ತನ್ನ ಇತಿಹಾಸದಲ್ಲಿ ತಾನು ನಡೆದು ಬಂದ ಪಥದಲ್ಲಿ ಹಲವಾರು ವಿಶಿಷ್ಟ ಸೂಚಕಗಳನ್ನು ಸ್ಥಾಪಿಸುತ್ತಾ ಅತಿ ವೇಗದ ಗತಿಯಲ್ಲಿ ಎಲ್ಲಾ ಮಹತ್ವಪೂರ್ಣ ಘಟ್ಟಗಳನ್ನು ದಾಟಿ ಮುಂದುವರಿಯುತ್ತಿದ್ದು, ಶೀಘ್ರದಲ್ಲೇ ತಾನೊಂದು ವಿಶ್ವವಿದ್ಯಾಲಯ ಆಗುವತ್ತ ತನ್ನನ್ನು ಸಜ್ಜುಗೊಳಿಸಿಕೊಳ್ಳುತ್ತಿದೆ.