Back

ಕಥೋಲಿಕ ಮೈಸೂರು ಧರ್ಮಕ್ಷೇತ್ರ ಆರಂಭಿಸಿದ ಹಲವಾರು ಸಂಸ್ಥೆಗಳನ್ನು ನಡೆಸಲು, ನಿರ್ವಹಿಸಲು ಮತ್ತು ಸುಸಂಘಟಿತವಾಗಿಸಲು ನಿಯೋಜನೆಗೊಂಡ ಮೈಸೂರು ಡಯೊಸಿಸನ್ ಎಜ್ಯುಕೇಶನಲ್ ಸೊಸೈಟಿ ಒಂದು ನೋಂದಾಯಿತ ಸಂಸ್ಥೆಯಾಗಿರುತ್ತದೆ
ಕರ್ನಾಟಕದ ಕುಗ್ರಾಮಗಳಿಂದ ಇಡಿದು ಎಲ್ಲಾ ಮೂಲೆಗಳಲ್ಲೂ ಶೈಕ್ಷಣಿಕ ಇಲಾಖೆಗಳ ಮೂಲ ಉದ್ದೇಶಗಳನ್ನು ಪ್ರಚಾರ ಮಾಡುತ್ತಿರುವ ಅನೇಕ ಪ್ರಸಿದ್ಧ ಕ್ಯಾಥೊಲಿಕ್ ಎಜ್ಯುಕೇಶನಲ್ ಸೊಸೈಟಿಗಳಲ್ಲಿ ಇದೂ ಒಂದಾಗಿರುತ್ತದೆ. 1966 ನೇ ಇಸವಿಗಿಂತಲೂ ಮೊದಲೆ ಅಂದರೆ ಮೈಸೂರಿನ ಡಯೊಸಿಸನ್ ಎಜ್ಯುಕೇಶನಲ್ ಸೊಸೈಟಿಯು ನೊಂದಾಯಿತಗೊಳ್ಳುವ ಮೊದಲೆ ಅನೇಕ ಸಂಸ್ಥೆಗಳು ನಮ್ಮ ಈ ಧರ್ಮಕ್ಷೇತ್ರದಿಂದ ಆರಂಭವಾಗಿ ಅದರ ನೇರ ಆಡಳಿತಕ್ಕೆ ಒಳಪಟ್ಟಿದ್ದವು.

ಪ್ರಸಕ್ತವಾಗಿ, ಎಮ್ ಡಿ ಇ ಎಸ್ ಕರ್ನಾಟಕದ 4 ಜಿಲ್ಲೆಗಳಾದ ಮೈಸೂರು, ಮಂಡ್ಯ, ಕೊಡಗು ಮತ್ತು ಚಾಮರಾಜನಗರ, ಇವುಗಳಲ್ಲಿ ಶಿಶುವಿಹಾರಗಳಿಂದ ಮೊದಲ್ಗೊಂಡು ಸ್ನಾತಕೋತ್ತರ ಪದವಿಗಳ ಮಟ್ಟದವರೆಗೂ ಶಿಕ್ಷಣ ನೀಡುವ 130 ಸಂಸ್ಥೆಗಳ ಆಡಳಿತವನ್ನು ನಿರ್ವಹಿಸುತ್ತಿದೆ. ಈ ವರ್ಷ ಅಮೃತ ಮಹೋತ್ಸವದ ಸಂಭ್ರಮದ ಶುಭಘಳಿಗೆಯಲ್ಲಿ ಸಂತ ಫಿಲೋಮಿನ ಕಾಲೇಜು ಎಮ್ ಡಿ ಇ ಎಸ್ ಸಂಸ್ಥೆಯು ನಗರಗಳಲ್ಲಿ ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ ನಿಷ್ಠಾವಂತ ಸೇವೆಯನ್ನು ಶ್ಲಾಘಿಸುತ್ತದೆ. ನಮ್ಮ ಹಳೆಯ ವಿದ್ಯಾರ್ಥಿಗಳು ಹಲವಾರು ಎಲ್ಲೆಗಳನ್ನು ಹಾಗೂ ಗಡಿಗಳನ್ನು ದಾಟಿ, ವಿವಿಧ ಕ್ಷೇತ್ರಗಳಲ್ಲಿ ತಮ್ಮದೆ ಆದ ಅಳಿಸಲಾಗದಂತಹ ಗುರುತನ್ನು ಮೂಡಿಸಿರುತ್ತಾರೆ.
2016 ರಲ್ಲಿ ಹೊಸದಾಗಿ ತೆರೆದ ಈ ಶಿಕ್ಷಣ ಸಂಸ್ಥೆಗಳು ನಮಗೆ ಅತ್ಯಂತ ಹೆಮ್ಮೆ ಹಾಗೂ ತೃಪ್ತಿ ತರುವ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳು ಇಂತಿವೆ – ಸಂತ ಜೋಸೆಫರ ಮಹಿಳಾ ಕಾಲೇಜು/ಸೈಂಟ್ ಜೋಸೆಫ್ಸ್ ಕಾಲೇಜ್ ಫಾರ್ ವಿಮೆನ್ (ಕಾಮರ್ಸ್ ಮತ್ತು ಆಟ್ರ್ಸ್), ಸಾತಗಳ್ಳಿ; ಸಂತ ಜೋಸೆಫರ ಸಂಜೆಯ ಕಾಲೇಜು/ಸೈಂಟ್ ಜೋಸೆಫ್ಸ್ ಈವ್ನಿಂಗ್ ಕಾಲೇಜ್, ಜಯಲಕ್ಷ್ಮಿಪುರಮ್ ಹಾಗೂ ಇನ್ನೂ ಹಲವಾರು ಸಂಸ್ಥೆಗಳನ್ನು ಆರಂಭಿಸಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ.