ಪ್ರಾಂಶುಪಾಲರ ಸಂದೇಶ
“ಶಿಕ್ಷಣದ ಕಾರ್ಯವೆಂದರೆ, ತೀವ್ರವಾಗಿ ಮತ್ತು ವಿಮರ್ಶನಾತ್ಮಕವಾಗಿ ಯೋಚಿಸಲು ಕಲಿಸುವುದು. ಬುದ್ದಿಮತ್ತೆ ಜೊತೆಗೆ ವ್ಯಕ್ತಿತ್ವ – ಅದು ನಿಜವಾದ ಶಿಕ್ಷಣದ ಗುರಿ. ” – ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್.
ಮೈಸೂರಿನ ಸೇಂಟ್ ಫಿಲೋಮಿನಾ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ನಮ್ಮ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ, ಸವಾರ್ಂಗೀಣ ಶಿಕ್ಷಣವನ್ನು, ಶಿಕ್ಷಣ ಮತ್ತು ಪಠ್ಯಕ್ರಮದ ಹಂತಗಳಲ್ಲಿ ನೀಡಬೇಕೆಂಬ ನಿಯಮಕ್ಕೆ ನಮ್ಮ ಕಾಲೇಜು ಮತ್ತು ಸಿಬ್ಬಂದಿಗಳು ತೋರುವ ಬದ್ಧತೆಯ ಬಗ್ಗೆ ನಾನು ಬಹಳ ಸಂತುಷ್ಠನಾಗಿದ್ದೇನೆ.
ಶಿಕ್ಷಣವು ಜ್ಞಾನದ ಕೊರತೆಯನ್ನು ನಿರ್ಮೂಲ ಮಾಡುತ್ತದೆ ಮತ್ತು ವಿಷಯಗಳನ್ನು ವಿವರಿಸುವುದರ ಮೂಲಕ ಅದು ವ್ಯಕ್ತಿಯನ್ನು ನೀತಿವಂತ ಚಿಂತನೆ ಮತ್ತು ಕಾರ್ಯಕ್ಕೆ ಧೈರ್ಯ ತುಂಬುತ್ತದೆ, ವ್ಯಕ್ತಿಗಳಿಗೆ ಅಧಿಕಾರ ನೀಡುತ್ತದೆ ಮತ್ತು ಒಬ್ಬರ ಆಲೋಚನಾ ಲಹರಿಯನ್ನು ವಿಸ್ತರಿಸುತ್ತದೆ. ಇದು ಸಮಾಜವನ್ನು ಚೈತನ್ಯಗೊಳಿಸುತ್ತದೆ ಮತ್ತು ಜೀವನವನ್ನು ಗೌರವ ಮತ್ತು ಪ್ರಶಂಸೆಯೊಂದಿಗೆ ಜೀವಿಸಲು ಶಕ್ತಗೊಳಿಸುತ್ತದೆ.
ನಮ್ಮ ದೃಷ್ಟಿ ಮತ್ತು ಧ್ಯೇಯವನ್ನು ನಿಜವಾಗಿಸಲು, ನಮ್ಮ ವಿದ್ಯಾಸಂಸ್ಥೆ, ಸಮಾಜ ಮತ್ತು ಪ್ರಪಂಚದಲ್ಲಿ ವಿದ್ಯಾಕ್ಷೇತ್ರದ ಸುಧಾರಣೆಗೆ ಸಾಧ್ಯವಾದಷ್ಟು ಪ್ರಯತ್ನಗಳನ್ನು ಮಾಡಲು ನಾವು ಸಜ್ಜಾಗಿದ್ದೇವೆ. ಶಿಕ್ಷಣವು ಸಾಮಾಜಿಕ ಪರಿವರ್ತನೆಯ ಪರಿಣಾಮಕಾರಿ ಮಾಧ್ಯಮವಾಗಿದೆ ಎಂಬುದನ್ನು ನಾವು ನಂಬಿದ್ದೇವೆ. ನಮ್ಮ ವಿದ್ಯಾರ್ಥಿಗಳ ಸುಂದರ ಮತ್ತು ಯಶಸ್ವಿ ವೃತ್ತಿಜೀವನವನ್ನು ಮತ್ತು ಅವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳನ್ನು ಗಮನಿಸುತ್ತಾ ನಾವು ಉತ್ಸಾಹಗೊಳ್ಳುತ್ತೇವೆ. ನಾವು ಆಧುನಿಕ ಭಾರತವನ್ನು ರೂಪಿಸುತ್ತಿರುವ ಇಂತಹ ಪ್ರಶಂಸನೀಯ ಸಂಸ್ಥೆಯ ಭಾಗವಾಗಿದ್ದೇವೆ ಎಂಬುದು ನಮ್ಮ ಹೆಗ್ಗಳಿಕೆ ಎಂದು ಭಾವಿಸುತ್ತೇವೆ.
ಪ್ರಿಯ ವಿದ್ಯಾರ್ಥಿಗಳೇ, ಇಂದು ನಾವು ಹೇಳಬಹುದು, “ಕಠಿಣ ಪರಿಶ್ರಮ ಫಲ ನೀಡುತ್ತದೆ” ನಿಮ್ಮ ಪದವಿಯನ್ನು ಮುಂದುವರಿಸಲು ನೀವು ಮಾಡುವ ಪ್ರಯತ್ನವು ನಿಮಗೆ ಹೆಚ್ಚು ಗಳಿಸಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೆಚ್ಚಿನ ಸ್ಥಿರತೆಯನ್ನು ತಂದುಕೊಡುತ್ತದೆ. ನಮ್ಮ ಸರ್ವತೋಮುಖ ಪದವಿ ಕಾರ್ಯಕ್ರಮವು ಸ್ವಂತವಾದ ಅನುಭವಗಳನ್ನು ಗಳಿಸಲು ಅವಕಾಶ ನೀಡುತ್ತದೆ; ಅದು ತರಗತಿಯ ಕಾರ್ಯಯೋಜನೆಗಳ ಮೂಲಕವಾಗಲಿ, ಯೋಜನೆಗಳ ಮೂಲಕವಾಗಲಿ ಅಥವಾ ಬಾಹ್ಯಶಿಕ್ಷಣಗಳ ಮೂಲಕವಾಗಲಿ, ಅನುಭವವು ಜ್ಞಾನವನ್ನು ಸೃಷ್ಟಿಸುತ್ತದೆ. ಒಂದು ಶೈಕ್ಷಣಿಕ ವರ್ಷದಲ್ಲಿ ನೀವು ಪಡೆಯುವ ಜ್ಞಾನವು ಜೀವನವನ್ನೇ ಬದಲಾಯಿಸಬಹುದು.
ಆನ್‍ಲೈನ್ ಕಲಿಕೆಯೊಂದಿಗೆ ಕಾಲೇಜು ವಿದ್ಯಾಭ್ಯಾಸ ಈ ವರ್ಷ ವಿಭಿನ್ನವಾಗಿ ಕಾಣಿಸಬಹುದು ಮತ್ತು ಬಹುಶಃ ಒಂದು ಹಂತದಲ್ಲಿ ಆನ್‍ಲೈನ್-ಆಫ್‍ಲೈನ್ ಕಲಿಕೆಯ ಸಮ್ಮಿಲನ ಮಾದರಿಗೆ ಮರಳಬಹುದು. ಸಂಸ್ಥೆಯ ಲಾಂಛನದಲ್ಲಿ “ಜ್ಞಾನದ ಮೂಲಕ ಪ್ರೀತಿ” ಎಂಬ ನಮ್ಮ ಧ್ಯೇಯವನ್ನು ವ್ಯಕ್ತಪಡಿಸಿರುವಂತೆ ನಮ್ಮ ವಿದ್ಯಾರ್ಥಿಗಳಿಗೆ, ಕುಟುಂಬಗಳಿಗೆ ಮತ್ತು ಸಮುದಾಯಕ್ಕೆ ನಾವು ತೋರುವ ಕಾಳಜಿ, ಸಹಾನುಭೂತಿ ಮತ್ತು ಸಮರ್ಪಣಭಾವದೊಂದಿಗೆ ಸೇವೆ ಸಲ್ಲಿಸುವ ನಮ್ಮ ಬದ್ಧತೆಯು ಎಂದಿಗೂ ಬದಲಾಗುವುದಿಲ್ಲ.
ಈ 76 ವರ್ಷಗಳಲ್ಲಿ ಕಾಲೇಜು ಗೌರವವನ್ನು ಪಡೆದಿರುವುದು ಶಿಕ್ಷಕರು, ಪೆÇೀಷಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸಮರ್ಪಣೆ ಮತ್ತು ನಿಸ್ವಾರ್ಥ ಬದ್ಧತೆಯಿಂದಾಗಿ. ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಮತ್ತು ಕುಟುಂಬಗಳ ಬೆಂಬಲದೊಂದಿಗೆ, ನಮ್ಮ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮತ್ತು ಸೃಜನಾತ್ಮಕವಾಗಿ ಅನ್ವೇಷಣೆ, ಜ್ಞಾನಪ್ರದರ್ಶನ ಮತ್ತು ಉತ್ಕøಷ್ಟತೆಯಲ್ಲಿ ಹೊರಹೊಮ್ಮುತ್ತಿದ್ದಾರೆ.
ಹಿಂದಿನ ಮತ್ತು ಇಂದಿನ ಶಿಕ್ಷಕರ ಬದ್ಧತೆ ಮತ್ತು ಪರಹಿತಚಿಂತನೆಯ ಸೇವೆಯನ್ನು ನಾನು ಪ್ರಶಂಸಿಸುತ್ತೇನೆ ಮತ್ತು ಶಿಕ್ಷಣ ಮತ್ತು ಅದರ ವಿಶಿಷ್ಟ ಗುಣಗಳು, ಗುರಿಗಳು ಮತ್ತು ಉದ್ದೇಶಗಳನ್ನು ಹರಡುವ ಅದ್ಭುತ ಕಾರ್ಯಕ್ಕೆ ಅವರು ನೀಡಿದ ಕೊಡುಗೆಗಾಗಿ ಅವರೆಲ್ಲರಿಗೂ, ಉತ್ತಮ ಭವಿಷ್ಯ, ಶಾಂತಿ ಮತ್ತು ಸಮೃದ್ಧಿಯನ್ನು ಹಾರೈಸುತ್ತೇನೆ.
ಸರ್ವರಿಗೂ ಸುಖವಿರಲಿ ಎಂದು ಆಶಿಸುತ್ತೇನೆ