Back

 

ಆತ್ಮೀಯರೇ
ನಿಮ್ಮನ್ನು ನಮ್ಮ ಕಾಲೇಜಿನ ಅಂತರ್ಜಾಲ ತಾಣಕ್ಕೆ  www.stphilos.ac.in. ಸ್ವಾಗತಿಸಲು ನನಗೆ ಸಂತೋಷ ಹಾಗೂ ಹೆಮ್ಮೆಯಾಗುತ್ತಿದೆ. ಪ್ರಧಾನ ವಿಧ್ಯಾಸಂಸ್ಥೆ ಯಾಗಿರುವ ಸಂತ ಫಿಲೋಮಿನ ಕಾಲೇಜು ಮೈಸೂರು, ವ್ಯಾಸಂಗ ವಿಷಯಗಳಲ್ಲಿ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಹೋನ್ನತ ಸಾಧನೆ ಮಾಡಿರುವ ಪ್ರಖ್ಯಾತಿಯನ್ನು ಹೊಂದಿರುತ್ತದೆ. ಇದರೊಂದಿಗೆ, ಹಿಂದಿನಿಂದ ಉನ್ನತ ಶಿಕ್ಷಣದಲ್ಲಿ ಮಹತ್ವ ಸಾಧನೆಗಳನ್ನು ಸಾಧಿಸಿರುವ ದೀರ್ಘ ಇತಿಹಾಸವನ್ನು ಹೊಂದಿರುವ ಈ ನಮ್ಮ ಕಾಲೇಜು ಧೃಢವಿಶ್ವಾಸ, ಹೆಮ್ಮೆ ಮತ್ತು ಉತ್ಸಾಹದಿಂದ ಮುನ್ನಡೆಯುತ್ತಿದೆ.
ಉತ್ಕೃಷ್ಟ ಸರ್ವತೋಮುಖ ಶೈಕ್ಷಣಿಕ ಬೆಳವಣಿಗೆಯ ಕುರಿತು ಕಾಲೇಜಿನ ಸಿಬ್ಬಂದಿ ವರ್ಗಕ್ಕೆ ಇರುವ ಬಧ್ಧತೆಯನ್ನು ಗಮನಿಸಿ ನಾನು ಅದರಿಂದ ಬಹಳ ಪ್ರಭಾವಿತನಾಗಿದ್ದೇನೆ. ಸಂಪೂರ್ಣ ಸ್ವಯಂಮಾಧಿಕಾರದ ಮಾನ್ಯತೆಯನ್ನು ಕಳೆದ 6 ವರ್ಷಗಳಿಂದ ಅನುಭೋಗಿಸುತ್ತಿರುವ ನಮ್ಮ ಕಾಲೇಜಿಗೆ ಆ ಮಾನ್ಯತೆಯನ್ನು ಇನ್ನೂ 5 ವರ್ಷಗಳ ಅವಧಿಯವರೆಗೆ (2017-18 ರಿಂದ 2021-22ರ ವರೆಗೆ) ದೀರ್ಘೀಕರಣ ಮಾಡಲಾಗಿದೆ. ಈಗ, (choice based credit system) ಸಿಬಿಸಿಎಸ್ ವ್ಯವಸ್ಥೆಯನ್ನು ಸ್ನಾತಕ ಪದವಿಯ ಮಟ್ಟದಲ್ಲಿ ಎಲ್ಲಾ ವಿಷಯಗಳಲ್ಲಿ ಕಾರ್ಯಗತಗೊಳಿಸಲಾಗಿದೆ, ಮತ್ತು ಮೂರನೇ ಆವರ್ತದ ‘ನ್ಯಾಕ್’ (ಎನ್ ಎ ಎ ಸಿ) ಮಾನ್ಯತೆ ಪಡೆಯಲು ಸಿಧ್ಧತೆಗಳು ಅತಿ ಬಿರುಸಿನಿಂದ ನಡೆಯುತ್ತಿವೆ.
ನಮ್ಮ ಕಾಲೇಜಿನಲ್ಲಿ ಒದಗಿಸುವ ಈಗಾಗಲೇ ಅತ್ಯುತ್ತಮವೆಂದೆನಿಸಿಕೊಂಡಿರುವ ಸೌಲಭ್ಯಗಳ ಅಭಿವರ್ಧನಾ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿರುತ್ತದೆ. ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ಬೆಳವಣಿಗೆಗಾಗಿ ಅವಕಾಶಗಳನ್ನು ಮತ್ತು ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ಅನೇಕ ವಿದ್ಯಾರ್ಥಿಗಳು ಪಠ್ಯ ವಿಷಯಗಳಲ್ಲಿ, ಸಹ-ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಮ್ಮ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ಘನತೆಯನ್ನು ಎತ್ತಿ ಹಿಡಿಯಲು ಹಾಗೂ ಅದರ ಪತಾಕೆಯು ದಿಗಂತದಲ್ಲಿ ಎತ್ತರಕ್ಕೆ ಯಾವಾಗಲೂ ಹಾರಾಡುತ್ತಲೇ ಇರುವಂತೆ ಶ್ರಮಿಸುವರೆಂದು ನನಗೆ ಗಾಢನಂಬಿಕೆ ಇದೆ.
ಕಾಲೇಜಿಗೆ ಸಂಭಂದಿಸಿದ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ನಡುವೆ ಸ್ನೇಹಪರ ಮತ್ತು ಹೊಂದಾಣಿಕೆಯ ವಾತಾವರಣವನ್ನು ಸೃಷ್ಟಿಸಿ “ಸದಾ ತೆರೆದಿರುವ ಬಾಗಿಲು” ನ ಮೂಲಕ ಸವಾಲುಗಳು ಬಹಿರಂಗವಾಗಿ ಚರ್ಚಿಸಲ್ಪಟ್ಟು ಆರೋಗ್ಯಕರ ಪರಿಹಾರವನ್ನು ಹೊಂದಬಹುದೆಂದು ನಾನು ವೈಯಕ್ತಿಕವಾಗಿ ನಂಬಿದ್ದೇನೆ
ನೀವು ನಮ್ಮ ಜಾಲತಾಣಕ್ಕೆ ಭೇಟಿಕೊಡುವಿರೆಂದು ಆಶಿಸುತ್ತೇನೆ. ನಮ್ಮನ್ನು ಸಂಪರ್ಕಿಸಲು ನೀವು ಇಚ್ಛಿಸಿದಲ್ಲಿ ದಯವಿಟ್ಟು ಜಾಲತಾಣದ ‘ಸಂಪರ್ಕ ಪುಟ’ಕ್ಕೆ ಹೋಗಿ ವಿವರಗಳನ್ನು ಪಡೆಯಿರಿ.
ವಂದನೀಯ. ಡಾ. ಬರ್ನಾರ್ಡ್ ಪ್ರಕಾಶ್ ಬರ್ನಿಸ್.
ರೆಕ್ಟರ್ (ನಿರ್ವಹಣಾಧಿಕಾರಿ)