Back

ಸ್ನಾತಕೋತ್ತರ ಪಠ್ಯವಿಷಯಗಳು.
ಅಡ್ಡಿಗಳನ್ನು ಭೇದಿಸಿ, ಸರಿಸಿ ಕಾರ್ಯಾರಂಭ ಮಾಡುವ ಯಾವುದೆ ಸಮುದಾಯದ ಕಥನವು ಆ ಸಮುದಾಯದ ಮುಂದಾಳುಗಳ ಮತ್ತು ಅಸಾಧಾರಣ ವ್ಯಕ್ತಿಗಳ ಕಥಾನಕವೂ ಆಗಿರುತ್ತದೆ. ನಮ್ಮ ಸ್ಥಾಪಕರು ಧರ್ಮವಿಧಿಯ ಪ್ರಜ್ಞೆಯಿಂದ ಪ್ರೇರಿತರಾಗಿದ್ದರಿಂದ ಅವರಿಗೆ ಭವಿಷ್ಯದಲ್ಲಿ ವೃತ್ತಿ ಅವಕಾಶಗಳಿಗಾಗಿ ಮಾತ್ರ ಶಿಕ್ಷಣವು ಒಂದು ಹೂಡಿಕೆ ಆಗಿರದೆ ಶಿಕ್ಷಣವು ಆತ್ಮಸಾಕ್ಷಾತ್ಕಾರಕ್ಕೆ ಒಂದು ಮಾರ್ಗವೆಂದೂ ಮತ್ತು ವಿವೇಚನಾಯುಕ್ತ ಜೀವನಕ್ಕೆ ಒಂದು ಮಾರ್ಗದರ್ಶಿ ಎಂದು ಅವರ ನಂಬಿಕೆಯಾಗಿತ್ತು.
ಈ ಪ್ರವರ್ತಕರು ಶಿಕ್ಷಣ ಸಂಸ್ಥೆಯ ಅಡಿಪಾಯಗಳನ್ನು ಸ್ಥಾಪಿಸಿ, ಅವರ ಕೈಗಳಿಂದ ನಿರ್ಮಾಣಗೊಂಡ ಈ ಕಲಿಕೆಯ ದೇಗುಲವು ಹಲವು ವರ್ಷಗಳಲ್ಲಿ ಬೆಳೆದು, ಭಾರತ ದೇಶದ ಮೂಲೆ ಮೂಲೆಗಳಿಂದ ಹಾಗೂ ಹಲವು ಸಮುದ್ರಗಳ ಆಚೆಯಿಂದ ಕೂಡ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ. ಭಾರತದ ೨೩ ರಾಜ್ಯಗಳಿಂದ ಭಾರತೀಯ ವಿದ್ಯಾರ್ಥಿಗಳು ನಮ್ಮಲ್ಲಿರುವುದಲ್ಲದೆ, ೨೦ ಬೇರೆ ಬೇರೆ ರಾಷ್ಟ್ರೀಯತೆ ಹೊಂದಿರುವ ವಿದ್ಯಾರ್ಥಿಗಳೂ ಇರುವರು. ಇವರೆಲ್ಲರೂ ಒಂದಾಗಿ ಸಮ್ಮಿಳಿತ ಸಂಸ್ಕೃತಿಯ ಪ್ರತೀಕವಾಗಿರುವ ನಮ್ಮ ದೇಶದಸಂಕ್ಷೇಪ ರೂಪವನ್ನು ಪ್ರತಿನಿಧಿಸುತ್ತಾರೆ.
ಈ ವಿದ್ಯಾರ್ಥಿಗಳು ಮೊದಲು ಸಂಪ್ರದಾಯಬಧ್ಧ ವಿಷಯಗಳನ್ನು ಕಲಿಯಲು ಬಂದು ನಂತರದಲ್ಲಿ ಇನ್ನೂ ಹೆಚ್ಚು ಪ್ರಚಲಿತ ಶಿಕ್ಷಣ ವಿಷಯಗಳ ಅಧ್ಯಯನ ಮಾಡುತ್ತಾರೆ. ವಿಷಯಗಳನ್ನು ಕಲಿಯುವುದರೊಂದಿಗೆ, ಅವರು ಹಾಡಲು ಹಾಗೂ ನರ್ತಿಸಲೂ ಬರುತ್ತಾರೆ. ಹಾಗೆಯೇ – ಹಾಕಿ, ಕ್ರಿಕೆಟ್, ಫುಟ್ ಬಾಲ್, ವಾಲಿ ಬಾಲ್, ಬಾಸ್ಕೆಟ್ ಬಾಲ್, ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ – ಈ ಎಲ್ಲಾ ಆಟಗಳನ್ನೂ ಆಡಲು ಬರುತ್ತಾರೆ. ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯು ಕಾಲೇಜಿನ ವಾರ್ಷಿಕ ಕ್ರೀಡಾ ಕೂಟದಲ್ಲಿ ಎಲ್ಲರ ಕಣ್ಣಿಗೆ ಕಾಣುವಂತೆ ಮುಂದೆ ಬಂದು, ಅವರಲ್ಲಿ ಕೆಲವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಕೂಟಗಳಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸುತ್ತಾರೆ. ಈ ಕೆಳಗಿನ ಪಠ್ಯ ವಿಷಯಗಳಲ್ಲಿ ಸ್ನಾತಕ ಪದವಿಗಳು ಲಭ್ಯವಿರುತ್ತವೆ:
• ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ/ಎಮ್.ಎಸ್ಸಿ. ಕೆಮಿಸ್ಟ್ರಿ
• ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ/ಎಮ್.ಎ. ಎಕನಾಮಿಕ್ಸ್
• ಭೌತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ /ಎಮ್.ಎಸ್ಸಿ.ಫಿಸಿಕ್ಸ್
• ಗಣಕ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ /ಎಮ್.ಎಸ್ಸಿ. ಕಂಪ್ಯೂಟರ್ ಸೈನ್ಸ್
• ಜೀವರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ /ಎಮ್.ಎಸ್ಸಿ. ಬಯೊಕೆಮಿಸ್ಟ್ರಿ
• ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ /ಎಮ್.ಎಸ್ಸಿ ಮ್ಯಾಥಮ್ಯಾಟಿಕ್ಸ್
• ಸಮಾಜ ಕಾರ್ಯ ಸ್ನಾತಕೋತ್ತರ ಪದವಿ/ಎಮ್ ಎಸ್ ಡಬಲ್ಯೂ – ಮಾಸ್ಟರ್ ಆಫ್ ಸೋಶಿಯಲ್ ವರ್ಕ್
• ಆಂಗ್ಲ ಸಾಹಿತ್ಯ/ ಇಂಗ್ಲೀಷ್/ಎಮ್.ಎ. ಇಂಗ್ಲಿಷ್
• ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ /ಎಮ್.ಕಾಮ್.
• ಸಮಗ್ರ ಆಧ್ಯಾತ್ಮಿಕತೆ ಸ್ನಾತಕೋತ್ತರ ಪದವಿ /ಎಮ್.ಎ. ಹೋಲಿಸ್ಟಿಕ್ ಸ್ಪಿರಿಚ್ವಾಲಿಟಿ
• ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ /ಎಮ್.ಎ.   ಮಾಸ್ ಕಮ್ಯೂನಿಕೇಶನ್ ಹಾಗೂ ಜರ್ನಲಿಸಮ್